ಸಮಗ್ರ ಸುದ್ದಿ — ಆರೋಗ್ಯ
ಹೆಚ್ಚಿನವರು ಅಧಿಕ ರಕ್ತದೊತ್ತಡ (High BP) ಮಾತ್ರ ಅಪಾಯಕಾರಿಯೆಂದು ಭಾವಿಸಿದರೂ, ಕಡಿಮೆ ರಕ್ತದೊತ್ತಡ (Low BP) ಕೂಡ ಸಮಾನವಾಗಿ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ಸಮಸ್ಯೆಯಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಮೆದುಳು ಹಾಗೂ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗಿ ತಲೆ ಸುತ್ತುವುದು, ಆಯಾಸ, ಬಲಹೀನತೆ ಹಾಗು ಗಂಭೀರ ಸಂದರ್ಭಗಳಲ್ಲಿ ಮೂರ್ಛೆ ಬರುವ ಪರಿಸ್ಥಿತಿಗಳೂ ಕಂಡುಬರಬಹುದು.
ಲೋ ಬಿಪಿ ಉಂಟಾಗುವ ಪ್ರಮುಖ ಕಾರಣಗಳು
ಯುವಜನತೆಯಲ್ಲಿಯೂ ಲೋ ಬಿಪಿ ಸಮಸ್ಯೆ ಹೆಚ್ಚಾಗುತ್ತಿರುವುದು ಕಳಪೆ ಜೀವನಶೈಲಿ, ದೀರ್ಘಕಾಲದ ಉಪವಾಸ, ನಿರ್ಜಲೀಕರಣ, ಔಷಧಿಗಳ ಅಡ್ಡಪರಿಣಾಮ, ಆಯಾಸ, ಒತ್ತಡ, ಹೆಚ್ಚು ಶಾಖದ ವಾತಾವರಣ, ಹಾಗು ಥೈರಾಯ್ಡ್ ಹಾಗೂ ಹಾರ್ಮೋನು ಅಸಮತೋಲನ ಮುಂತಾದ ಕಾರಣಗಳಿಂದ.
ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮತ್ತು ಕೆಲವು ಮನೆಮದ್ದುಗಳ ಬಳಕೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಲೋ ಬಿಪಿ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದುಗಳು
1. ಸೈಂಧವ ಲವಣ (Himalayan Pink Salt)
ಸೋಡಿಯಂ ಜೊತೆಗೆ ಒಟ್ಟು 84 ಖನಿಜಗಳನ್ನು ಹೊಂದಿರುವ ಸೈಂಧವ ಲವಣ ರಕ್ತದೊತ್ತಡ ಸಮತೋಲನಕ್ಕೆ ಸಹಕಾರಿ.
ತಲೆ ಸುತ್ತುವುದು ಅಥವಾ ಆಯಾಸ ಕಾಣಿಸಿದಾಗ ಒಂದು ಲೋಟ ನೀರಿಗೆ ಒಂದು ಚಿಟಿಕೆ ಸೈಂಧವ ಉಪ್ಪು ಬೆರೆಸಿ ಕುಡಿಯುವುದು ತಕ್ಷಣದ ಪರಿಹಾರ ನೀಡಬಹುದು.
ವೈದ್ಯಕೀಯ ಉಪ್ಪಿಗಿಂತ ಇದು ಸಹಜವಾಗಿ ಉತ್ತಮ ಪರಿಣಾಮಕಾರಿತ್ವ ತೋರಿಸುತ್ತದೆ.
2. ಕೊತ್ತಂಬರಿ ಮತ್ತು ಸಕ್ಕರೆ
ಕೊತ್ತಂಬರಿ–ಸಕ್ಕರೆ ಮಿಶ್ರಣ ದೈನಂದಿನ ಸೇವನೆಯು ಶಕ್ತಿ ಹೆಚ್ಚಿಸಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಹೊಟ್ಟೆಯ ಆಮ್ಲ ನಿಯಂತ್ರಣಕ್ಕೂ ಸಹಕಾರಿ.
3. ಒಣದ್ರಾಕ್ಷಿ ನೀರು (Raisin Water)
ರಾತ್ರಿಯಿಡೀ 10–12 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಲೋ ಬಿಪಿ ಸಮಸ್ಯೆ ಕಡಿಮೆಯಾಗುತ್ತದೆ.
ಒಣದ್ರಾಕ್ಷಿಗೆ ಬಾದಾಮಿಯನ್ನು ಸೇರಿಸಿ ನೆನೆಸಿದರೆ ಇನ್ನಷ್ಟು ಉತ್ತಮ ಫಲಿತಾಂಶ ಕಾಣಬಹುದು.
4. ಲವಂಗ, ಶುಂಠಿ, ತುಳಸಿ ಮತ್ತು ಜೇನುತುಪ್ಪ
ಆರೋಗ್ಯ ತಜ್ಞರ ಸಲಹೆ
ಲೋ ಬಿಪಿ ನಿರ್ಲಕ್ಷ್ಯ ಮಾಡಿದರೆ ದೀರ್ಘಾವಧಿಯಲ್ಲಿ ಗಂಭೀರ ಸಮಸ್ಯೆಯಾಗಬಹುದು. ಆದ್ದರಿಂದ ತಲೆ ಸುತ್ತುವುದು, ಹೆಚ್ಚು ಆಯಾಸ, ದೌರ್ಬಲ್ಯ, ಹೃದಯ ಬಡಿತ ನಿಧಾನಗೊಳ್ಳುವುದು ಮುಂತಾದ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಅಗತ್ಯ.
ಮನೆಮದ್ದುಗಳು ಸಹಾಯಕವಾದರೂ, ಮೂಲ ಕಾರಣವನ್ನು ಪತ್ತೆಹಚ್ಚಿ ತಕ್ಕ ಚಿಕಿತ್ಸೆ ಪಡೆಯುವುದು ಮಹತ್ತರ.
ಬಿಪಿಯನ್ನು ಸಮತೋಲನಗೊಳಿಸುವುದು ಜೀವನಶೈಲಿ ಸುಧಾರಣೆ ಮತ್ತು ಸರಿಯಾದ ಆಹಾರ ಸೇವನೆಯಿಂದ ಸಾಧ್ಯ. ಮೇಲಿನ ಮನೆಮದ್ದುಗಳು ಸರಳವಾಗಿದ್ದು, ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭ ಹಾಗೂ ಸುರಕ್ಷಿತ.
Views: 20