ಹಾಲಿನ ಚಹಾ ಅಲ್ಲ, ನಿತ್ಯ ಈ ಚಹಾ ಸೇವಿಸಿ ಕೆಲವೇ ದಿನಗಳಲ್ಲಿ ತೂಕ ಹೆಚ್ಚಳ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ!

Nimbu Tea Benefits: ನಿಂಬೆಯು ವಿಟಮಿನ್ ಸಿ ಯಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದರ ಸಹಾಯದಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.  

ರಸಭರಿತ ಹಣ್ಣುಗಳಲ್ಲಿ ನಿಂಬೆ ಕೂಡ ಒಂದು, ಇದನ್ನು ಸಾಮಾನ್ಯವಾಗಿ ಆಹಾರದಲ್ಲಿ ಹುಳಿಯನ್ನು ಹೆಚ್ಚಿಸಲು ಅಥವಾ ಆರೋಗ್ಯಕರ (Health News In Kannada) ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಹೆಚ್ಚುತ್ತಿರುವ ತೂಕಕ್ಕೆ ಕಡಿವಾಣ ಹಾಕಲು ಸಹಾಯಮಾಡುತ್ತದೆ. ಮತ್ತೊಂದೆಡೆ, ನಿಮಗೆ ಒಸಡುಗಳಲ್ಲಿ ಊತ ಮತ್ತು ನೋವಿನ ಸಮಸ್ಯೆಗಳಿದ್ದರೆ, 1 ಕಪ್ ನಿಂಬೆ ಚಹಾವು ನಿಮಗೆ ರಾಮಬಾಣವೆಂದು ಸಾಬೀತಾಗುತ್ತದೆ. ಇದಲ್ಲದೆ, ನಿಂಬೆಯು ನಿಮಗೆ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚರ್ಮ ಮತ್ತು ದೇಹ, ಜಲಸಂಚಯನ ಇತ್ಯಾದಿ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಇದು ಪ್ರಯೋಜನಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಖಾಲಿ ಹೊಟ್ಟೆಯಲ್ಲಿ ಲೆಮನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು (Lifestyle News In Kannada) ಹೇಳಲಿದ್ದೇವೆ, ಅವುಗಳ ಸಹಾಯದಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು, ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ, 

ಖಾಲಿ ಹೊಟ್ಟೆಯಲ್ಲಿ ನಿಂಬೆ ಚಹಾವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ

ನಿಂಬೆ ಚಹಾವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ನಿಮ್ಮ ಚರ್ಮದ ಮೊಡವೆ, ಕಲೆಗಳು ಮತ್ತು ಎಸ್ಜಿಮಾದ ಮೇಲೆ ಅತ್ಯುತ್ತಮ ಪರಿಣಾಮವನ್ನು ತೋರಿಸುತ್ತದೆ. ಇದಲ್ಲದೇ ಲೆಮನ್ ಟೀ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಕೂಡ ಸಹಕಾರಿಯಾಗಿದೆ.

ಮೂಳೆಗಳ ಆರೋಗ್ಯಕ್ಕೆ ಉತ್ತಮ ಮತ್ತು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ
ನಿಂಬೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಆದ್ದರಿಂದ ಇದರ ಸೇವನೆಯು ಮೂಳೆಗಳನ್ನು ಬಲಪಡಿಸುತ್ತದೆ. ಮತ್ತೊಂದೆಡೆ, ಒಂದು ಕಪ್ ನಿಂಬೆ ಚಹಾವನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದೇ ವೇಳೆ, ನಿಂಬೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಸಹ ಇರುತ್ತವೆ, ಇದರಿಂದಾಗಿ ನಿಮ್ಮ ಕರುಳಿನ ಆರೋಗ್ಯವು ಉತ್ತಮವಾಗಿರುತ್ತದೆ.

ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ
ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಲಿಂಬೆಯಲ್ಲಿ ಇಂತಹ ಅನೇಕ ಆರೋಗ್ಯಕರ ಗುಣಗಳಿವೆ. ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 1 ಕಪ್ ಬಿಸಿ ನಿಂಬೆ ಚಹಾವನ್ನು ಸೇವಿಸಿದರೆ, ಅದು ನಿಮಗೆ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ವಸಡುಗಳ ಊತವನ್ನು ಕಡಿಮೆ ಮಾಡಿ
ನಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದೆ. ಹೀಗಾಗಿ ನೀವು ಒಸಡುಗಳಲ್ಲಿನ ನೋವಿನಿಂದ ತೊಂದರೆಗೊಳಗಾಗಿದ್ದರೆ, ತಕ್ಷಣವೇ 1 ಕಪ್ ಬಿಸಿ ನಿಂಬೆ ಚಹಾವನ್ನು ಸೇವಿಸಿ. ಇದು ನಿಮಗೆ ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

Source : https://zeenews.india.com/kannada/lifestyle/nimbu-tea-benefits-not-milk-tea-consume-this-tea-to-loos-your-extra-weight-in-just-few-days-146843

Leave a Reply

Your email address will not be published. Required fields are marked *