ಮನುಷ್ಯನಿಗೆ ಆರೋಗ್ಯ ಒಂದಿಲ್ಲದಿದ್ದರೆ ಎಷ್ಟೇ ಸಂಪತ್ತಿದ್ದರೂ ಶೂನ್ಯವೆನಿಸಬಿಡುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೇಹಕ್ಕೆ ಅಗತ್ಯವೆನಿಸುವ ಪೌಷ್ಟಿಕಾಂಶ, ಕೊಬ್ಬಿನಾಂಶ ಹಾಗೂ ಕ್ಯಾಲೋರಿಗಳುಳ್ಳ ಆಹಾರ ಪದಾರ್ಥವನ್ನು ಸೇವಿಸದಿದ್ದರೆ.
ಮನುಷ್ಯನಿಗೆ ಆರೋಗ್ಯ (Health) ಒಂದಿಲ್ಲದಿದ್ದರೆ ಎಷ್ಟೇ ಸಂಪತ್ತಿದ್ದರೂ ಶೂನ್ಯವೆನಿಸಬಿಡುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೇಹಕ್ಕೆ ಅಗತ್ಯವೆನಿಸುವ ಪೌಷ್ಟಿಕಾಂಶ (nutrition), ಕೊಬ್ಬಿನಾಂಶ (fat content) ಹಾಗೂ ಕ್ಯಾಲೋರಿಗಳುಳ್ಳ ಆಹಾರ (Food) ಪದಾರ್ಥವನ್ನು ಸೇವಿಸದಿದ್ದರೆ, ದೇಹವು (Body) ದಿನದಿಂದ ದಿನಕ್ಕೆ ನಿಶ್ಯಕ್ತಿಗೊಂಡು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಶರೀರವು ಕಾಯಿಲೆಗಳ (disease) ಗೂಡಾಗಿಬಿಡುತ್ತದೆ. ದೇಹಕ್ಕೆ ಪ್ರೋಟೀನ್, ಕ್ಯಾಲೋರಿಗಳನ್ನು ಒದಗಿಸಲು ನಮ್ಮ ನಡುವೆ ಬಹಳಷ್ಟು ಆಹಾರ ಪದಾರ್ಥಗಳು ಸಿಗುತ್ತವೆ. ಅಂತಹವುಗಳಲ್ಲಿ ಮೊಳಕೆಕಾಳು ಹಾಗೂ ಪನೀರ್ ಸಹ ಮುಖ್ಯವಾದವು. ಅದರಲ್ಲೂ ಸಸ್ಯಾಹಾರಿಗಳಿಗೆ ಇವು ಪವರ್ ಹೌಸ್ ಇದ್ದಂತೆ.
ಪೌಷ್ಟಿಕಾಂಶ
ಮೊಳಕೆಕಾಳುಗಳು ಮತ್ತು ಪನೀರ್ ಅನ್ನು ಪೌಷ್ಟಿಕಾಂಶದ ವಿಷಯದಲ್ಲಿ ಹೋಲಿಸಿದರೆ, ಮೊಳಕೆ ಕಾಳುಗಳು ವಿಶೇಷವಾಗಿ ಮುಂಗ್ ಬೀನ್ಸ್‌ನಂತಹ ದ್ವಿದಳ ಧಾನ್ಯಗಳಿಂದ ಮಾಡಲ್ಪಟ್ಟವು ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವು ಸಸ್ಯ ಆಧಾರಿತ ಪ್ರೊಟೀನ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯ.
ಮತ್ತೊಂದೆಡೆ, ಪನೀರ್ ಮೊಸರು ಹಾಲಿನಿಂದ ತಯಾರಿಸಿದ ಡೈರಿ ಉತ್ಪನ್ನ. ಇದು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕೊಬ್ಬಿನಿಂದ ಸಮೃದ್ಧವಾಗಿದ್ದು, ವಿಶೇಷವಾಗಿ ಸಸ್ಯಾಹಾರದ ಮೂಲಕ ಪ್ರೋಟೀನ್ ಸೇವಿಸಲು ಇಚ್ಛಿಸುವವರಿಗೆ ಇದು ಬಹಳ ಪ್ರಯೋಜನಕಾರಿ. ಆದರೆ ಮೊಳಕೆ ಕಾಳುಗಳಿಗೆ ಹೋಲಿಸಿದರೆ ಪನೀರ್‌ನಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳು ಹೆಚ್ಚಾಗಿರುವುದನ್ನು ಗಮನಿಸಬಹುದು.
