ಮಧುಮೇಹಕ್ಕೆ ಸಂಬಂಧಿಸಿದ ಈ 5 ಮಿಥ್ಯೆಗಳನ್ನ ನಿಜವೆಂದೇ ನಂಬಿರುವ ಜನರು; ಸತ್ಯವನ್ನ ತಿಳಿದುಕೊಂಡ್ರೆ ನೀವು ಆರೋಗ್ಯವಾಗಿರಲು ಸಾಧ್ಯ!

  • ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಲಾಗುತ್ತದೆ
  • ಮಧುಮೇಹದ ಬಗ್ಗೆ ಅನೇಕ ರೀತಿಯ ಮಿಥ್ಯೆ & ತಪ್ಪುಗ್ರಹಿಕೆಗಳು ಸಮಾಜದಲ್ಲಿ ಹರಡಿವೆ
  • ಕೇವಲ ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬ ದೊಡ್ಡ ಮಿಥ್ಯೆ

World Diabetes Day: ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಲಾಗುತ್ತದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳನ್ನು ಹಂಚಿಕೊಳ್ಳುವುದು ಇದರ ಉದ್ದೇಶ. ಆದಾಗ್ಯೂ, ಮಧುಮೇಹದ ಬಗ್ಗೆ ಅನೇಕ ರೀತಿಯ ಮಿಥ್ಯೆಗಳು ಮತ್ತು ತಪ್ಪುಗ್ರಹಿಕೆಗಳು ಸಮಾಜದಲ್ಲಿ ಹರಡಿವೆ. ಇದು ರೋಗಿಗಳಿಗೆ ಹಾನಿಕಾರಕವಾಗಿದೆ. ಇಂತ ಪರಿಸ್ಥಿತಿಯಲ್ಲಿ ಈ ಮಿಥ್ಯೆಗಳ ಸತ್ಯವನ್ನು ತಿಳಿದುಕೊಳ್ಳುವುದು ಮುಖ್ಯ. ಇದರಿಂದ ಮಧುಮೇಹವನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಬಹುದು.

ಮಧುಮೇಹಕ್ಕೆ ಸಂಬಂಧಿಸಿದ ಐದು ಪ್ರಮುಖ ಮಿಥ್ಯೆ & ಸತ್ಯಗಳು  

1. ಮಿಥ್ಯೆ: ಕೇವಲ ಸಿಹಿತಿಂಡಿಗಳು ಮಧುಮೇಹಕ್ಕೆ ಕಾರಣವಾಗುತ್ತವೆ.

ಸತ್ಯ: ಇದು ಕೇವಲ ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬ ದೊಡ್ಡ ಮಿಥ್ಯೆಯಾಗಿದೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ಖಂಡಿತವಾಗಿಯೂ ತೂಕ ಹೆಚ್ಚಾಗಬಹುದು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹಕ್ಕೆ ಇನ್ನೂ ಅನೇಕ ಕಾರಣಗಳಿವೆ. ಇವುಗಳಲ್ಲಿ ಆನುವಂಶಿಕ ಅಂಶಗಳು, ಜೀವನಶೈಲಿ ಮತ್ತು ಬೊಜ್ಜು ಪ್ರಮುಖವಾಗಿವೆ. ಟೈಪ್-1 ಮಧುಮೇಹವು ಸ್ವಯಂ ನಿರೋಧಕ ಸ್ಥಿತಿಯಾಗಿದೆ, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ದಾಳಿ ಮಾಡುತ್ತದೆ.

2. ಮಿಥ್ಯ: ಮಧುಮೇಹ ರೋಗಿಗಳು ಹಣ್ಣು ಸೇವಿಸಬಾರದು  

ಸತ್ಯ: ಮಧುಮೇಹ ರೋಗಿಗಳು ಹಣ್ಣುಗಳನ್ನು ಸೇವಿಸಬಾರದು ಎಂದು ಅನೇಕ ಜನರು ನಂಬುತ್ತಾರೆ. ಏಕೆಂದರೆ ಇವುಗಳು ನೈಸರ್ಗಿಕವಾಗಿ ಸಕ್ಕರೆಯನ್ನು ಹೊಂದಿರುತ್ತವೆ. ಆದಾಗ್ಯೂ, ಇದು ನಿಜವಲ್ಲ. ಸೇಬು, ಪೇರಳೆ ಮತ್ತು ಕಿತ್ತಳೆಯಂತಹ ಕೆಲವು ಹಣ್ಣುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವುದಿಲ್ಲ. ಸಮತೋಲಿತ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.

