ಜಿಲ್ಲಾ ಆಯುಷ್ ಇಲಾಖೆಯಿಂದ ಸ್ವಚ್ಚತೆ ಮತ್ತು ವೃಕ್ಷಾರೋಹಣ ಕಾರ್ಯಕ್ರಮ. ಸಮಾಜದ ಸ್ವಾಸ್ಥ್ಯಕ್ಕಾಗಿ ಪರಿಸರ ಸ್ವಚ್ಛತೆ ಅನಿವಾರ್ಯ. _ ಡಾ|| ಚಂದ್ರಕಾಂತ ಎಸ್. ನಾಗಸಮುದ್ರ
ಚಿತ್ರದುರ್ಗ : 25 ಸ್ವಚ್ಛತಾ ಹೀ ಸೇವಾ ಅಭಿಯಾನದ ಅಡಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ. ಮಲ್ಲಾಪುರ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ಹಾಗು ಸಾರ್ವಜನಿಕರ ಸಹಯೋಗದೊಂದಿಗೆ ಚಿತ್ರದುರ್ಗದ ಕೆಳಗೋಟೆಯಲ್ಲಿರುವ ಚನ್ನಕೇಶವ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಚಂದ್ರಕಾಂತ ಎಸ್ ನಾಗಸಮುದ್ರ ಅವರು ಶರೀರ ಸ್ಚಚ್ಛವಾದರೆ ದೈಹಿಕ ಆರೋಗ್ಯ, ಮನಸ್ಸು ಸ್ವಚ್ಛವಾಗಿದ್ದರೆ ಮಾನಸಿಕ ಆರೋಗ್ಯ ಹಾಗು ಪರಿಸರ ಸ್ಚಚ್ಛವಾದರೆ ಸಮಾಜದ ಆರೋಗ್ಯ ಆದಕಾರಣ ಈ ಅಭಿಯಾನದ ಅಡಿಯಲ್ಲಿ ಧಾರ್ಮಿಕ ಸ್ಥಳವಾದ ಶ್ರೀ ಚನ್ನಕೇಶವ ದೇವಸ್ಥಾನದ ಆವರಣ ಸ್ಚಚ್ಚ ಮಾಡಲಾಗುತ್ತಿದೆ. ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ|| ಶಿವಕುಮಾರ್ ಮಾತನಾಡಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ ಬದ್ಧವಾಗಿದ್ದು ಇದರ ಅಂಗವಾಗಿ ಆಯುಷ್ ಇಲಾಖೆಯ ಜೆ ಎನ್ ಕೋಟೆ, ಅಳಗವಾಡಿ ಜಿಲ್ಲಾ ಕೇಂದ್ರ ಸೇರಿದಂತೆ ಹಲವಾರು ಆಯುಷ್ ಚಿಕಿತ್ಸಾ ಕೇಂದ್ರಗಳಲ್ಲಿ ಸ್ವಚ್ಛತೆ ಮತ್ತು ಆಯುರ್ವೇದದ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇದಕ್ಕೆ ಸಾರ್ವಜನಿಕರ ಸಕ್ರಿಯ ಬೆಂಬಲ ಅನಿವಾರ್ಯ ಸ್ವಚ್ಛತೆ ಆಯುರ್ವೇದ ಚಿಕಿತ್ಸಾ ಪದ್ಧತಿಯ ಒಂದು ಭಾಗವಾಗಿದೆ ರೋಗಮುಕ್ತ ಜೀವನಕ್ಕಾಗಿ ದೇಹ ಶುದ್ಧಿ ಮನಸ್ಸಿನ ಶುದ್ಧಿ ಜೊತೆಗೆ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಕಛೇರಿ ಸಿಬ್ಬಂದಿ,ಜಿಲ್ಲಾಸ್ಪತ್ರೆ ಆಯುಷ್ ವಿಭಾಗದ ಸಿಬ್ಬಂದಿ ಹಾಗು ಆಯುಷ್ ವೈದ್ಯಾಧಿಕಾರಿಗಳು, ಯೊಗ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀ ರವಿ ಅಂಬೇಕರ್, ಶ್ರೀ ಮುರಳಿ, ಶ್ರೀಮತಿ ಸುನಿತಾ, ಶ್ರೀಮತಿ ಮಂಜುಳ, ಶ್ರಿಮತಿ ವಸಂತಲಕ್ಷ್ಮಿ, ಮಂಜುನಾಥ್ ಹಾಗು ಸದಸ್ಯರು ಮತ್ತು ಸಾರ್ವಜನಿಕರು ಸ್ವಚ್ಛತಾ ಕಾರ್ಯ ಕ್ಕೆ ಕೈಜೋಡಿಸಿದರು. ಸ್ಥಳಿಯ ನಗರಸಭಾ ಸದಸ್ಯರಾದ ಮಂಜುನಾಥ್ ಹಾಗು ಮುಖಂಡರಾದ ಪ್ರಕಾಶ್ ರವರು ಕಾರ್ಯಕ್ರಮಕ್ಕೆ ನೀಡಿದರು.