Lemon Side Effects:ನಿಂಬೆ ರುಚಿಯು ಹುಳಿ ಮತ್ತು ಆಮ್ಲೀಯ ಸ್ವಭಾವವನ್ನು ಹೊಂದಿದೆ. StyleCrease ಪ್ರಕಾರ, ಹೆಚ್ಚು ನಿಂಬೆ ಅಥವಾ ನಿಂಬೆ ರಸವನ್ನು ಕುಡಿಯುವುದರಿಂದ ಹಲ್ಲುಗಳು ಹಾನಿಗೊಳಗಾಗುತ್ತದೆ. ನಿಂಬೆಹಣ್ಣಿನ ಅತಿಯಾದ ಸೇವನೆಯು ಗ್ಯಾಸ್ಟ್ರಿಕ್ ಮತ್ತು ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು.
ಸಿಟ್ರಸ್ ಹಣ್ಣುಗಳಲ್ಲಿ ನಿಂಬೆ ಹಣ್ಣು ಕೂಡ ಒಂದಾಗಿದೆ. ಹುಳಿ ರುಚಿಯನ್ನು ಹೊಂದಿರುವ ಈ ನಿಂಬೆ ರಸದ ಪಾನೀಯ ಕುಡಿಯಲು ತುಂಬಾ ಟೇಸ್ಟಿ ಆಗಿರುತ್ತದೆ. ಜೊತೆಗೆ ಆರೋಗ್ಯಕ್ಕೆ ಕೂಡ ಒಳ್ಳೆಯದು. ಅನೇಕ ಅದ್ಭುತ ಔಷಧೀಯ ಗುಣಗಳಿಂದ ಕೂಡಿರುವ ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿವೆ
ಕಳೆದ 15 ದಿನಗಳಿಂದ ಬಿಸಿಲು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಕೋಲ್ಡ್ ಡ್ರಿಂಕ್ ಬಳಕೆ ಮಾಡುತ್ತಾರೆ. ಅದರಲ್ಲಿಯೂ ನಿಂಬೆಹಣ್ಣಿನ ಪಾನಕಕ್ಕೆ ಬೇಡಿಕೆ ಹೆಚ್ಚು. ಅತಿಯಾದ ಉಷ್ಣ ಆದ್ರೆ ಮನೆಗಳಲ್ಲಿ ನಿಂಬೆಹಣ್ಣು ಬಳಕೆ ಮಾಡಲಾಗುತ್ತದೆ. ಪೋಹಾ, ಉಪ್ಪಿಟ್ಟು, ರೈಸ್, ಸಾಂಬಾರ್ ಅಂತಹ ಅಡುಗೆಯಲ್ಲಿಯೂ ನಿಂಬೆಹಣ್ಣು ಬಳಕೆ ಮಾಡುತ್ತಾರೆ. ಬೇಸಿಗೆಯಲ್ಲಿ ನಿಂಬೆಹಣ್ಣಿನ ಸೇವನೆ ದೇಹವನ್ನು ತಂಪಾಗಿಸುತ್ತದೆ.
ಅಡುಗೆ, ಜ್ಯೂಸ್ ಅಥವಾ ನೇರವಾಗಿ ನಿಂಬೆ ಸೇವನೆಯು ಅಧಿಕ ತೂಕವನ್ನು ನಿಯಂತ್ರಿಸುವುದು, ನಿರ್ಜಲೀಕರಣವನ್ನು ತಡೆಯುವುದು. ಅರ್ಜೀಣ ಸಮಸ್ಯೆಯಾದರೂ ನಿಂಬೆ ಬಳಕೆ ಮಾಡಲಾಗುತ್ತದೆ. ಇದೇ ರೀತಿ ಹಲವು ಆರೋಗ್ಯಕರ ಪ್ರಯೋಜನಗಳನ್ನು ನಿಂಬೆಹಣ್ಣು ಹೊಂದಿದೆ. ಆದ್ರೆ ನಿರಂತರ ಮತ್ತು ಅತಿಯಾಗಿ ನಿಂಬೆಹಣ್ಣು ಬಳಕೆ ಒಂದಿಷ್ಟು ಅಡ್ಡಪರಿಣಾಮಗಳನ್ನು ಸಹ ಉಂಟು ಮಾಡುತ್ತದೆ.
ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಎಂಬ ಮಾತಿದೆ. ಏನೇ ಆಹಾರ ಸೇವನೆ ಮಾಡಿದರೂ ಅದು ನಿಯಮಿತವಾಗಿರಬೇಕು. ಹೊಟ್ಟೆ ತುಂಬಲು ಇನ್ನು ಒಂದು ತುತ್ತು ಕಡಿಮೆ ಇದ್ದಾಗಲೇ ಊಟ ನಿಲ್ಲಿಸಬೇಕು ಎಂದು ಹಿರಿಯರು ಮನೆಯಲ್ಲಿ ಹೇಳುತ್ತಿರುತ್ತಾರೆ. ಬೇಸಿಗೆಯಲ್ಲಿ ಹೆಚ್ಚು ನಿಂಬೆಹಣ್ಣು ತಿನ್ನುವುದರಿಂದ ಅಡ್ಡ ಪರಿಣಾಮ ಬೀರುತ್ತದೆ. ಈ ಬಗ್ಗೆ ಆರೋಗ್ಯ ತಜ್ಞೆ ಸ್ವಾತಿ ರೆಡ್ಡಿ ವಿವರವಾಗಿ ಮಾಹಿತಿ ನೀಡಿದ್ದಾರೆ.