3. ಮಿಥ್ಯ: ಮಧುಮೇಹ ಎಂದರೆ ಯಾವಾಗಲೂ ಇನ್ಸುಲಿನ್ ತೆಗೆದುಕೊಳ್ಳುವುದು

ಸತ್ಯ: ಪ್ರತಿಯೊಬ್ಬ ಮಧುಮೇಹ ರೋಗಿಯು ಇನ್ಸುಲಿನ್ ಬಳಸುವುದಿಲ್ಲ. ಟೈಪ್-1 ಮಧುಮೇಹಕ್ಕೆ ಇನ್ಸುಲಿನ್ ಅಗತ್ಯವಿರುತ್ತದೆ, ಆದರೆ ಟೈಪ್-2 ಮಧುಮೇಹದಲ್ಲಿ ಜೀವನಶೈಲಿ ಬದಲಾವಣೆ, ಸರಿಯಾದ ಆಹಾರ ಮತ್ತು ಔಷಧಿಗಳ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಇತರ ಕ್ರಮಗಳಿಂದ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣವು ಸಾಧ್ಯವಾಗದಿದ್ದಾಗ ಮಾತ್ರ ಇನ್ಸುಲಿನ್ ಬಳಸಲಾಗುತ್ತದೆ.

4. ಮಿಥ್ಯ: ಮಧುಮೇಹವನ್ನು ಗುಣಪಡಿಸಬಹುದು

ಸತ್ಯ: ಮಧುಮೇಹವು ದೀರ್ಘಾವಧಿಯ ಕಾಯಿಲೆಯಾಗಿದ್ದು, ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದಾಗ್ಯೂ, ಸರಿಯಾದ ಜೀವನಶೈಲಿ ಮತ್ತು ಆಹಾರಕ್ರಮವನ್ನು ಅನುಸರಿಸುವ ಮೂಲಕ ಇದನ್ನು ನಿಯಂತ್ರಿಸಬಹುದು. ಟೈಪ್ 2 ಡಯಾಬಿಟಿಸ್ ರೋಗಿಗಳು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರದೊಂದಿಗೆ ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯವಾಗಿರಿಸಿಕೊಳ್ಳಬಹುದು, ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ.

5. ಮಿಥ್ಯೆ: ಮಧುಮೇಹದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಮಾತ್ರ ತಪ್ಪಿಸಬೇಕು

ಸತ್ಯ: ಮಧುಮೇಹದಲ್ಲಿ ಕಾರ್ಬೋಹೈಡ್ರೇಟ್‌ಗಳಿಗೆ ಮಾತ್ರವಲ್ಲದೆ ಸಂಪೂರ್ಣ ಸಮತೋಲಿತ ಆಹಾರಕ್ಕೂ ಗಮನ ನೀಡಬೇಕು. ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಸೇವನೆಯು ಸಹ ಮುಖ್ಯವಾಗಿದೆ. ಕಾರ್ಬೋಹೈಡ್ರೇಟ್‌ಗಳನ್ನು ಸಹ ಸರಿಯಾಗಿ ಆಯ್ಕೆ ಮಾಡಬೇಕು, ಉದಾಹರಣೆಗೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ, ಇದು ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದಿಲ್ಲ.

ವಿಶೇಷ ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಸಾಮಾನ್ಯ ಮಾಹಿತಿಯ ಸಹಾಯ ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೊದಲು ನೀವು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿರಿ.

Source : https://zeenews.india.com/kannada/health/world-diabetes-day-people-believe-these-5-myths-related-to-diabetes-to-be-true-know-their-truth-261176

Leave a Reply

Your email address will not be published. Required fields are marked *