ಡಿಜಿಟಲ್ ಯುಗದ ದೊಡ್ಡ ಅವಕಾಶ: Work From Home ಉದ್ಯೋಗಗಳಿಗೆ NCS ಪೋರ್ಟಲ್ ಬೆಸ್ಟ್.

ಇಂದಿನ ಡಿಜಿಟಲ್ ಯುಗದಲ್ಲಿ “ವರ್ಕ್ ಫ್ರಮ್ ಹೋಮ್” ಉದ್ಯೋಗಗಳಿಗೆ ಭಾರೀ ಬೇಡಿಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಉದ್ಯೋಗದಲ್ಲಿರುವ ವೃತ್ತಿಪರರು ಸಮಯ ಉಳಿಸಿಕೊಳ್ಳಲು ಮತ್ತು ಕುಟುಂಬದ ಜೊತೆಗೆ ಸಮತೋಲನ ಕಾಪಾಡಿಕೊಳ್ಳಲು ಮನೆಯಿಂದಲೇ ಕೆಲಸ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇಂತಹವರಿಗೆ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವೆ (NCS) ಪೋರ್ಟಲ್ ಉತ್ತಮ ಅವಕಾಶಗಳನ್ನು ಒದಗಿಸುತ್ತಿದೆ.

ಏನಿದು NCS ಪೋರ್ಟಲ್?

ರಾಷ್ಟ್ರೀಯ ವೃತ್ತಿ ಸೇವೆ (National Career Service – NCS) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ಡಿಜಿಟಲ್ ಉದ್ಯೋಗ ವೇದಿಕೆಯಾಗಿದೆ. ಉದ್ಯೋಗ ಹುಡುಕುವವರಿಗೆ ಮತ್ತು ಕಂಪನಿಗಳಿಗೆ ಒಂದೇ ವೇದಿಕೆಯಲ್ಲಿ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.ಈ ಪೋರ್ಟಲ್‌ನಲ್ಲಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಾವಿರಾರು ಉದ್ಯೋಗ ಮಾಹಿತಿಗಳು ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಕೌಶಲ್ಯ ಮತ್ತು ಅರ್ಹತೆಗೆ ಅನುಗುಣವಾಗಿ ಕೆಲಸಗಳನ್ನು ಹುಡುಕಬಹುದು.

7 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ

ಪ್ರಸ್ತುತ NCS ಪೋರ್ಟಲ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 7 ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳು ದೊಡ್ಡ ಪ್ರಮಾಣದಲ್ಲಿ ಸೇರಿವೆ. ಡೇಟಾ ಎಂಟ್ರಿ, ಕಸ್ಟಮರ್ ಸಪೋರ್ಟ್, ಟೆಲಿಕಾಲಿಂಗ್, ಡಿಜಿಟಲ್ ಮಾರ್ಕೆಟಿಂಗ್, ಕಂಟೆಂಟ್ ರೈಟಿಂಗ್ ಸೇರಿದಂತೆ ಹಲವು ಉದ್ಯೋಗಗಳನ್ನು ಇಲ್ಲಿ ಹುಡುಕಬಹುದು.

ದೊಡ್ಡ ಕಂಪನಿಗಳ ಸಹಭಾಗಿತ್ವ

ಅಮೆಜಾನ್, ಸ್ವಿಗ್ಗಿ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು NCS ಪೋರ್ಟಲ್ ಜೊತೆಗೆ ಕೈಜೋಡಿಸಿವೆ. ಇದರ ಪರಿಣಾಮವಾಗಿ ಸಾವಿರಾರು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿದ್ದು, ಯುವಕರಿಗೆ ಸುಲಭವಾಗಿ ಉದ್ಯೋಗ ದೊರೆಯುವಂತಾಗಿದೆ.ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವುದರಿಂದ ಪೋರ್ಟಲ್‌ನಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿದೆ.

ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವಿಧಾನ

NCS ಪೋರ್ಟಲ್ ಮೂಲಕ ಕೆಲಸ ಪಡೆಯಲು ಈ ಹಂತಗಳನ್ನು ಅನುಸರಿಸಬಹುದು:

NCS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸ ಖಾತೆ ತೆರೆಯಿರಿ.

ನಿಮ್ಮ ಶಿಕ್ಷಣ, ಅನುಭವ ಮತ್ತು ಕೌಶಲ್ಯದ ಮಾಹಿತಿಯನ್ನು ನಮೂದಿಸಿ.

“Work From Home” ಅಥವಾ ಬೇಕಾದ ಹುದ್ದೆಯ ಹೆಸರನ್ನು ಹುಡುಕಿ.

ನಿಮಗೆ ಹೊಂದುವ ಉದ್ಯೋಗ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.

ಕೌಶಲ್ಯಾಭಿವೃದ್ಧಿಗೂ ಅವಕಾಶ

NCS ಪೋರ್ಟಲ್ ಕೇವಲ ಉದ್ಯೋಗ ಮಾಹಿತಿ ನೀಡುವುದಲ್ಲದೆ, ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ವೃತ್ತಿ ಸಮಾಲೋಚನೆಯನ್ನೂ ಒದಗಿಸುತ್ತದೆ. ಇದರಿಂದ ಯುವಕರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಉದ್ಯೋಗ ಪಡೆಯಲು ಸಹಾಯವಾಗುತ್ತದೆ.

ಮನೆಲ್ಲೇ ಕೆಲಸ ಮಾಡಿ ಸ್ವಾವಲಂಬಿಯಾಗಿರಿ

ಪ್ರಯಾಣದ ತೊಂದರೆ ಇಲ್ಲದೆ, ಸಮಯದ ಲವಚಿಕತೆಯೊಂದಿಗೆ ಕೆಲಸ ಮಾಡಲು ಬಯಸುವವರಿಗೆ NCS ಪೋರ್ಟಲ್ ಉತ್ತಮ ಆಯ್ಕೆಯಾಗಿದೆ.

ವಿದ್ಯಾರ್ಥಿಗಳಿಂದ ಹಿಡಿದು ಗೃಹಿಣಿಯರವರೆಗೂ ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕ ಉದ್ಯೋಗಗಳನ್ನು ಹುಡುಕಿಕೊಳ್ಳಬಹುದು.ಡಿಜಿಟಲ್ ಯುಗದಲ್ಲಿ ಹೊಸ ವೃತ್ತಿಜೀವನ ಆರಂಭಿಸಲು ಬಯಸುವವರು NCS ಪೋರ್ಟಲ್‌ನ ಸದುಪಯೋಗ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *