ಥ್ರಂಬೋಸೈಟೋಪೆನಿಯಾ ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ವೈದ್ಯಕೀಯ ಪದವಾಗಿದೆ. ಪ್ಲೇಟ್ಲೆಟ್‌ಗಳು ಬಣ್ಣರಹಿತ ರಕ್ತ ಕಣಗಳಾಗಿವೆ, ಇದು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ.
![](https://samagrasuddi.co.in/wp-content/uploads/2023/12/image-149.png)
ಪ್ರತಿಯೊಬ್ಬ ಮನುಷ್ಯನ ಆರೋಗ್ಯ (Health) ಉತ್ತಮವಾಗಿರಬೇಕು ಎಂದರೆ ದೇಹದಲ್ಲಿರುವ ಕೆಂಪು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್‌ಗಳು (Platelet Count) ಸರಿಯಾದ ಪ್ರಮಾಣದಲ್ಲಿ ಇರಲೇಬೇಕು. ಮುಖ್ಯವಾಗಿ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದನ್ನು ಖಚಿತಪಡಿಸಿಕೊಳ್ಳಲು ಪ್ಲೇಟ್ಲೆಟ್ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಹೀಗಾಗಿ ನಾವಿಲ್ಲಿ ಆಹಾರಗಳು, ಜೀವಸತ್ವಗಳು ಮತ್ತು ಹೆಚ್ಚಿನವುಗಳೊಂದಿಗೆ ನೈಸರ್ಗಿಕವಾಗಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ? ಮತ್ತು ಈ ಪ್ಲೇಟ್ಲೆಟ್ ಕೌಂಟ್ ಕಡಿಮೆಯಾದರೆ ಏನಾಗುತ್ತದೆ ಎಂಬುದನ್ನು ನೋಡೋಣ.
ಕಡಿಮೆ ಪ್ಲೇಟ್ಲೆಟ್ ಕೌಂಟ್ ಎಂದರೇನು?
ಥ್ರಂಬೋಸೈಟೋಪೆನಿಯಾ ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ವೈದ್ಯಕೀಯ ಪದವಾಗಿದೆ. ಪ್ಲೇಟ್ಲೆಟ್‌ಗಳು ಬಣ್ಣರಹಿತ ರಕ್ತ ಕಣಗಳಾಗಿವೆ, ಇದು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ.
ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ (ಎನ್‌ಎಚ್‌ಎಲ್‌ಬಿಐ) ಪ್ರಕಾರ, ವಯಸ್ಕರಲ್ಲಿ ಪ್ಲೇಟ್ಲೆಟ್ ಎಣಿಕೆಯು ಪ್ರತಿ ಮೈಕ್ರೋಲೀಟರ್ (μl) ರಕ್ತಕ್ಕೆ 150,000-450,000 ಪ್ಲೇಟ್‌ಲೆಟ್‌ಗಳು ಇರಬೇಕು. ಅದೇ 150,000 ಪ್ಲೇಟ್ಲೆಟ್‌ಗಳಿಗಿಂತ ಕಡಿಮೆಯಾಗಿದ್ದರೆ ಅವರನ್ನು ಥ್ರಂಬೋಸೈಟೋಪೆನಿಯಾ ಸಮಸ್ಯೆ ಇರುವವರು ಎನ್ನಲಾಗುತ್ತದೆ.
ಕಡಿಮೆ ಪ್ಲೇಟ್ಲೆಟ್‌ನ ಲಕ್ಷಣಗಳು
ರಕ್ತ ಹೆಪ್ಪುಗಟ್ಟುವಿಕೆಗೆ ಪ್ಲೇಟ್ಲೆಟ್ ಅತ್ಯಗತ್ಯ. ಆದರೆ ಈ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದರೆ ವ್ಯಕ್ತಿಯು ಥ್ರಂಬೋಸೈಟೋಪೆನಿಯಾದಂತಹ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಥ್ರಂಬೋಸೈಟೋಪೆನಿಯಾದ ಹೆಚ್ಚಿನ ರೋಗಲಕ್ಷಣಗಳು ರಕ್ತಸ್ರಾವಕ್ಕೆ ಸಂಬಂಧಿಸಿವೆ.
- ಸಣ್ಣ ಗಾಯದ ನಂತರವೂ ನಿರಂತರ ರಕ್ತಸ್ರಾವ
- ಮೂಗಿನ ರಕ್ತಸ್ರಾವಗಳು
- ಒಸಡಿನಲ್ಲಿ ರಕ್ತಸ್ರಾವ
- ಮೂತ್ರದಲ್ಲಿ ರಕ್ತ
- ಮಲದಲ್ಲಿ ರಕ್ತ
- ಹೆಚ್ಚಿನ ಮುಟ್ಟಿನ ರಕ್ತಸ್ರಾವ
ಈ ರೋಗಲಕ್ಷಣಗಳನ್ನು ಅನುಭವಿಸುವ ಜನರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಚಿಕಿತ್ಸೆಯಿಲ್ಲದೆ ಹೋದರೆ ಥ್ರಂಬೋಸೈಟೋಪೆನಿಯಾ ತೀವ್ರ ತೊಡಕುಗಳಿಗೆ ಕಾರಣವಾಗಬಹುದು.
ಪ್ಲೇಟ್ಲೆಟ್ ಸಂಖ್ಯೆಯನ್ನು ಉತ್ತೇಜಿಸಲು ಸಹಕಾರಿಯಾಗುವ ನೈಸರ್ಗಿಕ ವಿಧಾನ
ಫೋಲೇಟ್ ಭರಿತ ಆಹಾರಗಳು
ಫೋಲೇಟ್ ಅಥವಾ ವಿಟಮಿನ್ ಬಿ 9 ಆರೋಗ್ಯಕರ ರಕ್ತ ಕಣಗಳಿಗೆ ಅಗತ್ಯವಾದ ಬಿ ವಿಟಮಿನ್ ಆಗಿದೆ. ಪಾಲಕ್, ಹಸಿರು ತರಕಾರಿ, ಸೊಪ್ಪು, ಬ್ಲ್ಯಾಕ್ ಐ ಅವರೆಕಾಳು, ಡೈರಿ ಪರ್ಯಾಯಗಳು, ಅನ್ನ, ಯೀಸ್ಟ್ ಇವು ಫೋಲೇಟ್ ಭರಿತ ಆಹಾರಗಳಾಗಿದ್ದು ಪ್ಲೇಟ್ಲೆಟ್ ಮಟ್ಟವನ್ನು ಕಾಪಾಡುತ್ತವೆ.
ವಿಟಮಿನ್ ಬಿ 12 ಭರಿತ ಆಹಾರಗಳು
ಕೆಂಪು ರಕ್ತ ಕಣಗಳ ರಚನೆಗೆ ವಿಟಮಿನ್ ಬಿ 12 ಅವಶ್ಯಕ. ದೇಹದಲ್ಲಿನ ಕಡಿಮೆ ಮಟ್ಟದ ವಿಟಮಿನ್ ಬಿ 12 ಸಹ ಕಡಿಮೆ ಪ್ಲೇಟ್ಲೆಟ್ ಎಣಿಕೆಗೆ ಕಾರಣವಾಗಬಹುದು. NIHTrusted Source ಪ್ರಕಾರ, 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ದಿನಕ್ಕೆ 2.4 mcg ವಿಟಮಿನ್ B12 ಅಗತ್ಯವಿರುತ್ತದೆ. ಗರ್ಭಿಣಿಯರಿಗೆ 2.6 mcg ವರೆಗೆ ಅಗತ್ಯವಿರುತ್ತದೆ.
ವಿಟಮಿನ್ ಬಿ 12 ಪ್ರಾಥಮಿಕವಾಗಿ ಪ್ರಾಣಿ ಮೂಲದ ಉತ್ಪನ್ನಗಳಲ್ಲಿ ಕಂಡುಬರುತ್ತದೆ, ಅವುಗಳೆಂದರೆ, ಮೊಟ್ಟೆಗಳು, ಸಾಲ್ಮನ್ ಮತ್ತು ಟ್ಯೂನ ಮೀನು ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಅಂಸ ಇದ್ದರೆ, ಸಸ್ಯಾಹಾರಿಗಳಿಗೆ ಬಾದಾಮಿ ಹಾಲು ಅಥವಾ ಸೋಯಾ ಹಾಲು, ಪೂರಕಗಳು, ಡೈರಿ ಆಹಾರಗಳಲ್ಲಿ ಇದು ಕಂಡು ಬರುತ್ತದೆ.
