ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 13
ಚುನಾವಣೆ ಸಮಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಳಕೆ ಮಾಡಿಕೊಂಡು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದು ಸರಿಯಲ್ಲ, ಅವರಿಗೆ ಸರಿಯಾದ ಸ್ಥಾನವನ್ನು ನೀಡುವುದು ಪಕ್ಷದ ಮುಖಂಡರ ಕೆಲಸವಾಗಿದೆ ಇದರ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದು ಎಂದು ಕೆ.ಪಿ.ಸಿ.ಸಿ.ಯ ಉಪಾಧ್ಯಕ್ಷರು ಉಸ್ತುವಾರಿಗಳಾದ ನಾಗರಾಜ್ ನಾಯ್ಕ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಭೆಗೆ ಬಹಳಷ್ಟು ಬ್ಲಾಕ್ ಅಧ್ಯಕ್ಷರುಗಳು ಬಂದಿಲ್ಲ ಈ ರೀತಿಯಾದ ನಿರ್ಲಕ್ಷ ಸರಿಯಲ್ಲ ಪಕ್ಷದಲ್ಲಿ ಅಧಿಕಾರವನ್ನು ಪಡೆದಾಗ ಅದಕ್ಕೆ ತಕ್ಕಂತೆ ನ್ಯಾಯವನ್ನು ಒದಗಿಸಬೇಕಿದೆ ಈ ಹಿನ್ನಲೆಯಲ್ಲಿ ಅಧಿಕಾರ ಪಡೆದವರು ಕೆಲಸ ಮಾಡದಿದ್ದರೆ ಅವರನ್ನು ಬಿಟ್ಟು ಬೇರೆಯ ವರನ್ನು ನೇಮಕ ಮಾಡಿ, ನಮಗೆ ಪಕ್ಷದ ಸಂಘಟನೆ ಮುಖ್ಯವಾಗಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಸ್.ಸಿ.ಘಟಕದ ಪದಾಧಿಕಾರಿಗಳ, ಕಾರ್ಯಕರ್ತರ ಶ್ರಮ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಈಗಿನಿಂದಲೇ ಚುನಾವಣೆಯ ತಯಾರಿಯನ್ನು ಮಾಡುವಂತೆ ಸೂಚನೆ ನೀಡಿದರು.
ಕೆಪಿಸಿಸಿನ ಅಧ್ಯಕ್ಷರ ರಾಜ್ಯದ ಎಲ್ಲಾ ಘಟಕಗಳನ್ನು ಸಕ್ರಿಯವಾಗಿ ಮುಂದಾಗಿದ್ದಾರೆಚ, ಚುನಾವಣೆ ಹಿನ್ನಲೆಯಲ್ಲಿ ಪಕ್ಷವನ್ನು ಸಧೃಡವಾಗಿ ಇಡಲು ಮುಂದಾಗಿದ್ದಾರೆ. ಇದಕ್ಕೆ ನಾವೆಲ್ಲರು ಸಹಾ ಸಾಥ್ ನೀಡಬೇಕಿದೆ, ನನಗೆ 5 ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದ್ದು ಇಲ್ಲಿಗೆ ಭೇಟಿ ನೀಡುವುವುದರ ಮೂಲಕ ಎಸ್.ಸಿ.ಘಟಕವನ್ನು ಬಲ ಪಡಿಸಬೇಕಿದೆ ಎಂದ ಅವರು, ಚುನಾವಣೆಯ ಸಮಯದಲ್ಲಿ ಕೆಲಸವನ್ನು ಮಾಡಿದವರನ್ನು ಪಕ್ಷದ ಮುಖಂಡರು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ ಇದು ಬಿಟ್ಟು ಪೋಟೋಗೆ ಬರುವವರಿಗೆ ವಿಜಿಟಿಂಗ್‍ಕಾರ್ಡ ಇಟ್ಟುಕೊಂಡು ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸವನ್ನು ಮಾಡಿಕೊಳ್ಳುವವರಿಗೆ ಮಾನ್ಯತೆಯನ್ನು ನೀಡಬಾರದೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್‍ನ ಎಸ್.ಸಿ.ಘಟಕದಲ್ಲಿ 101 ಜಾತಿಗಳಿವೆ ಇವುಗಳಿಗೆ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡಬೇಕಿದೆ, ಸರ್ಕಾರದ ಮಟ್ಟದಲ್ಲಿ ಇನ್ನೂ ಹಲವಾರು ನಿಗಮ ಮಂಡಳಿಗಳಿಗೆ ಸದಸ್ಯರು ನೇಮಕವನ್ನು ಮಾಡುವಾಗ ನಮ್ಮ ಎಸ್.ಸಿ.ಘಟಕದ ಪದಾಧಿಕಾರಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಮುಖಂಡರಲ್ಲಿ ಮನವಿ ಮಾಡಿ, ಸರ್ಕಾರ ಈಗ ಎರಡುವರೆ ವರ್ಷ ಕಳೆದಿದೆ ಇನ್ನೂ ಎರಡುವರೆ ವರ್ಷ ಇದೆ ಇಷ್ಟರೊಳಗೆ ನಮ್ಮ ಪದಾಧಿಕಾರಿಗಳಿಗೆ ನ್ಯಾಯವನ್ನು ಒದಗಿಸುವಂತೆ ತಿಳಿಸಿದರು.
