ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ (KMF SHIMUL) ಖಾಲಿ ಇರುವ ವಿವಿಧ ಹುದ್ದೆಗಳನ್ನು ತುಂಬಲು ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹಿಂದೆ ನವೆಂಬರ್ನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಪರಿಷ್ಕರಿಸಲಾಗಿದ್ದು, ನೇರ ನೇಮಕಾತಿ ಮೂಲಕ ಒಟ್ಟು 194 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಖಾಲಿ ಇರುವ ಹುದ್ದೆಗಳ ವಿವರ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) | 17 |
| ಸಹಾಯಕ ವ್ಯವಸ್ಥಾಪಕರು (ಆಡಳಿತ) | 1 |
| ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) | 3 |
| ಎಂಐಎಸ್ / ಸಿಸ್ಟಂ ಆಫೀಸರ್ | 1 |
| ಮಾರುಕಟ್ಟೆ ಅಧಿಕಾರಿ | 2 |
| ತಾಂತ್ರಿಕ ಅಧಿಕಾರಿ | 18 |
| ಕೆಮಿಸ್ಟ್ ದರ್ಜೆ – 1 | 21 |
| ಆಡಳಿತ ಸಹಾಯಕ ದರ್ಜೆ | 17 |
| ಲೆಕ್ಕ ಸಹಾಯಕ ದರ್ಜೆ | 12 |
| ಮಾರುಕಟ್ಟೆ ಸಹಾಯಕ ದರ್ಜೆ – 2 | 10 |
| ಕೆಮಿಸ್ಟ್ ದರ್ಜೆ – 2 | 28 |
| ಕಿರಿಯ ಸಿಸ್ಟಂ ಆಪರೇಟರ್ | 13 |
| ಶೀಘ್ರಲಿಪಿಗಾರರು ದರ್ಜೆ – 2 | 1 |
| ಕಿರಿಯ ತಾಂತ್ರಿಕರು | 50 |
| ಒಟ್ಟು ಹುದ್ದೆಗಳು | 194 |
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿಇ (BE), ಎಂಬಿಎ (MBA), ಅಥವಾ ಬಿಕಾಂ (B.Com) ಪದವಿಯನ್ನು ಪೂರ್ಣಗೊಳಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು.
ವಯೋಮಿತಿ ಸಡಿಲಿಕೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
- 2A, 2B, 3A ಮತ್ತು 3B ಪ್ರವರ್ಗದ ಅಭ್ಯರ್ಥಿಗಳಿಗೆ: 3 ವರ್ಷಗಳ ವಯೋಮಿತಿ ಸಡಿಲಿಕೆ.
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ: 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರ
- ಸಾಮಾನ್ಯ ಹಾಗೂ ಇತರ ಅಭ್ಯರ್ಥಿಗಳಿಗೆ: 1000 ರೂ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: 500 ರೂ.(ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು).
ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಮೆರಿಟ್ ಮೂಲಕ ಆಯ್ಕೆ ಮಾಡಲಾಗುವುದು.
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜೂನ್ 14, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 14, 2026
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಶಿಮೂಲ್ನ ಅಧಿಕೃತ ವೆಬ್ಸೈಟ್ shimul.coop ಗೆ ಭೇಟಿ ನೀಡಬಹುದು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
