MLC 2023: ಮಲಲರ ರಯಡ ಡಪಲಸಸ: TSK ತಡದ 7 ವದಶ ಆಟಗರರ ಇವರ

MLC 2023: ಅಮೆರಿಕದಲ್ಲಿ ನಡೆಯಲಿರುವ ಮೇಜರ್ ಲೀಗ್​ ಕ್ರಿಕೆಟ್ ಟೂರ್ನಿಗಾಗಿ ಸಿಎಸ್​ಕೆ ಫ್ರಾಂಚೈಸಿಯ ಟೆಕ್ಸಾಸ್ ಸೂಪರ್ ಕಿಂಗ್ಸ್ (TSK) ತನ್ನ ವಿದೇಶಿ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.15 ಸದ್ಯರ ಈ ತಂಡದಲ್ಲಿ ಒಟ್ಟು 7 ವಿದೇಶಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. ವಿಶೇಷ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಬಹುತೇಕ ಆಟಗಾರರನ್ನೇ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.ಇಲ್ಲಿ TSK (ಟೆಕ್ಸಾಸ್ ಸೂಪರ್ ಕಿಂಗ್ಸ್) ತಂಡದ ನಾಯಕರಾಗಿ ಸಿಎಸ್​ಕೆ ತಂಡದ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್ ಕಾಣಿಸಿಕೊಳ್ಳಲಿದ್ದಾರೆ.ಹಾಗೆಯೇ ಈ ಬಾರಿಯ ಐಪಿಎಲ್​ನೊಂದಿಗೆ ಸಿಎಸ್​ಕೆ ತಂಡಕ್ಕೆ ವಿದಾಯ ಹೇಳಿದ್ದ ಅಂಬಾಟಿ ರಾಯುಡು ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲು ಒಪ್ಪಂದ ಮಾಡಿಕೊಂಡಿದ್ದಾರೆ.ಇವರಲ್ಲದೆ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುವ ಸೌತ್ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ ಮೇಜರ್ ಲೀಗ್​ ಕ್ರಿಕೆಟ್​ನಲ್ಲಿ ಟೆಕ್ಸಾಸ್ ಪರ ಆಡಲಿರುವುದು ವಿಶೇಷ.ಇನ್ನು ಪ್ರಸ್ತುತ ಸಿಎಸ್​ಕೆ ತಂಡ ಭಾಗವಾಗಿರುವ ಆರಂಭಿಕ ಆಟಗಾರ ನ್ಯೂಜಿಲೆಂಡ್ ಡೆವೊನ್ ಕಾನ್ವೆ ಮತ್ತೊಮ್ಮೆ ಸಿಎಸ್​ಕೆ ಫ್ರಾಂಚೈಸಿಯ ಹೊಸ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ.ಹಾಗೆಯೇ ನ್ಯೂಜಿಲೆಂಡ್ ಆಟಗಾರ ಮಿಚೆಲ್ ಸ್ಯಾಂಟ್ನರ್ ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್​ ಪರ ಆಡಲಿದ್ದಾರೆ. ಸ್ಯಾಂಟ್ನರ್ ಕೂಡ ಪ್ರಸ್ತುತ ಸಿಎಸ್​ಕೆ ತಂಡದ ಆಟಗಾರ ಎಂಬುದು ವಿಶೇಷ.ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸಿಎಸ್​ಕೆ ಮಾಲೀಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಆಡಿದ್ದ ಜೆರಾಲ್ಡ್ ಕೋಟ್ಜಿ ಕೂಡ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಆಸ್ಟ್ರೇಲಿಯಾ ಆಟಗಾರ ಡೇನಿಯಲ್ ಸ್ಯಾಮ್ಸ್​ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಟಿಎಸ್​ಕೆ ಪರ ಕಣಕ್ಕಿಳಿಯಲಿದ್ದಾರೆ.ಸಿಎಸ್​ಕೆ ತಂಡದ ಬೌಲಿಂಗ್ ಕೋಚ್ ಆಗಿರುವ ಡ್ವೇನ್ ಬ್ರಾವೊ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

source https://tv9kannada.com/photo-gallery/cricket-photos/mlc-2023-texas-super-kings-squad-tsk-foreign-players-kannada-news-zp-602934.html

Leave a Reply

Your email address will not be published. Required fields are marked *