ಅಬ್ಬಬ್ಬಾ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್..!

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ 2 ಕಡೆಯಿಂದ ಸ್ಪೆಷಲ್ ಗಿಫ್ಟ್ ಒಂದು ಸಿಕ್ಕಿದೆ. ಅದುವೆ ಪುಷ್ಪ 2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಅಲ್ಲು ಅರ್ಜುನ್ ಗೆ ಮಾತ್ರ ಅಲ್ಲ, ಅದಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೂ ಥ್ರಿಲ್ ಆಗಿದೆ. ಟೀಸರ್ ಕಂಡು ಫ್ಯಾನ್ಸ್ ದಂಗಾಗಿದ್ದಾರೆ. ಅಲ್ಲು ಅರ್ಜುನ್ ಅವತಾರಕ್ಕೆ ಬಹುಪರಾಕ್ ಹಾಕಿದ್ದಾರೆ.

ಮೊದಲ ಭಾಗದಲ್ಲಿದ್ದ ಕಥೆಯೇ ಬೇರೆ, ಈಗ ಮುಂದುವರೆದ ಕಥೆಯೇ ಬೇರೆ ಫೀಲ್ ಕೊಡುತ್ತಿದೆ. ಗುಂಡಿನಿಂದ ಗಾಯಗೊಂಡ ಪುಷ್ಪ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಬಳಿಕ ಅವನಿಗಾಗಿ ಹುಡುಕಾಟ ನಡೆಯುತ್ತೆ. ಅದರ ನಡುವೆ ಬಡಿದಾಟವೂ ಇರುತ್ತೆ. ಪುಷ್ಪ ಎಲ್ಲಿಯೂ ಸಿಗುವುದಿಲ್ಲ. ಬಳಿಕ ಕೊನೆಯಲ್ಲಿ ಹುಲಿಯ ಜೊತೆಗೆ ಪುಷ್ಪನನ್ನು ತೋರಿಸಲಾಗುತ್ತದೆ. ಇದನ್ನು ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ.

ಈಗಾಗಲೇ ಪುಷ್ಪ2 ಟೀಸರ್ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಆಗಿದೆ. ಈಗಾಗಲೇ ಗ್ಲಿಂಪಸ್ ಕೂಡ ಸದ್ದು ಮಾಡಿತ್ತು. ಈಗ ಟೀಸರ್ ಇನ್ನಷ್ಟು ಸದ್ದು ಮಾಡುತ್ತಿದೆ. ಸಿನಿಮಾಗಾಗಿ ಕಾಯುವಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

The post ಅಬ್ಬಬ್ಬಾ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/bx3XpeW
via IFTTT

Leave a Reply

Your email address will not be published. Required fields are marked *