ನಿಂಬೆ ಹೆಚ್ಚು ಆಮ್ಲೀಯ ಅಂಶ ಹೊಂದಿರುವ ಹಣ್ಣು. ಹೆಚ್ಚು ನಿಂಬೆಹಣ್ಣು ತಿನ್ನುವುದರಿಂದ ಹಲ್ಲುಗಳಿಗೆ ಹಾನಿ ಉಂಟಾಗಬಹುದು. ನಿಂಬೆ ಜ್ಯೂಸ್ ಸೇವಿಸಿದ ತಕ್ಷಣ ಹಲ್ಲುಜ್ಜಬೇಡಿ. ಬದಲಿಗೆ ಸಾಕಷ್ಟು ನೀರು ಕುಡಿಯಬೇಕು. ನಿಂಬೆ ಜ್ಯೂಸ್ ಕುಡಿದಾಗ ಆಮ್ಲೀಯ ಅಂಶ ನಿಮ್ಮ ಹಲ್ಲುಗಳ ಮೇಲೆ ಅಂಟಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಹಲ್ಲುಜ್ಜಿದಾಗ ದಂತಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ನಿಂಬೆಹಣ್ಣನ್ನು ಹೆಚ್ಚು ತಿಂದರೆ ಆಸಿಡ್ ರಿಫ್ಲಕ್ಸ್, ಎದೆಯುರಿ, ವಾಕರಿಕೆ, ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದರೆ, ನಿಂಬೆ ರಸವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ನಿಂಬೆ ರಸವು ಬಾಯಿಯ ಹುಣ್ಣುಗಳಲ್ಲಿ ತೀವ್ರವಾದ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹಾಗಾಗಿ ಬಾಯಿ ಹುಣ್ಣು ಸಂಪೂರ್ಣವಾಗಿ ವಾಸಿಯಾದಾಗ ನಿಂಬೆ ರಸವನ್ನು ಕುಡಿಯಿರಿ.
ನಿಂಬೆ ಸಿಪ್ಪೆಯನ್ನು ರೆಸ್ಟೋರೆಂಟ್‌ಗಳಲ್ಲಿ ರುಚಿಕಾರಕವಾಗಿ ಬಳಸಲಾಗುತ್ತದೆ. ನಿಂಬೆಯಲ್ಲಿ ಸೂಕ್ಷ್ಮಜೀವಿಗಳ ಉಪಸ್ಥಿತಿಯು ಹಲವಾರು ಅಧ್ಯಯನಗಳಲ್ಲಿ ಕಂಡು ಬಂದಿದೆ. ನಿಂಬೆಹಣ್ಣಿನ ಸಿಪ್ಪೆ ಬಳಕೆ ಅನಾರೋಗ್ಯಕ್ಕೆ ಕಾರಣವಾಗಬಹುದು..
ಒಣ ತ್ವಚೆ ಇರುವವರು ಹೆಚ್ಚು ನಿಂಬೆಹಣ್ಣು ತಿನ್ನುವುದರಿಂದ ತ್ವಚೆ ಇನ್ನಷ್ಟು ಒಣಗುತ್ತದೆ. ಎಣ್ಣೆಯುಕ್ತ ಚರ್ಮಕ್ಕೆ ನಿಂಬೆ ರಸವು ಪ್ರಯೋಜನಕಾರಿಯಾಗಿದೆ.
ನೀವು ಜೀರ್ಣಕಾರಿ ಅಥವಾ ಹೊಟ್ಟೆಯ ಕಾಯಿಲೆಗಳನ್ನು ಹೊಂದಿದ್ದರೆ ಸಾಧ್ಯವಾದಷ್ಟು ನಿಂಬೆಹಣ್ಣುಗಳನ್ನು ಸೇವಿಸಬೇಡಿ. ಸಾಮಾನ್ಯವಾಗಿ, ನೀವು ಬೇಸಿಗೆಯಲ್ಲಿ ಸ್ವಲ್ಪ ನಿಂಬೆ ತಿನ್ನಬಹುದು. ಆದರೆ ನಿಂಬೆಯನ್ನು ಅತಿಯಾಗಿ ತಿನ್ನದಿರುವುದು ಉತ್ತಮ..
ನಿಂಬೆಹಣ್ಣು ಮತ್ತು ಇತರ ಸಿಟ್ರಸ್ ಹಣ್ಣುಗಳು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಗ್ಯಾಸ್ ಸಮಸ್ಯೆ ಇರುವವರು ಕೂಡ ನಿಂಬೆ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಧಿಕ ಆಮ್ಲೀಯ ಅಂಶವು ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಂಬೆಹಣ್ಣು ತಿನ್ನುವುದು ಅಲ್ಸರ್ ರೋಗಗಳಿಗೆ ಹಾನಿಕಾರಕವಾಗಿದೆ. ಈ ಸಂದರ್ಭದಲ್ಲಿ, ಎಚ್ಚರಿಕೆ ವಹಿಸಬೇಕು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1