ಪ್ರೊಟೀನ್
ಪ್ರೋಟೀನ್ ವಿಷಯದಲ್ಲಿ ಹೇಳುವುದಾದರೆ, ಮೊಳಕೆಕಾಳುಗಳು ಮತ್ತು ಪನೀರ್ ಎರಡೂ ಸಹ ಪ್ರೋಟೀನ್ ನ ಉತ್ತಮ ಮೂಲಗಳೇ. ಆದರೆ ಪ್ರೋಟೀನ್ ನ ವಿಧ ಮತ್ತು ಅದರ ಪ್ರಮಾಣ ಮಾತ್ರ ಭಿನ್ನವಾಗಿರುತ್ತದೆ. ಮೊಳಕೆಕಾಳುಗಳು ಸಸ್ಯ ಆಧಾರಿತ ಪ್ರೋಟೀನ್ ಅನ್ನು ಒದಗಿಸುತ್ತದೆ ಹಾಗೂ ಇದರಲ್ಲಿ ಕೊಬ್ಬಿನಾಂಶ ಕಡಿಮೆಯಿರುತ್ತದೆ. ಹಾಗಾಗಿಯೇ ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ಪನೀರ್, ಪ್ರಾಣಿಯಿಂದ ದೊರೆಯುವ ಹಾಲಿನ ಉಪ ಉತ್ಪನ್ನವಾಗಿದ್ದು ಎಲ್ಲಾ ಅಗತ್ಯ ಅಮೈನೋ ಆಮ್ಲಗಳು ಹಾಗೂ ಸಂಪೂರ್ಣ ಪ್ರೋಟೀನ್ ಅನ್ನು ದೇಹಕ್ಕೆ ಒದಗಿಸುತ್ತದೆ.
ಇದು ಸ್ನಾಯುಗಳಿಗಾದ ಪೆಟ್ಟನ್ನು ಸರಿಪಡಿಸಲು ಮತ್ತು ದೈಹಿಕ ಬೆಳವಣಿಗೆಗೆ ಸಹಕರಿಸುತ್ತದೆ. ದೇಹವನ್ನು ಹುರಿಗೊಳಿಸುವರಿಗೆ, ಫಿಟ್ನೆಸ್ ಕಾಪಾಡಿಕೊಳ್ಳುವವರಿಗೆ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಯುಳ್ಳವರು ಹಾಗೂ ಹೆಚ್ಚಿನ ಪ್ರೋಟೀನ್ ಸೇವನೆಯ ಅಗತ್ಯವಿರುವವರಿಗೆ ಪನೀರ್ ಹೆಚ್ಚು ಪ್ರಯೋಜನಕಾರಿ.
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ
ಪನೀರ್‌ಗೆ ಹೋಲಿಸಿದರೆ ಮೊಳಕೆಕಾಳುಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸುಲಭ. ಮೊಳಕೆಯೊಡೆಯುವ ಪ್ರಕ್ರಿಯೆಯು ಪೋಷಕಾಂಶಗಳು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಯಾವುದೇ ರೀತಿಯ ಒತ್ತಡವನ್ನುಂಟು ಮಾಡುವುದಿಲ್ಲ. ಅಲ್ಲದೆ ಮೊಳಕೆಯಲ್ಲಿರುವ ಹೆಚ್ಚಿನ ಫೈಬರ್ ಅಂಶವು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ.
