ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿಯೇ ಇರುವ ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು

How To Make Coffee Powder Hair Pack: ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿಕೊಂಡರೆ ಕೂದಲ ನ್ನು ಫಳಫಳನೆ ಹೊಳೆಯುವಂತೆ ಮಾಡಬಹುದು.   ಸ್ಪಾ ಅಥವಾ ಕೆರಾಟಿನ್   ಇಲ್ಲದೆ ಸುಂದರ ಕೂದಲು ನಿಮ್ಮದಾಗುತ್ತದೆ.  

How To Make Coffee Powder Hair Pack : ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬೇಸಿಗೆಯಲ್ಲಿ, ಧೂಳು, ಬೆವರು ಮತ್ತು ಬಲವಾದ ಸೂರ್ಯನ ಪ್ರಖರ ಕಿರಣಗಳು ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ.  ಹೀಗಾದಾಗ ಹೇರ್ ಸ್ಪಾ ಅಥವಾ ಕೆರಾಟಿನ್ ಮೊರೆ ಹೋಗಬೇಕಾಗುತ್ತದೆ. ಆದರೆ ಈ ವಿಧಾನಗಳನ್ನು ಅನುಸರಿಸಬೇಕಾದ್ರೆ ಬಹಳ ಹಣ ವ್ಯಾಯ ಮಾಡಬೇಕಾಗುತ್ತದೆ. ಪ್ರತಿ ಸಂದರ್ಭಗಳಲ್ಲಿ ಸ್ಪಾ ಅಥವಾ ಕೆರಾಟಿನ್   ಮಾಡಿಸುವುದು ದುಬಾರಿಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು  ನಿಮ್ಮ ಕೂದಲನ್ನು ರೇಷ್ಮೆಯಂತೆ ಹೊಳೆಯುವಂತೆ ಮಾಡುವ ಸುಲಭ  ವಿಧಾನದ ಬಗ್ಗೆ ಹೇಳುತ್ತವೆ.  

ಹೌದು, ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿಕೊಂಡರೆ ಕೂದಲ ನ್ನು ಫಳಫಳನೆ  ಹೊಳೆಯುವಂತೆ ಮಾಡಬಹುದು. ನಾವಿಲ್ಲಿ ಕಾಫಿ ಪೌಡರ್ ಹೇರ್ ಪ್ಯಾಕ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಹೇರ್ ಪ್ಯಾಕ್ ನಿಮ್ಮ ಕೂದಲನ್ನು ರೇಷ್ಮೆಯ ರೀತಿ  ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ  ತಲೆಹೊಟ್ಟು ಮತ್ತು ಅಕಾಲಿಕ ಬಿಳಿ ಕೂದಲನ್ನು ತೊಡೆದುಹಾಕಲು ಕೂಡಾ ಸಹಾಯ ಮಾಡುತ್ತದೆ. ಹಾಗಾದರೆ ಕಾಫಿ ಪೌಡರ್ ಹೇರ್ ಪ್ಯಾಕ್ ಮಾಡುವುದು ಹೇಗೆ  ನೋಡೋಣ. 

ಕಾಫಿ ಪುಡಿ ಹೇರ್ ಪ್ಯಾಕ್ ಮಾಡಲು ಬೇಕಾಗುವ ಸಾಮಗ್ರಿಗಳು : 
ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ 2 ಟೀಸ್ಪೂನ್ 
ಕಾಫಿ ಪುಡಿ 1 ಟೀಸ್ಪೂನ್ 

ಕಾಫಿ ಪುಡಿ ಹೇರ್ ಪ್ಯಾಕ್ ಮಾಡುವುದು ಹೇಗೆ? :
ಕಾಫಿ ಪೌಡರ್ ಹೇರ್ ಪ್ಯಾಕ್ ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
ನಂತರ ನೀವು ಅದರಲ್ಲಿ ಒಂದು ಚಮಚ ಕಾಫಿ ಪುಡಿ ಮತ್ತು 2 ಚಮಚ ಕ್ಯಾಸ್ಟರ್ ಆಯಿಲ್ ಅನ್ನು ಸೇರಿಸಿ.
ಇದರ ನಂತರ, ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಈಗ ನಿಮ್ಮ ಕಾಫಿ ಪೌಡರ್ ಹೇರ್ ಪ್ಯಾಕ್ ಸಿದ್ಧ.

ಕಾಫಿ ಪುಡಿ ಹೇರ್ ಪ್ಯಾಕ್ ಅನ್ನು ಹೇಗೆ ಬಳಸುವುದು? 
ಕಾಫಿ ಪುಡಿ ಹೇರ್ ಪ್ಯಾಕ್ ಅನ್ನು  ಹಚ್ಚುವ ಮೊದಲು ಕೂದಲನ್ನು ಒದ್ದೆ ಮಾಡಿ.
ನಂತರ ನೀವು ಸಿದ್ಧಪಡಿಸಿದ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಚೆನ್ನಾಗಿ  ಹಚ್ಚಿ. 
ಈ ಪ್ಯಾಕ್ ಅನ್ನು ನಿಮ್ಮ ಕೂದಲಿನ ಮೇಲೆ ಅರ್ಧ ಘಂಟೆಯವರೆಗೆ ಬಿಡಿ.
ನಂತರ  ಮೈಲ್ಡ್  ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.
ಉತ್ತಮ ಫಲಿತಾಂಶಗಳಿಗಾಗಿ, ಈ ಹೇರ್ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಪ್ರಯತ್ನಿಸಿ

ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

Source: https://zeenews.india.com/kannada/health/use-cofee-and-castor-oil-to-get-silky-smooth-hair-139017

Leave a Reply

Your email address will not be published. Required fields are marked *