ಮತ್ತೋರ್ವ ಉಸ್ತುವಾರಿಗಳಾದ ಕುಮಾರ್ ಮಾತನಾಡಿ, ಇಲ್ಲಿ ವಿವಿಧ ಹುದ್ದೆಗಳಿಗೆ ನೇಮಕವಾದವರು ಸರಿಯಾಗಿ ಕೆಲಸವನ್ನು ಮಾಡದಿದ್ದರೆ ಅಂತಹವರನ್ನು ನಿರ್ದಾಕ್ಷ್ಯಣದಿಂದ ತೆಗೆದು ಹಾಕಿ ಅ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವುದರ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ, ನಮಗೆ ಪಕ್ಷ ಮುಖ್ಯ ಪಕ್ಷ ಇದ್ದರೆ ನಾವೆಲ್ಲಾ ಮುಂದಿನ ದಿನದಲ್ಲಿ ಸ್ಥಳಿಯ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಚುನಾವಣೆ ಬರಲಿದೆ ಇದಕ್ಕೆ ಈಗಿನಿಂದಲೇ ಸಜ್ಜಾಗಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮಾತನಾಡಿ, ಮುಂಬರುವ ಎಲ್ಲಾ ಚುನಾವಣೆಗಳು ಶಾಸಕರ ನೇತೃತ್ವದಲ್ಲಿ ನಡೆಯಬೇಕಿದೆ, ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಬೇಕಿದೆ, ದೇಶದಲ್ಲಿ ಬಿಜೆಪಿ ಅಧಿಕಾರವನ್ನು ನಡೆಸುತ್ತಿದ್ದು ಬಹುಮತ ಇದೆ ಎಂದು ಏನೇ ಬೇಕಾದರೂ ಮಾಡಿದರೆ ನಡೆಯುತ್ತದೆ ಎಂದು ಯೋಜನೆಗಳನ್ನು ಬದಲಾಯಿಸುತ್ತಿದ್ದಾರೆ, ಇದನ್ನು ಕಾಂಗ್ರೇಸ್ ವಿರೋಧಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತರಿಯ ಎಸ್.ಸಿ.ಘಟಕದ ಅಧ್ಯಕ್ಷ ಸಿ.ಜಯ್ಯಣ್ಣ ಮಾತನಾಡಿ, ಎಂ.ಪಿ.ಚುನಾವಣೆಯಲ್ಲಿ ನಮ್ಮ ಘಟಕ ಉತ್ತಮವಾದ ಕೆಲಸವನ್ನು ಮಾಡಿತ್ತು ಆದರೆ ಸೋಲಾಯಿತು ಇದರಿಂದ ಸ್ವಲ್ಪ ನೋವಾಗಿದೆ, ಈ ನೋವಿನಿಂದ ಹೂರ ಬರಲು ಸ್ವಲ್ಪ ದಿನ ತೆಗೆದುಕೊಂಡಿದೆ ಈಗ ಘಟಕ ಸಕ್ರಿಯವಾಗಿದೆ, ಮುಂದಿನ ಚುನಾವಣೆಯಲ್ಲಿ ನಮ್ಮ ಘಟಕ ಸಕ್ರಿಯವಾಗಿ ಭಾಗವಹಿಸಲಿದೆ, ಇಂದಿನ ಸಭೆಗೆ ಹಲವಾರು ಅಧ್ಯಕ್ಷರುಗಳು ಬಂದಿಲ್ಲ, ಅವರನ್ನು ತೆಗೆದು ಹಾಕಲು ಕೆಲವೊಂದು ಸಮಸ್ಯೆಗಳು ಇವೆ ಇದರಲ್ಲಿ ದೊಡ್ಡವರು ಭಾಗಿಯಾಗುತ್ತಾರೆ. ಚುನಾವಣೆಯ ಸಮಯದಲ್ಲಿ ಪಕ್ಷದಲ್ಲಿ ದುಡಿದವರನ್ನು ಗುರುತಿಸಿ ಅವರಿಗೆ ಟೀಕೇಟ್ ನೀಡಿ ಇದರ ಬದಲು ಹೊರಗಿನಿಂದ ಬಂದವರಿಗೆ ಮಾನ್ಯತೆಯನ್ನು ನೀಡಬೇಡಿ, ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಸಹಾ ಶೇ, 60/40 ರಷ್ಟು ಜನಪ್ರಿಯತೆ ಇದೆ ನಾವು ಹಲವಾರು ಗ್ಯಾರೆಂಟಿಗಳನ್ನು ನೀಡಿ ಜನರಿಗಾಗಿ ಯೋಜನೆಗಳನ್ನು ಜಾರಿ ಮಾಡಿದರು ಸಹಾ ನಮ್ಮ ಬಗ್ಗೆ ಮತದಾರರ ಒಲವು ಕಡಿಮೆ ಇದೆ ಆದರೆ ಏನು ಮಾಡದ ಬಿಜೆಪಿಯ ಬಗ್ಗೆ ಯುವ ಮತದಾರರ ಒಲವೂ ಹೆಚ್ಚಾಗಿದೆ ನಮ್ಮ ಸಮುದಾಯ ಯುವ ಜನತೆ ಹೆಚ್ಚಾಗಿ ಆರ್.ಎಸ್.ಎಸ್. ಕಡೆ ವಾಲುತ್ತಿದ್ದು ಅವರು ನಡೆಸುವ ಸಭೆಗಳಲ್ಲಿ ಭಾಗಿಯಾಗು ತ್ತಿದ್ದಾರೆ. ಇದು ನಮ್ಮ ದುರಂತ ಎಂದರು.
ನಮ್ಮ ಪಕ್ಷದ ಮುಖಂಡರು, ಚುನಾವಣೆಯಲ್ಲಿ ಸೋತವರಿಗೆ ಮಾನ್ಯತೆಯನ್ನು ನೀಡದೆ ಗೆದ್ದವರಿಗೆ ಮಾನ್ಯತೆಯನ್ನು ನೀಡುವುದರ ಮೂಲಕ ಅವರನ್ನು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಇದರಿಂದ ಚುನಾವಣೆಯಲ್ಲಿ ಸೋತವರಿಗೆ ನೋವಾಗುತ್ತಿದೆ ನಮ್ಮನ್ನು ಗುರುತಿಸುತ್ತಿಲ್ಲ ಎಂದು ಮನ ನೊಂದಿದ್ದಾರೆ ಪಕ್ಷ ಸೋತವರನ್ನು ತಿರಸ್ಕಾರ ಮಾಡದೇ ಅವರನ್ನು ಗುರುತಿಸಿ ಅವರಿಗೆ ವಿವಿಧ ರೀತಿಯ ಸ್ಥಾನವನ್ನು ನೀಡಿದರೆ ಅವರು ಸಹಾ ಮುಂದಿನ ದಿನದಲ್ಲಿ ಪಕ್ಷವನ್ನು ಕಟ್ಟಲು ಮುಂದಾಗುತ್ತಾರೆ ಇದರ ಬಗ್ಗೆ ಪಕ್ಷದ ಮುಖಂಡರು ಗಮನ ನೀಡುವಂತೆ ಜಯ್ಯಣ್ಣ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳಾದ ಚಿದಾನಂದಮೂರ್ತಿ, ನಾಗರಾಜ್ ಕಟ್ಟೆ, ದೇವರಾಜ್, ಕಣ್ಮೇಶ್, ಮಲ್ಲೇಶ್, ರಾಮನಾಯ್ಕ್, ಖುದ್ದುಸ್, ಸಂದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 84