ಕ್ಲೋರೊಫಿಲ್
ಕ್ಲೋರೊಫಿಲ್ ಸಸ್ಯಗಳಲ್ಲಿ ಹಸಿರು ವರ್ಣದ್ರವ್ಯವಾಗಿದೆ. ಕ್ಲೋರೆಲ್ಲಾದಂತಹ ಪಾಚಿ-ಆಧಾರಿತ ಪೂರಕಗಳು ಕ್ಲೋರೊಫಿಲ್ನಲ್ಲಿ ಸಮೃದ್ಧವಾಗಿವೆ. ಕ್ಲೋರೊಫಿಲ್ ಅನ್ನು ತೆಗೆದುಕೊಳ್ಳುವುದರಿಂದ ಕಡಿಮೆ ಪ್ಲೇಟ್ಲೆಟ್ ಎಣಿಕೆಯ ಕೆಲವು ರೋಗಲಕ್ಷಣಗಳನ್ನು ನಿವಾರಿಸಬಹುದು ಎನ್ನಲಾಗಿದೆ.
ಪಪ್ಪಾಯಿ ಎಲೆಯ ಸಾರ
2019 ರ ಅಧ್ಯಯನವು ಪ್ಲೇಟ್ಲೆಟ್ ಎಣಿಕೆಯ ಮಟ್ಟವನ್ನು ಸರಿದೂಗಿಸಲು ಪಪ್ಪಾಯಿ ಎಲೆಯ ಸಾರ ಮುಖ್ಯವಾಗಿದೆ ಎಂದು ತಿಳಿಸಿದೆ. ಪಪ್ಪಾಯಿ ಎಲೆಯನ್ನು ರುಬ್ಬಿ ಕುಡಿಯುವುದು ಪ್ಲೇಟ್ಲೆಟ್ ಎಣಿಕೆಯನ್ನು ಅಮತೋಲನದಲ್ಲಿಡುತ್ತದೆ.
ನೀವು ಕಡಿಮೆ ಪ್ಲೇಟ್ಲೆಟ್ಗಳನ್ನು ಹೊಂದಿದ್ದರೆ ಯಾವ ಆಹಾರವನ್ನು ತಪ್ಪಿಸಬೇಕು?
ಕೆಲವು ಆಹಾರಗಳು, ಗಿಡಮೂಲಿಕೆಗಳು ಮತ್ತು ಪಾನೀಯಗಳು ಪ್ರತಿರಕ್ಷಣಾ ಥ್ರಂಬೋಸೈಟೋಪೆನಿಯಾ (ITP) ಹೊಂದಿರುವ ಜನರಲ್ಲಿ ಪ್ಲೇಟ್ಲೆಟ್ ಎಣಿಕೆಗಳನ್ನು ಕಡಿಮೆ ಮಾಡಬಹುದು. ಹೀಗಾಗಿ ಒಬ್ಬ ವ್ಯಕ್ತಿಯು ಕಡಿಮೆ ಪ್ಲೇಟ್ಲೆಟ್ಗಳನ್ನು ಹೊಂದಿದ್ದರೆ, ಕೃತಕ ಸಿಹಿಕಾರಕ ಆಸ್ಪರ್ಟೇಮ್, ತಾಹಿನಿ, ಕ್ರ್ಯಾನ್‌ಬೆರಿ ಜ್ಯೂಸ್ ಮತ್ತು ಕ್ವಿನೈನ್ ಅನ್ನು ಸೇವಿಸುವ ಮೊದಲು ವೈದ್ಯರೊಂದಿಗೆ ಮಾತನಾಡುವುದನ್ನು ಪರಿಗಣಿಸಬೇಕು. ಹಾಗೆಯೇ ಮಿತಿಮೀರಿದ ಆಲ್ಕೋಹಾಲ್ ಸೇವನೆಯು ಪ್ಲೇಟ್ಲೆಟ್ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1