Horoscope Today 29 August: ಇಂದಿನ ನಿಮ್ಮ ರಾಶಿಯ ಆರ್ಥಿಕ ಸ್ಥಿತಿ, ಉದ್ಯೋಗ ಮತ್ತು ಕುಟುಂಬ ಭವಿಷ್ಯ.

ಇಂದಿನ ಪಂಚಾಂಗ (29-08-2026):

  • ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
  • ಆಯನ/ಋತು: ದಕ್ಷಿಣಾಯನ, ವರ್ಷ ಋತು
  • ಮಾಸ/ಪಕ್ಷ/ತಿಥಿ: ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಶನಿವಾರ
  • ನಕ್ಷತ್ರ: ಧನಿಷ್ಠಾ (ಮಹಾನಕ್ಷತ್ರ: ಮಘಾ)
  • ಯೋಗ/ಕರಣ: ಸುಕರ್ಮ, ಕೌಲವ
  • ಸೂರ್ಯೋದಯ/ಸೂರ್ಯಾಸ್ತ: ಬೆಳಗ್ಗೆ 06:09 / ಸಂಜೆ 06:31
  • ರಾಹು ಕಾಲ: 09:05 ರಿಂದ 10:48
  • ಯಮಗಂಡ ಕಾಲ: 13:53 ರಿಂದ 15:26
  • ಗುಳಿಕ ಕಾಲ: 06:10 ರಿಂದ 07:42

ಮೇಷ ರಾಶಿ: ನೀವು ಬೆಂಬಲಿಸಿದವರೇ ನಿಮ್ಮ ವಿರೋಧಿಗಳಾಗಬಹುದು. ಉದ್ಯೋಗವಿಲ್ಲದಿರುವುದು ಅಸಮಾಧಾನ ತರಲಿದೆ. ಆಪ್ತರೊಡನೆ ಕುತೂಹಲಕಾರಿ ವಿಚಾರ ಹಂಚಿಕೊಳ್ಳುವಿರಿ. ನಿಮ್ಮ ಮೇಲೆ ಆಧಾರರಹಿತ ಆರೋಪಗಳು ಎದುರಾಗಬಹುದು, ಜೊತೆಗೆ ಹಿತಶತ್ರುಗಳ ಕಾಟವಿರುತ್ತದೆ. ಸ್ವಲ್ಪ ಮಟ್ಟಿನ ಆರ್ಥಿಕ ಲಾಭ ಸಂತಸ ತರುತ್ತದೆ. ಆತಂಕದ ಸುದ್ದಿಯನ್ನೂ ತಾಳ್ಮೆಯಿಂದ ನಿಭಾಯಿಸುವಿರಿ.

ವೃಷಭ ರಾಶಿ: ದೈವಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ನಿಮ್ಮ ಕಠಿಣ ಮಾತುಗಳಿಂದ ಇತರರಿಗೆ ನೋವಾಗದಂತೆ ಎಚ್ಚರವಹಿಸಿ. ನಿಯಮ ಮೀರಿ ದಂಡ ಕಟ್ಟುವ ಸಾಧ್ಯತೆ ಇದೆ. ನಿವೃತ್ತಿ ನಂತರದ ಮೊದಲ ಆದಾಯ ಕೈಸೇರಲಿದೆ. ಹಳೇ ಮಿತ್ರರನ್ನು ಭೇಟಿಯಾಗಿ ನೆರವು ಯಾಚಿಸುವಿರಿ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ನಿಮ್ಮಲ್ಲಿರುವ ವಿಶೇಷತೆಯನ್ನು ಸರಳವಾಗಿ ಪ್ರದರ್ಶಿಸುವಿರಿ.

ಮಿಥುನ ರಾಶಿ: ಮನಸ್ಸಿಗೆ ತೀವ್ರ ಕಿರಿಕಿರಿ ಉಂಟಾಗುವ ದಿನ. ಲೆಕ್ಕಪತ್ರಗಳಲ್ಲಿ ನಿಮ್ಮ ದೌರ್ಬಲ್ಯ ಇತರರಿಗೆ ತಿಳಿಯಲಿದೆ. ನೆಪಗಳನ್ನು ಒಡ್ಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವಿರಿ. ಆದರೂ ದಿನಾಂತ್ಯಕ್ಕೆ ಸಣ್ಣ ತೃಪ್ತಿ ಇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಹುದ್ದೆಯ ಮೇಲೆ ಇತರರ ಕಣ್ಣಿರಬಹುದು, ಎಚ್ಚರಿಕೆ ವಹಿಸಿ.

ಕರ್ಕಾಟಕ ರಾಶಿ: ನಿಮ್ಮ ಬಗ್ಗೆ ಇತರರು ಟೀಕಿಸುವಂತಾಗಬಹುದು, ಮಾತಿನಲ್ಲಿ ಹಿಡಿತವಿರಲಿ. ಕಚೇರಿಯಲ್ಲಿ ನಿಮ್ಮ ಸಲಹೆಗಳಿಗೆ ಮನ್ನಣೆ ಸಿಗದಿರಬಹುದು. ರಾಜಕೀಯ ಆಕಾಂಕ್ಷೆಗಳಿಗೆ ತಾಳ್ಮೆ ಅಗತ್ಯ. ಬೆನ್ನು ಅಥವಾ ಸೊಂಟ ನೋವು ಬಾಧಿಸಬಹುದು. ಇಷ್ಟವಿಲ್ಲದ ಕೆಲಸಗಳನ್ನು ಬಲವಂತಕ್ಕಾಗಿಯೂ ಮಾಡುವುದಿಲ್ಲ. ಯಾಂತ್ರಿಕ ಜೀವನದಿಂದ ಬೇಸರ ಮೂಡಲಿದೆ.

ಸಿಂಹ ರಾಶಿ: ಕೇಳಿಬರುವ ಕೆಲವು ಮಾತುಗಳು ಅವಮಾನಕರವೆನಿಸಿ, ಏನನ್ನಾದರೂ ಸಾಧಿಸುವ ಛಲ ಹೆಚ್ಚಾಗುತ್ತದೆ. ವಯೋಮಿತಿ ಮೀರಿದ್ದರೂ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಹಿರಿಯರ ಸಲಹೆ ಮೇರೆಗೆ ನಿಮ್ಮ ನಿರ್ಧಾರ ಬದಲಿಸಬೇಕಾಗಬಹುದು. ನಿಮ್ಮ ಮನಸ್ಥಿತಿ ಅರ್ಥಮಾಡಿಕೊಳ್ಳುವುದು ಕಷ್ಟ. ಅತಿಯಾದ ನಂಬಿಕೆಯಿಂದ ಆರಂಭಿಸಿದ ಕಾರ್ಯಗಳು ಬೇರೆಯದೇ ತಿರುವು ಪಡೆಯಲಿವೆ.

ಕನ್ಯಾ ರಾಶಿ: ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಿ. ಸಿಗದ ವಸ್ತುಗಳ ಬಗ್ಗೆ ವ್ಯಾಮೋಹ ಬೇಡ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿರಲಿ. ನ್ಯಾಯಾಲಯದ ವಿಷಯಗಳಲ್ಲಿ ಗಂಭೀರತೆ ಇರುವುದಿಲ್ಲ. ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸುವಿರಿ, ಇದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಇತರರೊಡನೆ ನಿಮ್ಮನ್ನು ಹೋಲಿಸಿಕೊಳ್ಳುವುದು ಬೇಡ.

ತುಲಾ ರಾಶಿ: ಇಷ್ಟವಿಲ್ಲದಿದ್ದರೂ ಕೆಲವು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಎಲ್ಲವೂ ವ್ಯರ್ಥ ಎಂಬ ಹತಾಶೆ ಕಾಡಬಹುದು. ಕಷ್ಟದ ನಂತರ ಸುಖ ಬರುತ್ತದೆ ಎಂಬ ಆಶಾವಾದದಿಂದ ನೋವುಗಳನ್ನು ಸಹಿಸಿಕೊಳ್ಳುವಿರಿ. ಸಾಧಕ ಮಹಿಳೆಯರಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ಮಿತಿಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುವಿರಿ. ಒಂದು ಘಟನೆಯು ನಿಮಗೆ ಜೀವನಪಾಠ ಕಲಿಸಲಿದೆ.

