ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಯೋಗ ದಿನಾಚರಣೆಯನ್ನು ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ ವಿಜಯಕುಮಾರ್ ಅವರು ಮಾತನಾಡುತ್ತಾ, ಯೋಗ ಇಂದು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕೇವಲ ದಿಲ್ಲಿ, ಸಂಘ ಸಂಸ್ಥೆಗಳಿಗೆ ಸೀಮಿತವಾಗಿದ್ದ ಯೋಗ ಇಂದು ವಿಶೇಷ ‘ಯೋಗ-ದಿನ’ವಾಗುವಲ್ಲಿ ಭಾರತೀಯರಾದ ನಾವೆಲ್ಲರೂ ಅರ್ಹರು, ಅಲ್ಲದೆ ಮಕ್ಕಳಾದ ನೀವು ಯೋಗವನ್ನು ನಿತ್ಯದ ಅವಶ್ಯಕತೆಗಳಲ್ಲಿ ಯೋಗವು ಒಂದು ಭಾಗವಾಗಿ ಪರಿಗಣಿಸಿ, ಯೋಗವು ಕೇವಲ ಈ ದಿನ ಕಷ್ಟೇ ಸೀಮಿತವಾಗದೇ ವರ್ಷದ 365 ದಿನಗಳಲ್ಲಿ ಯೋಗವನ್ನು ನಿಮ್ಮ ಜೀವನದಲ್ಲಿ ಸಕ್ರಿಯವಾಗಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯ, ನಿಮ್ಮ ವಿದ್ಯಾಭ್ಯಾಸಕ್ಕೂ ಪೂರಕವಾಗಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ಯೋಗಾ ತರಬೇತಿಯನ್ನು ನೀಡುವುದರ ಜೊತೆಗೆ ಯೋಗಾ ದಿನಾಚರಣೆಯ ಅಂಗವಾಗಿ ವಿವಿಧ ಆಸನಗಳನ್ನು ಮಕ್ಕಳಿಂದ ಮಾಡಿಸುವುದರ ಮೂಲಕ ಯೋಗಾ ದಿನವನ್ನು ಯಶಸ್ವಿಗೊಳಿ, ಮಕ್ಕಳಿಗೆ ಕಳೆದ 10 ದಿನಗಳಿಂದ ಯೋಗಾ ತರಬೇತಿ ನೀಡಿದ ಶ್ರೀಮತಿ ಸುನಿತಾ ಯೋಗ ತರಬೇತುದಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ವಿಜಯಕುಮಾರ್ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡೆಮಿ ಅಡ್ಮಿನಿಸ್ಟ್ರೇಟರ್ ಡಾ ಸ್ವಾಮಿ ಕೆ ಎನ್, ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ ಡಿ, ಐ, ಸಿ. ಎಸ್. ಸಿ ಪ್ರಿನ್ಸಿಪಾಲರಾದ ಬಸವರಾಜಯ್ಯ ಪಿ ಸಂಸ್ಥೆಯ ನಿರ್ದೇಶಕರಾದ ಪೃಥ್ವೀಶ್ ಎಸ್ ಎಂ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕರೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.