ಚಿತ್ರದುರ್ಗ ಅ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರೈತರ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಅವರ ಋಣ ತೀರಿಸುವುದು ತಮ್ಮ ಆದ್ಯ ಕರ್ತವ್ಯ, ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸಾಮಥ್ರ್ಯ ಮತ್ತು ಯೋಗ್ಯತೆ ತಮಗಿದೆ, ಅಧಿಕಾರ ಸಿಕ್ಕಾಗ ಸ್ವಾರ್ಥಕ್ಕಾಗಿ ಅಥವಾ ಸ್ವಂತಕ್ಕಾಗಿ ಕೆಲಸ ಮಾಡುವುದಿಲ್ಲ ಮೂರು ಜಿಲ್ಲೆಗಳಲ್ಲಿ ತಮ್ಮನ್ನು ಗೆಲ್ಲಿಸಿರುವ ಪುಣ್ಯಾತ್ಮರ ಕಷ್ಟದ ಸಮಯದಲ್ಲಿ, ವಿಶೇಷವಾಗಿ ಗ್ಯಾರೆಂಟಿ ಸ್ಕೀಮ್ ಸಂದರ್ಭದಲ್ಲಿ ಹೆಚ್ಚು ಮತ ನೀಡಿ ಗೆಲ್ಲಿಸಿರುವ ಜನರ ಋಣ ತೀರಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿ ಹಗಲು ರಾತ್ರಿ ಶ್ರಮಿಸುತ್ತಿರುವುದಾಗಿ ಶಾಸಕರಾದ ಡಾ.ಎಂ. ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿನ ಶಿವನಕೆರೆಯ ಪಂಪ್ ಸೆಟ್ ಆವರಣದಲ್ಲಿ ಭಾನುವಾರ ಭಾಗಿನ ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮ, ಅಥವಾ ಹಣಕಾಸಿನ ಅಡೆತಡೆಗಳಿಗೆ ಒಳಗಾಗದೆ, ತಮ್ಮ ಮನೆ ಮಗನಂತೆ ಹಗಲು ರಾತ್ರಿ ಶ್ರಮಿಸುವವರ ಋಣ ತೀರಿಸುವುದು ತಮ್ಮ ಧರ್ಮವೆಂದು ಅವರು ಯಾರೂ ಆತಂಕಪಡುವ ಅಗತ್ಯವಿಲ್ಲ ವೆಂದೂ, ಕಾಲುವೆಗಳಿಗೆ ನೀರು ಹರಿಸುವ ಕಾರ್ಯ ಹಾಗೂ ರೈತರಿಗೆ ಅನುಕೂಲವಾಗುವ ಹೊಸ ಹೊಸ ಯೋಜನೆಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿಯೂ ತಿಳಿಸಿದ ಅವರು. ಮುಂದಿನ ದಿನಗಳಲ್ಲಿ ರೈತರಿಗೆ ಬೇಕಾದ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಜನಪ್ರತಿನಿಧಿಗಳು ಮತ್ತು ಸಚಿವರಾಗುವ ಆಸೆಯಿಂದ ಬರುವವರು ಅಧಿಕಾರಕ್ಕೆ ಬಂದ ನಂತರ ತಾವು ಮಾಡಿದ ಕೆಲಸಗಳಿಗೆ ಜನರಿಂದ ಸರಿಯಾದ ಸ್ಪಂದನೆ ಸಿಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆ, ಪರೋಪಕಾರ ಮತ್ತು ಧರ್ಮ-ಕರ್ಮಗಳನ್ನು ಅರಿತುಕೊಂಡು ಸತ್ಕಾರ್ಯಗಳನ್ನು ಮಾಡಬೇಕು. ಕೆರೆಗೆ ನೀರು ಬರುವುದಕ್ಕೂ ಮುಂಚೆ ಪಂಪ್ ಹೌಸ್ ನಿರ್ಮಿಸಿ, ಕಡೆ ಮಟ್ಟದಲ್ಲಿರುವ ಕೊನೆಯ ಮನುಷ್ಯನಿಗೂ ಕುಡಿಯುವ ನೀರು ಸಿಗುವಂತೆ ಮತ್ತು ಎಲ್ಲರೂ ಸುಖವಾಗಿ ರಬೇಕೆಂಬ ಉದ್ದೇಶದಿಂದ ತಾನು ಶ್ರಮಿಸಿದ್ದಾಗಿ ಅವರು ತಿಳಿಸಿ ಯಾವುದೇ ರೀತಿಯ ವ್ಯಾಮೋಹ ಅಥವಾ ಸ್ವಾರ್ಥವಿಲ್ಲದೆ, ಕಷ್ಟದಲ್ಲಿರುವ ಕೊನೆಯ ವ್ಯಕ್ತಿಗೂ ಉಪಕಾರ ಮಾಡುವ ಹಾಗೂ ಧರ್ಮ-ಕರ್ಮಗಳನ್ನು ಪಾಲಿಸುವ ಗುಣವೇ ನಿಜವಾದ ಮನುಷ್ಯತ್ವ ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಹೊಣೆಗಾರಿಕೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿ, ಕ್ಷೇತ್ರದ ರೈತರ ಕೃಷಿ ಜಮೀನುಗಳು ಒಣಗದಂತೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದ್ದಾರೆ. ತಾಲೂಕಿನಾದ್ಯಂತ ಇರುವ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ನೀರು ಒದಗಿಸುವ ಪ್ರಮುಖ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ತಿಳಿಸಿ ಕೆರೆಗಳಿಗೆ ಅಗತ್ಯವಿರುವಷ್ಟು ನೀರನ್ನು ಸಮರ್ಪಕವಾಗಿ ತಲುಪಿಸಲು ಬದ್ಧವಿರುವುದಾಗಿದ್ದು, ಕ್ಷೇತ್ರದ ರೈತರ ಹಿತ ಹಾಗೂ ಕೃಷಿ ಜಮೀನುಗಳ ಒಳಿತಿಗಾಗಿ ತಾಲೂಕಿನ ಎಲ್ಲಾ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಿ, ನೀರಾವರಿ ಸೌಲಭ್ಯವನ್ನು ನಿರಂತರವಾಗಿ ಕಲ್ಪಿಸುವುದೇ ತಮ್ಮ ಪ್ರಮುಖ ಆದ್ಯತೆ ಹಾಗೂ ನಿರ್ಣಯವಾಗಿದೆ ಎಂದರು.
ಸರ್ಕಾರದ ಅನುದಾನ ಹಾಗೂ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಮತ್ತು ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜನ್ನು ಸುಧಾರಿಸುವ ನಿಟ್ಟಿನಲ್ಲಿ ಸಮಗ್ರ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಸಮಯವಿದ್ದು, ಸರ್ಕಾರದ ಅನುದಾನವನ್ನು ಸದುಪಯೋಗಪಡಿಸಿಕೊಂಡು ಹೋರಾಟದ ಮೂಲಕ ಕೆಲಸ ಮಾಡಲಾಗುವುದು 17.4 ಟಿಎಂಸಿ ನೀರನ್ನು ತುಂಗಾ ನದಿಯಿಂದ ಗಜನೂರು ಡ್ಯಾಮ್ ಮೂಲಕ ನೇರವಾಗಿ ಭದ್ರ ಪ್ರಾಜೆಕ್ಟ್‍ಗೆ ತಂದು ಹಂಚಿಕೆ ಮಾಡಲಾಗುವುದು ಗೊನೂರಿನಿಂದ ಇಲ್ಲಿಯವರೆಗಿನ ಮೂರು-ನಾಲ್ಕು ತಾಲೂಕುಗಳ ಕೆರೆಗಳು ಮುಂದಿನ ಎಂಟು-ಹತ್ತು ವರ್ಷಗಳಲ್ಲಿ ಸಂಪೂರ್ಣ ತುಂಬಿಕೊಳ್ಳಲಿವೆ. 17.4 ಟಿಎಂಸಿ ನೀರಿಗೆ ಸಂಬಂಧಿಸಿದಂತೆ ಎರಡು ಟವರ್‍ಗಳನ್ನು ನಿರ್ಮಿಸಿ ವೈರ್ ಎಳೆಯಲಾಗಿದ್ದು, ನಿಗದಿತ ಅವಧಿಯೊಳಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಕೆಲವು ಕಡೆಗಳಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದರೂ, ಎಲ್ಲ ಗ್ರಾಮಗಳಿಗೂ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಲು ಬದ್ಧರಾಗಿರುವುದಾಗಿ ತಿಳಿಸಿ ಕುಡಿಯುವ ನೀರಿನ ಯೋಜನೆಗಾಗಿ ಈಗಾಗಲೇ 367 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಎಲೆಕ್ಷನ್ ಒಳಗೆ ಎಲ್ಲಾ ಹಳ್ಳಿಗಳ ವಾಣಿವಿಲಾಸ ಸಾಗರದ ನೀರು ತಲುಪಲಿದೆ ಎಂದು ಭರವಸೆ ನೀಡಿ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಹಾಗೂ ಹತ್ತು ಗಂಟೆಗಳ ಕಾಲಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಭಾಜಪ ಮುಖಂಡರಾದ ರಘುಚಂದನ್ ಮಾತನಾಡಿ, ರೈತರು ಮತ್ತು ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವಲ್ಲಿ ರಾಜಕಾರಣಿಗಳ ಬದ್ಧತೆ ಹಾಗೂ ಕಾರ್ಯವೈಖರಿ ಅತ್ಯಂತ ಮುಖ್ಯ ಒಬ್ಬ ರೈತ ಹಾಗೂ ಒಬ್ಬ ಉದ್ಯೋಗಿ ಇಬ್ಬರೂ ಆಕಾಶವನ್ನೇ ನೋಡುತ್ತಾ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಆದರೆ ರೈತನಿಗೆ ಸಿಗುವ ನೀರು ಅಥವಾ ಸೌಲಭ್ಯವು ಕೇವಲ ಆತನ ತೋಟಕ್ಕೆ ಮಾತ್ರವಲ್ಲದೆ, ಆತನ ಧೈರ್ಯ, ಆತ್ಮ ಹಾಗೂ ಕುಟುಂಬಕ್ಕೂ ನೆರವಾಗುತ್ತದೆ ನಿಗದಿತ ಸಮಯಕ್ಕೆ ಕೆಲಸ ಮಾಡುವ ಬದ್ಧತೆ ಮತ್ತು ಶಿಸ್ತು ಕೆಲವರಲ್ಲಿ ಮಾದರಿಯಾಗಿದೆ ಎಂದು ವಿವರಿಸಿ ತಾವಾಗಲಿ ಅಥವಾ ತಮ್ಮ ಕುಟುಂಬದವರಾಗಲಿ ಯಾವುದೇ ರಾಜಕಾರಣಿಯ ಬಗ್ಗೆ ವೈಯಕ್ತಿಕವಾಗಿ ಟೀಕೆ ಅಥವಾ ಅಪಪ್ರಚಾರ ಮಾಡಲು ಹೋಗುವುದಿಲ್ಲ ತಂದೆಯ ಕಾಲದಿಂದಲೂ ತಾವು ಹಲವು ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರೂ, ಸಾರ್ವಜನಿಕ ವೇದಿಕೆಗಳಲ್ಲಿಯೂ ಯಾರೊಬ್ಬರ ವೈಯಕ್ತಿಕ ವಿಚಾರಗಳನ್ನು ವಿಶ್ಲೇಷಿಸಿಲ್ಲ ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಅಥವಾ ನಾಯಕರು ಪಕ್ಷಾತೀತವಾಗಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ತಮ್ಮ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಬೇಕಿದೆ. ರೈತರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ಹಾಗೂ ಪ್ರತಿಯೊಬ್ಬ ರೈತನ ಮುಖದಲ್ಲಿ ಮಂದಹಾಸ ಮೂಡಿಸುವುದೇ ತಮ್ಮ ಪ್ರಮುಖ ಜವಾಬ್ದಾರಿ ತಂದೆಯವರು ತಮಗೆ ನೀಡಿರುವ ಸಲಹೆಯಂತೆ, ರೈತರ ಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿ ತಮ್ಮ ಮೇಲಿದೆ ನೀರು ಬಂದಿದೆ, ಇವತ್ತು ಇಲ್ಲದಿದ್ದರೆ ನಾಳೆ ಖಂಡಿತವಾಗಿಯೂ ಎಲ್ಲರಿಗೂ ನೀರು ತುಂಬಲಿದೆ ಎಂದು ಭರವಸೆ ನೀಡಿ ಪ್ರತಿಯೊಬ್ಬ ರೈತರು ಸಂತೋಷದಿಂದ ಹಾಗೂ ಸಮೃದ್ಧಿಯಿಂದ ಬದುಕುವಂತಾಗಬೇಕು ಮತ್ತು ಆಗ ಮಾತ್ರ ಚಂದ್ರಪ್ಪನವರು ಶಾಸಕರಾಗಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯದರ್ಶೀ ಮಾಧುರಿ ಗೀರೀಶ್, ನಾಗರಾಜ್, ಸಿದ್ದರಾಮಣ್ಣ, ಮಹಾಂತೇಶ್, ಶಿವಕುಮಾರ್, ಸಿದ್ದೇಶ್,ಮುರುಗೇಶ್, ಬಸವರಾಜು, ದೇವರಾಜು, ಮಂಜಣ್ಣ, ತಿಪ್ಪೇಸ್ವಾಮಿ, ಶಿವಕುಮಾರ್, ಇಂಧ್ರಣ್ಣ, ಆಶೋಕ್ ಕುಮಾರ್, ಸರಸ್ವತಿ,ಮಹೇಶ್ವರಪ್ಪ, ರಂಗಸ್ವಾಮಿ, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.