IPL 2023: ಚೆನ್ನೈ ವಿರುದ್ಧ ಸೊನ್ನೆ ಸುತ್ತಿದ ಸಂಜುಗೆ ದಂಡದ ಬರೆ ಎಳೆದ ಬಿಸಿಸಿಐ..!

IPL 2023: ಚೆನ್ನೈ ವಿರುದ್ಧ ಸೊನ್ನೆ ಸುತ್ತಿದ ಸಂಜುಗೆ ದಂಡದ ಬರೆ ಎಳೆದ ಬಿಸಿಸಿಐ..!
IPL 2023 BCCI slaps rs12 lakh fine on RR captain Sanju Samson for Code of Conduct breach

ಚೆನ್ನೈನ ಭದ್ರಕೋಟೆಯಲ್ಲಿ ಸಿಎಸ್​ಕೆ ತಂಡವನ್ನು ಸೋಲಿಸಿದ ರಾಜಸ್ಥಾನ್ ರಾಯಲ್ಸ್ (CSK vs RR) ತಂಡದ ನಾಯಕ ಸಂಜು ಸ್ಯಾಮ್ಸನ್​ಗೆ (Sanju Samson) ಬಿಸಿಸಿಐ (BCCI) ಭಾರಿ ದಂಡದ ಬರೆ ಎಳೆದಿದೆ. ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 16 ನೇ ಐಪಿಎಲ್‌ನ 17 ನೇ ಪಂದ್ಯದಲ್ಲಿ ಸ್ಲೋ ಓವರ್ ರೇಟ್‌ಗಾಗಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ಗೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ. ಸ್ಲೋ ಓವರ್ ರೇಟ್ (slow over rate) ನಿಯಮ ಉಲ್ಲಂಘನೆಯಿಂದಾಗಿ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಚೆನ್ನೈ ವಿರುದ್ಧ ನಿಧಾನಗತಿಯ ಓವರ್ ರೇಟ್‌ಗಾಗಿ ಸಂಜು ಈ ಶಿಕ್ಷೆಯನ್ನು ಎದುರಿಸಬೇಕಾಗಿದೆ. ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (Chepauk Stadium) ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಿಧಾನಗತಿಯ ಓವರಿಗಾಗಿ ದಂಡ ವಿಧಿಸಲಾಗಿದೆ. ಈ ಸೀಸನ್​ನಲ್ಲಿ ಇದು ತಂಡದ ಮೊದಲ ತಪ್ಪಾಗಿರುವುದರಿಂದ, ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆಯ ಪ್ರಕಾರ ರೂ 12 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಡುಪ್ಲೆಸಿಸ್ ನಂತರ ಸಂಜುಗೆ ದಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಈಗಾಗಲೇ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಅದರ ನಂತರ ಇದೀಗ ಸಂಜು ಸ್ಯಾಮ್ಸನ್​ಗೂ ದಂಡ ಹಾಕಲಾಗಿದೆ. ಐಪಿಎಲ್ ನೀತಿ ಸಂಹಿತೆ ಪ್ರಕಾರ ಸ್ಲೋ ಓವರ್ ರೇಟ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಂಜುಗೆ ದಂಡ ವಿಧಿಸಲಾಗಿದೆ. ಆದರೆ ಬಿಸಿಸಿಐನ ಈ ದಂಡದ ಹೊರತಾಗಿಯೂ ರಾಜಸ್ಥಾನ್ ತಂಡ ಈ ಪಂದ್ಯದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿತು. ಅದೆನೆಂದರೆ, ಬರೋಬ್ಬರಿ 15 ವರ್ಷಗಳ ನಂತರ ರಾಜಸ್ಥಾನ್ ತಂಡ ಚೆಪಾಕ್‌ನಲ್ಲಿ ಗೆಲುವು ಸಾಧಿಸಿದೆ. ಅಂದರೆ ಧೋನಿ ಪಡೆ ಒಂದೂವರೆ ದಶಕದ ನಂತರ ರಾಜಸ್ಥಾನ ವಿರುದ್ಧ ತನ್ನ ಮನೆಯಲ್ಲೇ ಸೋಲನುಭವಿಸಿದೆ.

IPL 2023: ರಾಜಸ್ಥಾನ್ ವಿರುದ್ಧ ಸೋತರೂ ಹೀಗೊಂದು ದಾಖಲೆ ಬರೆದ ಜಡೇಜಾ..!

3 ರನ್‌ಗಳಿಂದ ಸೋತ ಚೆನ್ನೈ

ಈ ಪಂದ್ಯದಲ್ಲಿ ಧೋನಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ತಂಡದ ಪರ ಆರಂಭಿಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿದರು. ಬಳಿಕ ಈ ಗುರಿ ಬೆನ್ನಟ್ಟಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಜಡೇಜಾ ಮತ್ತು ಧೋನಿ ಅಂತಿಮ ಓವರ್‌ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯುವುದರೊಂದಿಗೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಅಂತಿಮ ಓವರ್‌ನಲ್ಲಿ ಚೆನ್ನೈಗೆ 3 ರನ್‌ಗಳ ಸೋಲು ಎದುರಾಯಿತು. ಅಂತಿಮ ಓವರ್‌ನಲ್ಲಿ ಮೊದಲ ಎರಡು ಎಸೆತಗಳು ವೈಡ್‌ಗಳಾಗಿದ್ದವು. ಆ ಬಳಿಕ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಧೋನಿ ಸತತ ಎರಡು ಸಿಕ್ಸರ್‌ಗಳು ಬಾರಿಸಿದರು. ಆದರೆ ಕೊನೆಯ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ ಚೆನ್ನೈ ಸೋಲನುಭವಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-bcci-slaps-rs12-lakh-fine-on-rr-captain-sanju-samson-for-code-of-conduct-breach-psr-au14-555368.html

Leave a Reply

Your email address will not be published. Required fields are marked *