ಚಿತ್ರದುರ್ಗ: ಮೇ 9ರಂದು ಯಡಿಯೂರಪ್ಪ ಅಭಿಮಾನೋತ್ಸವ: ಪೂರ್ವಭಾವಿ ಸಭೆಯಲ್ಲಿ ಭರ್ಜರಿ ಸಿದ್ಧತೆ.

ಚಿತ್ರದುರ್ಗ ಏ. 21.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

50 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ರೈತ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರ ಹಿತೈಷಿಗಳು ಹಾಗೂ ಅಭಿಮಾನಿ ಬಳಗದಿಂದ ಆಚರಣೆ ಮಾಡುತ್ತಿರುವ ಯಡಿಯೂರಪ್ಪ ಅಭಿಮಾನೋತ್ಸವು ಚಿತ್ರದುರ್ಗ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಶ್ರೀ ಮಾದರ ಚೆನ್ನಯ್ಯ ಗುರುಪೀಠ ಪಕ್ಕದಲ್ಲಿರುವ ಆವರಣದಲ್ಲಿ ಮೇ. 9 ರಂದು ನಿಶ್ಚಯವಾಗಿದ್ದು, ಇದರ ಅಂಗವಾಗಿ ಈ ದಿನ ಪೂರ್ವಭಾವಿ ಸಭೆಯನ್ನು ಮದ್ಯಾಹ್ನ ಸರ್ವ ಮುಖಂಡರ ಸಮ್ಮುಖದಲ್ಲಿ ಚಿತ್ರದುರ್ಗ ನಗರದ ಮುರುಘ ಮಠದ ಅಲ್ಲಮ ಪ್ರಭು ಸಭಾ ಭವನದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಚಿತ್ರದುರ್ಗ ಲೋಕಸಭಾ ಸಂಸದರಾದ ಗೋವಿಂದ ಕಾರಜೋಳ, ಭಾಜಪ ಜಿಲ್ಲಾ ಅಧ್ಯಕ್ಷ ಕೆ.ಟಿ ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್ ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್ ಕೆ ಬಸವರಾಜನ್ ಖನಿಜ ನಿಗಮ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ದಾವಣಗೆರೆ ವಿಭಾಗದ ವಿಭಾಗ ಸಹಾ ಪ್ರಭಾರಿಗಳಾದ ಎ ಮುರುಳಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಂಜುನಾಥ ಪಿ ಎಂ, ಮೋಹನ್ ಜಿ ಎಚ್, ಮಾಧುರಿ ಗಿರೀಶ್, ವೆಂಕಟೇಶ್ ಯಾದವ್ ಬಿಜೆಪಿ ಮುಖಂಡರಾದ ಏನ್ ಆರ್ ಲಕ್ಷ್ಮಿಕಾಂತ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸರ್ವ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮತ್ತು ಮಂಡಲಗಳ ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಸ್ತರದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *