Vitamin B7 Deficiency:ದೇಹದಲ್ಲಿ ವಿಟಮಿನ್ 7 ಅನ್ನು ಕಾಪಾಡಿಕೊಳ್ಳಬೇಕಾದರೆ ಈ ವಿಟಮಿನ್ ಸೇವನೆ ನಿರಂತರವಾಗಿರಬೇಕು. ಈ ವಿಟಮಿನ್ ಅನ್ನು ದಿನಕ್ಕೆ 30 ಗ್ರಾಂ ಮಾತ್ರ ಸೇವಿಸಿದರೆ ಸಾಕು.

Vitamin B7 Deficiency : ವಿಟಮಿನ್ ಬಿ 7 ಅನ್ನು ಬಯೋಟಿನ್ ಎಂದೂ ಕರೆಯುತ್ತಾರೆ. ಇದು ನಿಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕಣ್ಣು, ಕೂದಲು, ಚರ್ಮ ಮತ್ತು ಮೆದುಳಿನ ಕಾರ್ಯಕ್ಕೆ ಇದು ಮುಖ್ಯವಾಗಿದೆ. ಇದು ಯಕೃತ್ತಿನ ಕಾರ್ಯವನ್ನು ಸಹ ಬೆಂಬಲಿಸುತ್ತದೆ. ಬಯೋಟಿನ್ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಅಂದರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಸ್ಟೋರ್ ಆಗುವುದಿಲ್ಲ. ಈ ಕಾರಣದಿಂದಾಗಿ ದೇಹದಲ್ಲಿ ಈ ವಿಟಮಿನ್ ಅನ್ನು ಕಾಪಾಡಿಕೊಳ್ಳಬೇಕಾದರೆ ಈ ವಿಟಮಿನ್ ಸೇವನೆ ನಿರಂತರವಾಗಿರಬೇಕು. ಸಾಮಾನ್ಯವಾಗಿ, ಬಯೋಟಿನ್ ಕೊರತೆ ಬಹಳ ಅಪರೂಪ. ಏಕೆಂದರೆ ಈ ವಿಟಮಿನ್ ಅನ್ನು ದಿನಕ್ಕೆ 30 ಗ್ರಾಂ ಮಾತ್ರ ಸೇವಿಸಿದರೆ ಸಾಕು. ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾಗಿರುವ ಬಯೋಟಿನ್ ಸಿಗುತ್ತದೆ.
ವಿಟಮಿನ್ B7 ಹೊಂದಿರುವ ಆಹಾರಗಳು :
1. ಬಾಳೆಹಣ್ಣು : ಬಾಳೆಹಣ್ಣು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಅವು ಫೈಬರ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಬಿ ಯನ್ನು ಒಳಗೊಂಡಿದೆ. ಅಲ್ಲದೆ ಈ ಹಣ್ಣು ತಾಮ್ರ ಮತ್ತು ಪೊಟ್ಯಾಸಿಯಮ್‌ಗಳಿಂದ ಸಮೃದ್ದವಾಗಿದೆ. ಇದರಲ್ಲಿ ಬಯೋಟಿನ್ ಕೂಡಾ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಹಣ್ಣನ್ನು ಹಾಗೆಯೇ ತಿನ್ನುವೂ ರೂಢಿ. ಇನ್ನು ಕೆಲವರು ಈ ಹಣ್ಣನ್ನು ಹಿಸುಕಿ ಹಾಲಿನಲ್ಲಿ ಬೆರೆಸಿ ತಿನ್ನುತ್ತಾರೆ.
2. ಸಿಹಿ ಗೆಣಸು :
ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಕ್ಯಾರೊಟಿನಾಯ್ಡ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. 1/2-ಕಪ್ ಅಂದರೆ ಸುಮಾರು 125 ಗ್ರಾಮ ನಷ್ಟು ಬೇಯಿಸಿದ ಸಿಹಿ ಗೆಣಸು, 2.4 ಮೈಕ್ರೋಗ್ರಾಂಗಳಷ್ಟು ವಿಟಮಿನ್ B7ಅನ್ನು ಹೊಂದಿರುತ್ತದೆ. ಇದು ದೈನಂದಿನ ಅವಶ್ಯಕತೆಯ 8 ಪ್ರತಿಶತದಷ್ಟಾಗಿರುತ್ತದೆ. ಸಿಹಿ ಗೆಣಸು ಬಹಳ ಸುಲಭವಾಗಿ ಬೇಯುತ್ತದೆ. ಇದನ್ನು ಮೈಕ್ರೊವೇವ್ ನಲ್ಲಿ ಕೂಡಾ ಬೇಯಿಸಬಹುದು. ಇದನ್ನೂ ಮನೆಯಲ್ಲಿ ತಯಾರಿಸುವ ಬರ್ಗರ್ ಪ್ಯಾಟಿಗಳಿಗೆ ಬಳಸಬಹುದು.
3. ನಟ್ಸ್ ಮತ್ತು ಸೀಡ್ಸ್ :
ನಟ್ಸ್ ಮತ್ತು ಸೀಡ್ಸ್ ಅಪರ್ಯಾಪ್ತ ಕೊಬ್ಬು ಮತ್ತು ಪ್ರೋಟೀನ್ ಅಧಿಕವಾಗಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ B7 ಅಡಗಿದೆ. ಉದಾಹರಣೆಗೆ, ಸೂರ್ಯಕಾಂತಿ ಬೀಜಗಳ 1/4-ಕಪ್ (20-ಗ್ರಾಂ) ಸೇವಿಸಿದರೆ 2.6 ಮೈಕ್ರೋಗ್ರಾಂಗಳಷ್ಟು ವಿಟಮಿನ್ B7 ಸಿಗುತ್ತದೆ. 1/4-ಕಪ್ (30-ಗ್ರಾಂ) ಬಾದಾಮಿಯ ಸೇವೆಯು 1.5 ಮೈಕ್ರೋಗ್ರಾಂಗಳಷ್ಟು ಬಯೋಟಿನ್ ಅನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಅದರ ನಿಯಮಿತ ಸೇವನೆ ಮಾಡುವುದು ಬಹಳ ಮುಖ್ಯ.
4. ಅಣಬೆ :
ಅಣಬೆಗಳನ್ನು ಪೋಷಕಾಂಶ-ಭರಿತ ಶಿಲೀಂಧ್ರಗಳು (nutrient-rich fungus) ಎಂದು ಕರೆಯಲಾಗುತ್ತದೆ. ಇದು ವಿಟಮಿನ್ B7ನ ಪ್ರಮುಖ ಮೂಲ. ಸುಮಾರು 120 ಗ್ರಾಂ ಅಣಬೆಗಳು 2.6 ಮೈಕ್ರೋಗ್ರಾಂಗಳಷ್ಟು ಬಯೋಟಿನ್ ಅನ್ನು ಹೊಂದಿರುತ್ತವೆ. ಇದು ದೈನಂದಿನ ಅವಶ್ಯಕತೆಯ 10 ಪ್ರತಿಶತವಾಗಿದೆ. ಅದೇ ಸಮಯದಲ್ಲಿ, 1 ಕಪ್ (70-ಗ್ರಾಂ) ತಾಜಾ ಅಣಬೆಗಳು 5.6 ಮೈಕ್ರೋಗ್ರಾಂಗಳಷ್ಟು ವಿಟಮಿನ್ B7 ಅನ್ನು ಹೊಂದಿರುತ್ತವೆ. ಇದು ದೈನಂದಿನ ಅಗತ್ಯದ 19 ಪ್ರತಿಶತದಷ್ಟಾಗುತ್ತದೆ.
5. ಮೊಟ್ಟೆಯ ಹಳದಿ ಭಾಗ :
ಮೊಟ್ಟೆಯಲ್ಲಿ ವಿಟಮಿನ್ ಬಿ, ಪ್ರೋಟೀನ್, ಕಬ್ಬಿಣ ಮತ್ತು ರಂಜಕ ಸಮೃದ್ಧವಾಗಿದೆ. ಮೊಟ್ಟೆಯ ಹಳದಿ ಲೋಳೆಯು ಬಯೋಟಿನ್‌ನ ಶ್ರೀಮಂತ ಮೂಲವಾಗಿದೆ. ಒಂದು ಸಂಪೂರ್ಣ ಬೇಯಿಸಿದ ಮೊಟ್ಟೆ (50 ಗ್ರಾಂ) ಸುಮಾರು 10 ಮೈಕ್ರೋಗ್ರಾಂಗಳಷ್ಟು ಬಯೋಟಿನ್ ಅನ್ನು ಹೊಂದಿರುತ್ತದೆ. ಇದು ದೈನಂದಿನ ಅಗತ್ಯತೆಯ 33 ಪ್ರತಿಶತವಾಗಿದೆ. ವಿಟಮಿನ್ ಬಿ 7 ಸರಿಯಾಗಿ ನಿಮ್ಮ ದೇಹಕ್ಕೆ ಸಿಗಬೇಕೆಂದರೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನಬೇಕು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)
Source: https://zeenews.india.com/kannada/health/consume-these-food-to-maintain-vitamin-7-in-body-135028