
ಪೋಟೋ ಮತ್ತು ವರದಿ ವೇದಮೂರ್ತಿ ಭೀಮ ಸಮುದ್ರ
ಭೀಮಸಮುದ್ರ. ಸಮೀಪದ ಜಾನುಕೊಂಡ ಗ್ರಾಮದ ಓಬಳನರಸಿಂಹ ಸ್ವಾಮಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು
ಶಾಲೆ ಮುಖ್ಯ ಶಿಕ್ಷಕರು S N ದ್ವಾರಕನಾಥ್ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಹಂತ ಹಂತವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ, ವಿದ್ಯಾರ್ಥಿಗಳು ಪ್ರತಿಯೊಬ್ಬರು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಬೇಕು, ಧರ್ಮಸ್ಥಳ ಯೋಜನೆ ವತಿಯಿಂದ ಪರಿಸರ ದಿನ ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದರಿಂದ ಖುಷಿ ವ್ಯಕ್ತ ಪಡಿಸಿದರು
ಸಿರಿಗೆರೆ ಕೃಷಿ ಮೇಲ್ವಿಚಾರಕರು ಮೌನೇಶ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡುವುದಲ್ಲದೆ
ಪರಿಸರ ಕಾರ್ಯಕ್ರಮ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ದಿನಾಚರಣೆ,ಅರ್ಹ ಶಾಲೆಗಳಿಗೆ ಅನುಪಾತ ದಲ್ಲಿ ಡೆಸ್ಕ್ ಬೆಂಚ್ ವಿತರಣೆ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರ ಓದಗಣೆ, ವೃತ್ತಿ ಪರ ಕೋರ್ಸ್ ಮಾಡಿದ್ದಲ್ಲಿ ಸ್ಕಾಲರ್ ಶಿಪ್ ನೀಡುವ ಬಗ್ಗೆ, ಗ್ರಾಮೀಣ ಭಾಗದ ಯುವಕರ ಯುವತಿಯರಿಗೆ RUDSET ಸಂಸ್ಥೆ ಮುಖಾಂತರ ಉಚಿತ ತರಬೇತಿ ಇರುವ ಬಗ್ಗೆ ಮಾಹಿತಿ ನೀಡಿದರು.
ನಂತರ 5, 8,9,10 ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ, ಶಿಕ್ಷಕಿ ವೃಂದದವರು, ಸೇವಾಪ್ರತಿನಿಧಿ ಗೀತಾ, ಶಾಲೆಯ ಮಕ್ಕಳು ಭಾಗವಹಿಸಿದ್ದರು,