ಮಳಯದಗ ಭರತ- ಪಕ ಪದಯ ರದದ; ಸಮ ಫನಲಗ ಎಟರಕಟಟ ಉಭಯ ತಡಗಳ

ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಜೂನ್ 17 ರಂದು ಹಾಂಗ್​ಕಾಂಗ್‌ನ ಮೊಂಗ್ ಕಾಕ್‌ನಲ್ಲಿರುವ ಮಿಷನ್ ಗ್ರೌಂಡ್ ರೌಂಡ್​ನಲ್ಲಿ ನಡೆಯಬೇಕಿದ್ದ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಈ ಮೂಲಕ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗಿದ್ದು, ಇದೀಗ ಎರಡೂ ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿವೆ.ಭಾರತ ಮಹಿಳಾ ಎ ತಂಡವು ಆಡಿದ 2 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಮಳೆಯಿಂದ ರದ್ಧಾದ ಪಂದ್ಯದೊಂದಿಗೆ 3 ಅಂಕಗಳನ್ನು ಪಡೆದುಕೊಂಡಿತ್ತು. ಪಾಕಿಸ್ತಾನ ಕೂಡ ಅದೇ ಸಂಖ್ಯೆಯ ಪಂದ್ಯಗಳಲ್ಲಿ ಇದೇ ರೀತಿಯ ಅಂಕಗಳನ್ನು ಹೊಂದಿತ್ತು. ಇದೀಗ ಉಭಯ ತಂಡಗಳ ನಡುವಣ ಪಂದ್ಯ ರದ್ದಾಗಿರುವುದರಿಂದ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ.ತಲಾ 4 ಅಂಕಗೊಂದಿಗೆ ಕೊನೆಯ ನಾಲ್ಕರ ಘಟಕ್ಕೆ ಎಂಟ್ರಿಕೊಟ್ಟಿರುವ ಎರಡು ತಂಡಗಳು ಬಿ ಗುಂಪಿನ ಎದುರಾಳಿಗಳನ್ನು ಎದುರಿಸಲಿವೆ. ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎ ಎರಡನೇ ಸ್ಥಾನ ಗಳಿಸಿದೆ.ಇದೀಗ ಸೆಮಿ ಫೈನಲ್​ಗೆ ಎಂಟ್ರಿಕೊಟ್ಟಿರುವ ಶ್ವೇತಾ ಸೆಹ್ರಾವತ್ ಅವರ ಭಾರತ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ಮಹಿಳಾ ತಂಡವನ್ನು ಎದುರಿಸಲಿದೆ.  ಇತ್ತ ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನ ತಂಡ ಬಾಂಗ್ಲಾದೇಶ ಎ ವಿರುದ್ಧ ಹೋರಾಡಲಿದೆ.ಇದಕ್ಕೂ ಮೊದಲು ಆಡಿದ ಮೊಲದ ಪಂದ್ಯದಲ್ಲೇ ಹಾಂಗ್​ಕಾಂಗ್ ತಂಡವನ್ನು ಭಾರತ 9 ವಿಕೆಟ್‌ಗಳ ಅಂತರದಿಂದ ಸೋಲಿಸಿತ್ತು. ಆ ಬಳಿಕ ನೇಪಾಳ ವನಿತಾ ತಂಡದ ವಿರುದ್ಧ ನಡೆಯಬೇಕಿದ್ದ ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು. 12 ಲೀಗ್ ಹಂತದ ಪಂದ್ಯಗಳಲ್ಲಿ 7 ಪಂದ್ಯಗಳನ್ನು ಮಳೆಯಿಂದಾಗಿ ರದ್ದುಗೊಳಿಸಿರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿರುವುದಂತೂ ಖಚಿತ.

source https://tv9kannada.com/photo-gallery/cricket-photos/india-vs-pakistan-womens-emerging-asia-cup-match-abandoned-due-to-rain-psr-602956.html

Leave a Reply

Your email address will not be published. Required fields are marked *