LSG vs SRH: 13, 3.. 30 ನಿಮಿಷ; ಹೈದರಾಬಾದ್​ಗೆ ದುಬಾರಿಯಾದ 13.25 ಕೋಟಿ ರೂ. ಪ್ಲೇಯರ್!

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಎರಡನೇ ಪಂದ್ಯವನ್ನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಲಕ್ನೋ ಸ್ಪಿನ್ನರ್​ಗಳ ಮ್ಯಾಜಿಕ್​ಗೆ ಮಂಕಾದ ಹೈದರಾಬಾದ್ ಬ್ಯಾಟರ್​ಗಳು ಕೇವಲ 121 ರನ್ ಗಳಿಸಲಷ್ಟೇ ಶಕ್ತರಾದರು. ಅದರಲ್ಲೂ ಫ್ರಾಂಚೈಸಿ ದುಬಾರಿ ಬೆಲೆ ಕೊಟ್ಟು ಖರೀದಿಸಿದ ಆಟಗಾರ ಎರಡೂ ಪಂದ್ಯದಲ್ಲೂ ರನ್ ಗಳಿಸದೇ ಇರುವುದು ಹೈದರಾಬಾದ್​ಗೆ ದೊಡ್ಡ ತಲೆನೋವು ತಂದೊಡ್ಡಿದೆ.ಐಪಿಎಲ್ ಆರಂಭಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 13.25 ಕೋಟಿ ನೀಡಿ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು ಖರೀದಿಸಿತ್ತು. ಆದರೆ ದುಬಾರಿ ಬೆಲೆ ಪಡೆದು ತಂಡ ಸೇರಿಕೊಂಡ ಬ್ರೂಕ್ ಬ್ಯಾಟಿಂಗ್​ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದ ಬ್ರೂಕ್, ಕೇವಲ 4 ಎಸೆತಗಳನ್ನು ಆಡಲು ಸಾಧ್ಯವಾಯಿತು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಎರಡೂ ಪಂದ್ಯಗಳನ್ನು ಒಳಗೊಂಡಂತೆ ಅವರು ಅರ್ಧ ಗಂಟೆಯೂ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ 1 ಕೋಟಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿಗೆ ಎಂಟ್ರಿಕೊಟ್ಟಿದ್ದ ಬ್ರೂಕ್ ಅವರನ್ನು ಫ್ರಾಂಚೈಸ್ 13.25 ಕೋಟಿಗಳಿಗೆ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಬ್ರೂಕ್ ಅವರನ್ನು ಖರೀದಿಸಲು ಪ್ರಯತ್ನಿಸಿದ್ದವು.ಹೈದರಾಬಾದ್ ಬ್ರೂಕ್​ಗೆ ಇಷ್ಟೊಂದು ಹಣ ನೀಡಲು ಕಾರಣವೂ ಇದ್ದು, ಐಪಿಎಲ್ ಆಡುವ ಮೊದಲು ಬ್ರೂಕ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 2 ಟೆಸ್ಟ್‌ಗಳಲ್ಲಿ ಒಂದು ಶತಕ ಮತ್ತು 3 ಅರ್ಧ ಶತಕಗಳನ್ನು ಬಾರಿಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ವಿರುದ್ಧ ಬ್ರೂಕ್ ಅಬ್ಬರಿಸಿದ್ದರು. ಆದರೆ ಐಪಿಎಲ್‌ಗೆ ಬಂದ ತಕ್ಷಣ ಬ್ರೂಕ್ ಅವರ ಬ್ಯಾಟ್ ಸೈಲೆಂಟ್ ಆಗಿದೆ.

source https://tv9kannada.com/photo-gallery/cricket-photos/ipl-2023-sunrisers-hyderabad-most-expensive-player-harry-brook-flop-shows-psr-au14-551437.html

Leave a Reply

Your email address will not be published. Required fields are marked *