ಚಿತ್ರದುರ್ಗ ಜು. 4
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಪಾರ್ಶ್ವನಾಥ ಎಜುಕೇಷನ್ ಸೊಸೈಟಿಯಲ್ಲಿ ಶನಿವಾರ ಶಾಲೆಯಲ್ಲಿ 2026-27ನೇ ಸಾಲಿಗೆ ಸಾಂಸ್ಕøತಿಕ ಚಟುವಟಿಕೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಮಕ್ಕಳ ಸಾಂಸ್ಕøತಿಕ, ಕ್ರೀಡಾ, ಶಿಸ್ತಿನ ಹಾಗೂ ಪ್ರಾರ್ಥನಾ ಘಟಕವನ್ನು ಸ್ಥಾಪಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿದ ಶಾಲಾ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಮುಕ್ತ ಮಾತನಾಡಿ ನಮ್ಮ ಶಾಲೆಯಲ್ಲಿ ಪಠ್ಯದ ಜೊತೆ ಈ ರೀತಿಯಾದ ಚಟುವಟಿಕೆಗಳನ್ನು ಮಾಡುವುದರ ಮೂಲಕ ಮಕ್ಕಳಲ್ಲಿ ಧೈರ್ಯವನ್ನು ತುಂಬಲಾಗುತ್ತಿದೆ, ವರ್ಷ ಪೂರ್ತಿಯಾಗಿ ಈ ಘಟಕಗಳಿಂದ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ, ಇದರಿಂದ ಮಕ್ಕಳಲ್ಲಿ ಬೋಧನೆಯ ಜೊತೆಯಲ್ಲಿ ಸಾಂಸ್ಕøತಿಕವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಶಾಲಾ ಕಾರ್ಯದರ್ಶಿಗಳು ಸುರೇಶ್ ಕುಮಾರ್ ಮಾತನಾಡಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಿಕೆಯ ಅಭಿವೃದ್ಧಿಯಾಗಲಿ ಎಂದು ಎಲ್ಲ ಮಕ್ಕಳನ್ನು ಪ್ರೋತ್ಸಾಹಿಸಿದರು ಹಾಗೆ ಎಲ್ಲ ಮಕ್ಕಳಿಗೂ ಶಿಸ್ತು ಮತ್ತು ನಿಯಮ ಪಾಲನೆಯನ್ನು ಮಾಡುವುದರಿಂದ ಸಮಯ ಪ್ರಜ್ಞೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಈ ಘಟಕಗಳಿಗೆ ನೇಮಕವಾದ ಮಕ್ಕಳಿಗೆ ಪ್ರಮಾಣ ವಚನವನ್ನುಬೋಧನೆಧಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಫಾಧ್ಯಯರಾ ನಾಜಿಮ ಸ್ವಾಲೆಹೆ, ಉಪ ಮುಖ್ಯೋಪಾಧ್ಯಯರಾದ ಶಾಂತಕುಮಾರಿ, ಫೌಢಶಾಲಾ ಮುಖ್ಯ ಶಿಕ್ಷಕರಾದ ಜನಕರೆಡ್ಡಿ ಸೇರಿದಂತೆ ಶಾಲೆ ಬೋದಕರು ಬೋದಕೇತರರು ಮಕ್ಕಳು ಭಾಗವಹಿಸಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: