ಚಿತ್ರದುರ್ಗ ಜೂ. 19
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಯಾರೋ ಒಬ್ಬರಿಗಾಗಿ ಉದ್ಯಾನವನ ಮಾಡದೇ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಭವನ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತವನ್ನು ಬಂಜಾರ (ಲಂಬಾಣಿ) ಸಮಾಜದ ಜಿಲ್ಲಾಧ್ಯಕ್ಷರಾದ ಎಂ. ಸತೀಶ್ಕುಮಾರ್ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ತಿಪ್ಪಜ್ಜಿ ಸರ್ಕಲ್ ಬಳಿ ಇರುವಂತಹ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಛೇರಿ. ಹಿಂಭಾಗದಲ್ಲಿ ಇರುವಂತಹ ಅಂದಾಜು 150 200 ಅಳತೆಯ ನಿವೇಶನದಲ್ಲಿ ಜಿಲ್ಲಾ ಪಂಚಾಯತ್ನ ಸಿ.ಇ.ಓ. ತಮ್ಮ ಕುಟುಂಬದ ಒಳಿತಿಗಾಗಿ ಉದ್ಯಾನವನವನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದಾರೆ ಇದು ಸರಿಯಲ್ಲ. ಇದು ಸರ್ಕಾರಿ ಜಾಗ ಇಲ್ಲಿ ಯಾರೋ ಒಂದು ಕುಟುಂಬಕ್ಕೆ ಉಪಯುಕ್ತವಾಗುವಂತಹ ಕ್ರಮವನ್ನು ಕೈಗೊಳ್ಳದೆ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಯಾವುದಾ ದರೊಂದು ಕಟ್ಟಡವನ್ನು ನಿರ್ಮಾಣ ಮಾಡುವುದರ ಮೂಲಕ ಜನತೆಯ ಉಪಯೋಗಕ್ಕೆ ಕಲ್ಪಿಸಬೇಕಿದೆ.
ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ, ಒಂದು ಕುಟುಂಬಕ್ಕೆ ಉಪಯೋಗವಾಗುವ ಉದ್ಯಾನವನ ವನ್ನು ನಿರ್ಮಾಣ ಮಾಡದೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಟ್ಟಡ/ಮಹಿಳೆಯ ತರಬೇತಿ ಕೇಂದ್ರ ಅಥವಾ ಸಾರ್ವಜನಿಕರ ಉದ್ಯಾನವನ ನಿರ್ಮಾಣ ಸೇರಿದಂತೆ ಇತರೆ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ. ಹಾಗಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