ವೃಶ್ಚಿಕ ರಾಶಿ: ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಮೂಡಲಿದೆ. ವಿರೋಧಿಗಳ ತಂತ್ರಗಳಿಗೆ ಬಗ್ಗದೆ ನಿಮ್ಮ ಮಾರ್ಗದಲ್ಲಿ ಮುನ್ನಡೆಯುವಿರಿ. ಕೆಲಸಗಳನ್ನು ಹಂಚಿಕೊಂಡು ಮಾಡುವುದರಿಂದ ಒತ್ತಡ ನಿವಾರಣೆಯಾಗಲಿದೆ. ಪರಸ್ಪರ ನಂಬಿಕೆ ಕೊರತೆಯಿಂದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಎಲ್ಲವೂ ನನ್ನಿಂದಲೇ ಎಂಬ ಅಹಂಕಾರ ಬೇಡ. ಹಳೆಯ ಸವಿ ನೆನಪುಗಳು ಸಂತಸ ತರಲಿವೆ.

ಧನು ರಾಶಿ: ದೀರ್ಘಕಾಲದ ನಂತರ ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ಸಮಯದ ಅಭಾವದಿಂದ ನಿಮ್ಮ ಕೆಲಸಗಳನ್ನು ಇತರರಿಗೆ ವಹಿಸುವಿರಿ. ಕುಟುಂಬದ ಕೆಲಸಗಳತ್ತ ಗಮನ ಹರಿಸುವುದು ಕಷ್ಟವಾಗಬಹುದು. ಅಹಂಕಾರದ ಮಾತುಗಳನ್ನು ಬಿಟ್ಟು, ಸರಳತೆಯಿಂದ ಕೆಲಸ ಸಾಧಿಸಿಕೊಳ್ಳಿ. ಇಂದಿನ ಒತ್ತಡಗಳು ತುಲನಾತ್ಮಕವಾಗಿ ಕಡಿಮೆ ಇರಲಿವೆ.

ಮಕರ ರಾಶಿ: ಸಣ್ಣ ಸಾಧನೆಯನ್ನೂ ದೊಡ್ಡದಾಗಿ ಪ್ರದರ್ಶಿಸುವಿರಿ. ಭಾವನಾತ್ಮಕವಾಗಿ ಆಪ್ತರೊಡನೆ ಕಷ್ಟ-ಸುಖ ಹಂಚಿಕೊಳ್ಳುವಿರಿ. ದಿನವನ್ನು ಹೆಚ್ಚು ಉಪಯುಕ್ತವಾಗಿಸಲು ಪ್ರಯತ್ನಿಸುವಿರಿ. ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬೆರೆಯುವಿರಿ. ಬೇರೆಯವರ ಜವಾಬ್ದಾರಿ ಹೊರಲು ಹಿಂದೇಟು ಹಾಕುವಿರಿ. ಹಣಕಾಸಿನ ಸದ್ಬಳಕೆಗೆ ದಾರಿ ಹುಡುಕಿ. ಮಕ್ಕಳ ಪ್ರಗತಿ ಆನಂದ ತರಲಿದೆ.

ಕುಂಭ ರಾಶಿ: ಜೀವನಸಂಗಾತಿಯಿಂದ ದೂರವಿರುವುದು ವಿರಹ ತರಲಿದೆ. ಇತರರ ಮಾತುಗಳು ನಿಮಗೆ ಪೀಡೆ ಎನಿಸಬಹುದು, ಹಾಗಾಗಿ ಮೌನಕ್ಕೆ ಶರಣಾಗುವಿರಿ. ನಿಮ್ಮ ದ್ವಂದ್ವ ಮನಸ್ಥಿತಿ ಕೆಲವರಿಗೆ ಇರುಸುಮುರುಸು ಉಂಟುಮಾಡಬಹುದು. ಗುಂಪುಗಾರಿಕೆಯಿಂದಾಗಿ ಕಲಹಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಕಾನೂನು ತೊಡಕುಗಳಿಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.

ಮೀನ ರಾಶಿ: ಇರುವ ಬೆರಳೆಣಿಕೆಯಷ್ಟು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವಿರಿ. ನಿಮ್ಮ ಜ್ಞಾನವೇ ನಿಮಗೆ ಶ್ರೀರಕ್ಷೆ. ಮನಸ್ಸು ಬೇರೆಡೆ ಹರಿದರೂ, ತಕ್ಷಣವೇ ಕರ್ತವ್ಯದತ್ತ ಮುಖ ಮಾಡುವಿರಿ. ಸಂಗಾತಿಯು ಹಳೆಯ ವಿಚಾರಗಳನ್ನು ಕೆದಕಿ ಮುಜುಗರ ತರಬಹುದು. ಪ್ರೇಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವಿರಿ. ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗದಿರಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *