Home Remedy for Acidity : ಆಯುರ್ವೇದದ ಪ್ರಕಾರ,ಕೆಲವು ಗಿಡಮೂಲಿಕೆ ಪಾನೀಯಗಳು ಗ್ಯಾಸ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ವಿಶೇಷವೆಂದರೆ ಇವುಗಳಲ್ಲಿ ಹೆಚ್ಚಿನವು ಪ್ರತಿ ಮನೆಯ ಅಡುಗೆಮನೆಯಲ್ಲಿ ಬಳಸುವಂಥದ್ದೆ.
- ಅನೇಕ ಬಾರಿ ಜನರು ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುತ್ತಾರೆ.
- ತೀರಾ ಚಿಕ್ಕದಾಗಿ ಕಾಣುವ ಈ ಸಮಸ್ಯೆ ಕೆಲವೊಮ್ಮೆ ಬಹಳ ದೊಡ್ಡದಾಗಿ ಕಾಡುತ್ತದೆ
- ಗಿಡಮೂಲಿಕೆ ಪಾನೀಯಗಳು ಗ್ಯಾಸ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ
ಬೆಂಗಳೂರು :Acidity Home Remedy :ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಂಡು ಕೆಲಸ ಮಾಡುವಾಗ ಆಗಿರಬಹುದು ಅಥವಾ ಮನೆಕೆಲಸದ ನಡುವೆ ಆಗಿರಬಹುದು ನಾವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಬಿಡುತ್ತೇವೆ. ಇದೆಲ್ಲದರ ಮಧ್ಯೆ, ಅನೇಕ ಬಾರಿ ಜನರು ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯಿಂದಲೂ ಬಳಲುತ್ತಾರೆ.ತೀರಾ ಚಿಕ್ಕದಾಗಿ ಕಾಣುವ ಈ ಸಮಸ್ಯೆ ಕೆಲವೊಮ್ಮೆ ಬಹಳ ದೊಡ್ಡದಾಗಿ ಕಾಡುತ್ತದೆ. ನೀವು ಕೂಡಾ ಪದೇ ಪದೇ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ವಾಯು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ,ಇವುಗಳ ನಿವಾರಣೆಗೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು. ಆಯುರ್ವೇದದ ಪ್ರಕಾರ,ಕೆಲವು ಗಿಡಮೂಲಿಕೆ ಪಾನೀಯಗಳು ಗ್ಯಾಸ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ವಿಶೇಷವೆಂದರೆ ಇವುಗಳಲ್ಲಿ ಹೆಚ್ಚಿನವು ಪ್ರತಿ ಮನೆಯ ಅಡುಗೆಮನೆಯಲ್ಲಿ ಬಳಸುವಂಥದ್ದೆ.
ಜೀರಿಗೆ ನೀರು :
ಜೀರಿಗೆ ಭಾರತೀಯ ಅಡುಗೆಮನೆಯ ಪ್ರಮುಖ ಮಸಾಲೆಯಾಗಿದೆ. ಜೀರಿಗೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.ಇದನ್ನು ತಯಾರಿಸುವುದು ಸುಲಭ.ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಈ ನೀರು ಕುದ್ದು ಅರ್ಧಕ್ಕೆ ಇಳಿದಾಗ ಗ್ಯಾಸ್ ಆಫ್ ಮಾಡಿ. ನಂತರ ನೀರನ್ನು ಫಿಲ್ಟರ್ ಮಾಡಿ ಸೇವಿಸಿ.
ಓಮ ಕಾಳಿನ ನೀರು :
ಓಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೊಟ್ಟೆಯ ಗ್ಯಾಸ್,ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸಲು ಇದು ಸಹಕಾರಿಯಾಗಿದೆ.ಇದು ಡಿಟಾಕ್ಸ್ ನೀರಿನಂತೆ ಕೆಲಸ ಮಾಡುತ್ತದೆ. ಓಮ ಕಾಳಿನಲ್ಲಿರುವ ಕಿಣ್ವಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.ಇದರಿಂದಾಗಿ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಇದು ಹೊಟ್ಟೆ ನೋವು ಮತ್ತು ಊತವನ್ನು ಕಡಿಮೆ ಮಾಡುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
ಸೊಂಪು ನೀರು :
ಸೊಂಫು ನೀರು ಅಥವಾ ಟೀ ಗ್ಯಾಸ್ ನಿಂದ ಪರಿಹಾರ ಪಡೆಯಲು ಸುಲಭ ಮತ್ತು ಪರಿಣಾಮಕಾರಿ ಮನೆಮದ್ದು.ಸೊಂಫು ಆಂಟಿಸ್ಪಾಸ್ಮೊಡಿಕ್ ಮತ್ತು ಕಾರ್ಮಿನೇಟಿವ್ ಗುಣಲಕ್ಷಣಗಳನ್ನು ಹೊಂದಿದ್ದು ಗ್ಯಾಸ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ.ಅದರ ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳಿಂದಾಗಿ,ಇದು ಸೆಳೆತವನ್ನು ನಿವಾರಿಸುತ್ತದೆ.
ಇಂಗು ನೀರು :
ಇಂಗು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಎಂದು ನಮಗೆಲ್ಲರಿಗೂ ತಿಳಿದಿದೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಶತಮಾನಗಳಿಂದ ಬಳಸಲಾಗುತ್ತದೆ.ಇದು ಆಂಟಿಸ್ಪಾಸ್ಮೊಡಿಕ್ ಮತ್ತು ಕಾರ್ಮಿನೇಟಿವ್ ಗುಣಲಕ್ಷಣಗಳನ್ನು ಹೊಂದಿದೆ. ಈ ಕಾರಣದಿಂದ ಗ್ಯಾಸ್ ಸಮಸ್ಯೆಯಿಂದ ಸುಲಭ ಪರಿಹಾರ ನೀಡುತ್ತದೆ.
Source : https://zeenews.india.com/kannada/health/super-drink-to-reduce-gas-and-acidity-problem-206770