ಇನ್ನು ಪನೀರ್, ಪೌಷ್ಟಿಕವಾಗಿದ್ದರೂ, ಕೆಲವರಿಗೆ, ಅದರಲ್ಲೂ ವಿಶೇಷವಾಗಿ ಲ್ಯಾಕ್ಟೋಸ್ ದೇಹಕ್ಕೆ ಒಗ್ಗದವರಿಗೆ ಪನೀರ್ ಅನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹವರು ಪನೀರ್ ಅನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.
ಕೊಬ್ಬು ಮತ್ತು ಕ್ಯಾಲೋರಿ
ಇನ್ನು ಕೊಬ್ಬು ಮತ್ತು ಕ್ಯಾಲೋರಿ ವಿಷಯದ ಬಗ್ಗೆ ಹೇಳುವುದಾದರೆ, ಮೊಳಕೆಕಾಳುಗಳು ಈ ವಿಷಯದಲ್ಲಿ ರಾಜ ಎಂದೇ ಹೇಳಬಹುದು, ಮೊಳಕೆಕಾಳು ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವವರಿಗೆ ಹಾಗೂ ತೂಕ ಕಡಿಮೆ ಮಾಡಿಕೊಳ್ಳುವವರಿಬ್ಬರಿಗೂ ಒಳ್ಳೆಯ ಆಯ್ಕೆ. ಇನ್ನು, ಪನೀರ್, ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದರೂ, ಗಮನಾರ್ಹ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ, ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿರುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು.
ಶರೀರದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬೇಕೇನ್ನುವವರು, , ವಿಶೇಷವಾಗಿ ಹೃದಯದ ಆರೋಗ್ಯದ ಕಾಳಜಿ ಇರುವವರು, ಪನೀರ್ ಗೆ ಬದಲಾಗಿ ಮೊಳಕೆಕಾಳನ್ನು ಸೇವಿಸಬಹುದು. ಇದು ಒಳ್ಳೆಯ ಪರ್ಯಾಯ ಆಯ್ಕೆ,
ಹಾಗಾದರೆ, ಇವರೆಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ?
ಪನೀರ್ ಅಥವಾ ಮೊಳಕೆಕಾಳುಗಳು ಎರಡೂ ಸಹ ವ್ಯಕ್ತಿಯ ವೈಯಕ್ತಿಕ ಆಹಾರದ ಅಗತ್ಯತೆಗಳು ಮತ್ತು ಆರೋಗ್ಯದ ಆದ್ಯತೆಯನ್ನು ಅವಲಂಬಿಸಿರುತ್ತದೆ. ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕಾಗಿ ಹಾಗೂ ಆಹಾರದಲ್ಲಿ ಕಡಿಮೆ ಕ್ಯಾಲೋರಿ, ಹೆಚ್ಚಿನ ಫೈಬರ್ ಅಂಶ ಇರಬೇಕು ಎಂದು ಬಯಸುವವರಿಗೆ ಮೊಳಕೆಕಾಳುಗಳು ಹೆಚ್ಚು ಸೂಕ್ತ. ಅಲ್ಲದೆಮ ಮೊಳಕೆಕಾಳುಗಳು ತೂಕವನ್ನು ಸರಿಯಾಗಿ ನಿರ್ವಹಿಸಲು ಹಾಗು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಇನ್ನು ಹೆಚ್ಚು ಪ್ರೋಟೀನ್ ಹಾಗೂ ಕಬ್ಬಿಣಾಂಶವನ್ನು ಸಸ್ಯಾಹಾರದಲ್ಲಿ ಸೇವಿಸುವ ಇಚ್ಚಿಸುವವರಿಗೆ ಪನೀರ್ ಒಳ್ಳೆಯ ಆಯ್ಕೆ.
ಆದರೆ, ಪನೀರ್ ನಲ್ಲಿ ಕೊಬ್ಬಿನಂಶವಿರುವುದರಿಂದ ಇದನ್ನು ಮಿತವಾಗಿ ಸೇವಿಸಬೇಕು. ಮೊಳಕೆಕಾಳು ಅಥವಾ ಪನೀರ್ ಯಾವುದೇ ಆಗಿರಲೀ, ಎರಡನ್ನೂ ಸಮತೋಲಿತವಾಗಿ, ಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.