Premature White Hair Problem Solution: ದೇಹದಲ್ಲಿ ಈ ಪ್ರಮುಖ ಪೋಷಕಾಂಶದ ಕೊರತೆ ಎದುರಾದರೆ ಅದರ ನೇರ ಪರಿಣಾಮವು ನಮ್ಮ ಕೂದಲಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆ ಎದುರಾದರೆ ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡುವ ಸಮಸ್ಯೆ ಎದುರಿಸಬೇಕಾಗುತ್ತದೆ.

Premature White Hair Problem Solution : ಇತ್ತೀಚಿನ ದಿನಗಳಲ್ಲಿ 25 ರಿಂದ 30 ವರ್ಷ ವಯಸ್ಸಿನ ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಅನುವಂಶಿಕ ಕಾರಣದಿಂದಾಗಿ ಈ ಸಮಸ್ಯೆ ಎದುರಿಸಬಹುದು. ಆದರೆ ಬಹುತೇಕರು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ಕಾರಣದಿಂದಾಗಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಿಸ್ತುಬದ್ಧ ಜೀವನಶೈಲಿ ಮತ್ತು ಆರೋಗ್ಯಕರ ಆಹಾರದ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಇನ್ನು ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆ ಎದುರಾದರೆ ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡುವ ಸಮಸ್ಯೆ ಎದುರಿಸಬೇಕಾಗುತ್ತದೆ.
ವಿಟಮಿನ್ ಬಿ ಕೊರತೆ :
ನಾವಿಲ್ಲಿ ವಿಟಮಿನ್ ಬಿ ಬಗ್ಗೆ ಮಾತನಾಡುತ್ತಿದ್ದೇವೆ. ದೇಹದಲ್ಲಿ ಈ ಪ್ರಮುಖ ಪೋಷಕಾಂಶದ ಕೊರತೆ ಎದುರಾದರೆ ಅದರ ನೇರ ಪರಿಣಾಮವು ನಮ್ಮ ಕೂದಲಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಿಟಮಿನ್ ಬಿ ಇರುವ ಆಹಾರ ಸೇವಿಸದಿದ್ದರೆ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಮಾತ್ರವಲ್ಲ, ಕೂದಲು ಉದುರುವ ಸಮಸ್ಯೆಯೂ ಎದುರಾಗುತ್ತದೆ. ವಿಟಮಿನ್ ಬಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಇದು ಸೆಲ್ ಮೆಟೋಬಾಲಿಸಂ ಮತ್ತು ಕೆಂಪು ರಕ್ತ ಕಣಗಳ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ದೈನಂದಿನ ಆಹಾರದಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ :
ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತಿದ್ದರೆ, ತಕ್ಷಣ ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಬಿ, ವಿಟಮಿನ್ ಬಿ6ಮತ್ತು ವಿಟಮಿನ್ ಬಿ 12 ಸೇರಿಸಿ. ಅದರಲ್ಲಿಯೂ ಡೈರಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಿದರೆ ಈ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.
ವಿಟಮಿನ್ ಬಿ ಪಡೆಯಲು ಏನು ತಿನ್ನಬೇಕು? :
ಮೊಟ್ಟೆ
ಸೋಯಾಬೀನ್ಸ್
ಮೊಸರು
ಓಟ್ಸ್
ಹಾಲು
ಚೀಸ್
ಬ್ರೊಕೊಲಿ
ಲೋಬ್ಸ್ಟರ್
ಸಾಲ್ಮನ್
ಚಿಕನ್
ಹಸಿರು ಎಲೆಗಳ ತರಕಾರಿಗಳು
ಧಾನ್ಯಗಳು
ಬಿ ಜೀವಸತ್ವಗಳ ವಿಧಗಳು
ವಿಟಮಿನ್ ಬಿ 1 – ಥಯಾಮಿನ್
ವಿಟಮಿನ್ ಬಿ 2 – ರಿಬೋಫ್ಲಾವಿನ್
ವಿಟಮಿನ್ ಬಿ 3 – ನಿಯಾಸಿನ್
ವಿಟಮಿನ್ ಬಿ 5 – ಪಾಂಟೊಥೆನಿಕ್ ಆಮ್ಲ
ವಿಟಮಿನ್ ಬಿ 7 – ಬಯೋಟಿನ್
ವಿಟಮಿನ್ ಬಿ 9 – ಫೋಲೇಟ್
ವಿಟಮಿನ್ ಬಿ 12 – ಕೋಬಾಲಾಮಿನ್
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)