ICC Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಪಾರುಪತ್ಯ ಮೆರೆದ ಆಸ್ಟ್ರೇಲಿಯನ್ನರು

 ICC Test Cricket Rankings: ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನೂತನ ಟೆಸ್ಟ್​ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೂವರು ಆಟಗಾರರು ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿರುವುದು ವಿಶೇಷ.ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಮೂರು ಸ್ಥಾನ ಜಿಗಿತ ಕಂಡರೆ, ಸ್ಟೀವ್ ಸ್ಮಿತ್ 1 ಸ್ಥಾನ ಮೇಲೇರಿದ್ದಾರೆ. ಹಾಗೆಯೇ ಮಾರ್ನಸ್ ಲಾಬುಶೇನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ವಿಶೇಷ ಎಂದರೆ ಐಸಿಸಿ ಟೆಸ್ಟ್​ ಶ್ರೇಯಾಂಕ ಇತಿಹಾಸದಲ್ಲೇ ಅಗ್ರ ಮೂರು ಸ್ಥಾನಗಳನ್ನು ಒಂದೇ ದೇಶದ ಆಟಗಾರರು ಅಲಂಕರಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್​ನ ದಿಗ್ಗಜರು ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-3 ನಲ್ಲಿ ಕಾಣಿಸಿಕೊಂಡು ಮಿಂಚಿದ್ದರು.1984 ರಲ್ಲಿ ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ (810), ಕ್ಲೈವ್ ಲಾಯ್ಡ್ (787), ಮತ್ತು ಲ್ಯಾರಿ ಗೋಮ್ಸ್ (773) ಅವರು ಕೊನೆಯ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಮೂರು ಸ್ಥಾನಗಳನ್ನು ಅಂಕರಿಸಿದ್ದರು. ಇದೀಗ 2 ದಶಕಗಳ ಬಳಿಕ ಆಸ್ಟ್ರೇಲಿಯಾದ ಮೂವರು ಆಟಗಾರರು ಟಾಪ್-3 ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.1- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 903 ಪಾಯಿಂಟ್ಸ್​2- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 885 ಪಾಯಿಂಟ್ಸ್​3- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 884 ಪಾಯಿಂಟ್ಸ್​
4- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)- 883 ಪಾಯಿಂಟ್ಸ್​5- ಬಾಬರ್ ಆಝಂ (ಪಾಕಿಸ್ತಾನ್)- 862 ಪಾಯಿಂಟ್ಸ್​6- ಜೋ ರೂಟ್ (ಇಂಗ್ಲೆಂಡ್)- 861 ಪಾಯಿಂಟ್ಸ್​7- ಡೇರಿಲ್ ಮಿಚೆಲ್ (ನ್ಯೂಜಿಲೆಂಡ್)- 792 ಪಾಯಿಂಟ್ಸ್​
8- ದಿಮುತ್ ಕರುಣರತ್ನೆ (ಶ್ರೀಲಂಕಾ)- 780 ಪಾಯಿಂಟ್ಸ್​9- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 777 ಪಾಯಿಂಟ್ಸ್​10- ರಿಷಭ್ ಪಂತ್ (ಭಾರತ)- 758 ಪಾಯಿಂಟ್ಸ್​

source https://tv9kannada.com/photo-gallery/cricket-photos/icc-test-rankings-australia-claim-top-3-spots-in-batting-rankings-after-wtc-final-zp-600924.html

Leave a Reply

Your email address will not be published. Required fields are marked *