ಮಧ್ಯಾಹ್ನ ಊಟದ ಜೊತೆ ಮಜ್ಜಿಗೆ ಕುಡಿಯುತ್ತೀರಾ..! ಹಾಗಿದ್ರೆ ಈ ವಿಚಾರ ನಿಮ್ಗೆ ತಿಳಿದಿರಬೇಕು.

  • ಮಜ್ಜಿಗೆ ಪ್ರತಿ ಋತುವಿನಲ್ಲಿ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ.
  • ದೇಸಿ ಪಾನಿಯ ಮಜ್ಜಿಗೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು.
  • ಊಟದ ಜೊತೆ ಮಜ್ಜಿಗೆ ಸೇವಿಸಿದರೆ ದೇಹಕ್ಕೆ ಏನಾಗುತ್ತದೆ ಗೊತ್ತೆ..?

Butter milk health benefits : ಬೇಸಿಗೆ ಪ್ರಾರಂಭವಾಗಿದ್ದು, ಸೂರ್ಯ ಶಾಖದಿಂದ ಪಾರಾಗಲು ಜನರು ವಿವಿಧ ಮಾರ್ಗ ಹಿಡಿಯುತ್ತಿದ್ದಾರೆ. ಈ ಪೈಕಿ ದೇಸಿ ಪಾನಿಯ ಮಜ್ಜಿಗೆ ಕುಡಿಯುವವರು ಹೆಚ್ಚು. ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ನೀವು ಮಧ್ಯಾಹ್ನದ ಊಟದ ಜೊತೆ ಮಜ್ಜಿಗೆ ಕುಡಿಯುತ್ತೀರಾ.. ಹಾಗಿದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು..

ಬೇಸಿಗೆ ಆರಂಭವಾಗುತ್ತಿದ್ದಂತೆ ದಿನನಿತ್ಯದ ಆಹಾರ ಪದ್ದತಿ ಬದಲಾಗಬೇಕು. ಸೂರ್ಯನ ಶಾಖದಿಂದ ಪಾರಾಗಲು ಊಟದ ಜೊತೆ ಸೇವಿಸುವ ಕೆಲವು ಆಹಾರ ಪದಾರ್ಥಗಳಿವೆ. ಅವುಗಳಿಲ್ಲದೆ ಊಟ ಅಪೂರ್ಣ. ಅಂತಹ ಒಂದು ಆಹಾರ ಪದಾರ್ಥಗಳಲ್ಲಿ ಮಜ್ಜಿಗೆಯೂ ಒಂದು. ಹೆಚ್ಚಿನವರಿಗೆ ಊಟದ ಜೊತೆ ಮಜ್ಜಿಗೆ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಹಾಗಿದ್ರೆ ಇದು ಆರೋಗ್ಯಕ್ಕೆ ಒಳೆಯದಾ..? ಅಥವಾ ಕೆಟ್ಟದ್ದಾ..? ನೋಡೋಣ ಬನ್ನಿ

1. ಮಜ್ಜಿಗೆ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ. ವಿಶೇಷವಾಗಿ ಊಟದ ಸಮಯದಲ್ಲಿ ಮಜ್ಜಿಗೆ ಕುಡಿಯುವುದರಿಂದ ಪೌಷ್ಟಿಕಾಂಶದ ಶಕ್ತಿ ಹೆಚ್ಚುತ್ತದೆ. ಇದು ದೇಹಕ್ಕೆ ಉಲ್ಲಾಸ ಮತ್ತು ಚೈತನ್ಯವನ್ನು ನೀಡುತ್ತದೆ. 

2. ಮಧ್ಯಾಹ್ನದ ಊಟದ ಜೊತೆಗೆ ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಬಯಾಟಿಕ್ಸ್ ಮತ್ತು ಇತರ ಪೋಷಕಾಂಶಗಳು ದೊರೆಯುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಮಧ್ಯಾಹ್ನದ ಊಟದ ಜೊತೆ ಮಜ್ಜಿಗೆ ಕುಡಿಯುವುದರಿಂದ ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿ ನಿವಾರಣೆಯಾಗುತ್ತದೆ. 

3. ಮಜ್ಜಿಗೆಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಬೇಸಿಗೆ ದಿನಗಳಲ್ಲಿ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಮಧ್ಯಾಹ್ನ ಮಜ್ಜಿಗೆ ಕುಡಿದರೆ ದೇಹದಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುತ್ತದೆ. 

4. ಮಜ್ಜಿಗೆಯನ್ನು ಕುಡಿಯುವುದರಿಂದ ದೇಹವು ಉಲ್ಲಾಸ ಮತ್ತು ಶಾಂತಿಯುತವಾಗಿರುತ್ತದೆ ಏಕೆಂದರೆ ಅದರ ತಂಪಾಗಿಸುವ ಮತ್ತು ವಿಶ್ರಾಂತಿ ಗುಣಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. 

5. ಮಜ್ಜಿಗೆ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಜೊತೆಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ, ಈ ಎಲ್ಲಾ ಪೋಷಕಾಂಶಗಳು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ.

Source : https://zeenews.india.com/kannada/health/drinking-butter-after-meal-health-benefits-in-kannada-197099

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *