Health Tips: ಯೋಗ ದೇಹ ಮತ್ತು ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುವ ಪರಿಪೂರ್ಣ ಆರೋಗ್ಯಕರ ಅಭ್ಯಾಸವಾಗಿದೆ. ನೀವೇನಾದರೂ ಫಿಟ್ ಮತ್ತು ಹೆಲ್ತಿಯಾಗಿರಲು ಬಯಸಿದರೆ, ಆರೋಗ್ಯಕರ ಆಹಾರ ಪದ್ಧತಿಯ ಜೊತೆ ಜೊತೆಗೆ ಬೆಳಗ್ಗೆ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿ. ಈ ಯೋಗ ಭಂಗಿಗಳು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ. ಹಾಗಿದ್ರೆ ಆ ಸರಳ ಯೋಗ ಭಂಗಿಗಳು ಯಾವುವು ಎಂಬುದನ್ನು ನೋಡೋಣ.
ಈಗಿನ ದಿನಗಳಲ್ಲಿ ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಫಿಟ್ ಮತ್ತು ಆರೋಗ್ಯವಾಗಿರಲು ಪ್ರತಿದಿನ ಆರೋಗ್ಯಕರ ಆಹಾರ ಪದ್ಧತಿಯ ಪಾಲನೆ, ಜಿಮ್ ಮತ್ತು ವ್ಯಾಯಾಮಗಳನ್ನು ಮಾಡುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಇವುಗಳ ಜೊತೆಗೆ ಪ್ರತಿನಿತ್ಯ ಯೋಗಾಭ್ಯಾಸಗಳನ್ನು ಮಾಡುವುದು ಕೂಡ ತುಂಬಾನೇ ಒಳ್ಳೆಯದು. ಏಕೆಂದರೆ ಇದು ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನೀವು ಸಹ ಫಿಟ್ ಮತ್ತು ಹೆಲ್ತಿಯಾಗಿರಬೇಕು ಎಂದು ಬಯಸಿದರೆ, ಪ್ರತಿದಿನ ಬೆಳಗ್ಗೆ ಈ ಐದು ಯೋಗಾಸನಗಳನ್ನು ಅಭ್ಯಾಸ ಮಾಡಿ. ಈ ಯೋಗಭಂಗಿಗಳು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ, ದಿನವಿಡೀ ಸಕ್ರಿಯವಾಗಿರಿಸುತ್ತದೆ.
https://www.instagram.com/reel/C9cpeRDv-2L/?utm_source=ig_web_button_share_sheet
ಪ್ರತಿದಿನ ಬೆಳಗ್ಗೆ ಅಭ್ಯಾಸಿಸಬೇಕಾದ 5 ಯೋಗಾಸನಗಳು
1. ಕ್ಯಾಟ್-ಕೌ ಸ್ಟ್ರೆಚ್
ಈ ಆಸನವು ನಿಮ್ಮ ಬೆನ್ನುಮೂಳೆಗೆ ತುಂಬಾನೇ ಪ್ರಯೋಜನಕಾರಿ. ಇದು ಬೆನ್ನುಮೂಳೆಯ ಒತ್ತಡವನ್ನು ಕಡಿಮೆ ಮಾಡುತ್ತದೆ, ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಸೊಂಟ ಮತ್ತು ಕುತ್ತಿಗೆಯಲ್ಲಿನ ಒತ್ತಡವನ್ನು ಸಹ ನಿವಾರಿಸುತ್ತದೆ. ಬೆಳಿಗ್ಗೆ ಎದ್ದ ನಂತರ ಹಾಸಿಗೆಯ ಮೇಲೆಯೇ ಐದು ನಿಮಿಷಗಳ ಕಾಲ ಈ ಯೋಗಾಸನವನ್ನು ಮಾಡಬಹುದು.
2. ಪಪ್ಪಿ ಪೋಸ್
ಈ ಆಸನವು ಭುಜಗಳಿಗೆ ಹಾಗೂ ಬೆನ್ನುಮೂಳೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಬೆನ್ನುಮೂಳೆ ಮತ್ತು ಭುಜವನ್ನು ಹಿಗ್ಗಿಸಿ, ಬೆನ್ನು ನೋವನ್ನು ನಿವಾರಿಸುತ್ತದೆ. ಜೊತೆಗೆ ಈ ಆಸನವು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
3. ಚಿಟ್ಟೆ ಭಂಗಿ ಯೋಗ (ಬಟರ್‌ಫ್ಲೈ ಪೋಸ್)
ಚಿಟ್ಟೆ ಭಂಗಿ ಯೋಗ ವಿಶೇಷವಾಗಿ ಮಹಿಳೆಯರಿಗೆ ತುಂಬಾನೇ ಉಪಯುಕ್ತ. ಇದು ಸೊಂಟ ನೋವಿನಿಂದ ಪರಿಹಾರ, ಸೊಂಟದ ಭಾಗದ ಮಾಂಸಖಂಡಗಳ ಸದೃಢತೆಗೆ ನೆರವಾಗುತ್ತದೆ. ಈ ಯೋಗಾಸನವು ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ, ದೇಹವನ್ನು ಹಗುರಗೊಳಿಸುತ್ತದೆ.
4. ಪವನ ಮುಕ್ತಾಸನ
ಪವನ ಮುಕ್ತಾಸನವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಸೊಂಟದ ಭಾಗದ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಬೆನ್ನುಮೂಳೆಯನ್ನು ಬಲಪಡಿಸುತ್ತದೆ.
5. ಸ್ಪೈನಲ್ ಟ್ವಿಸ್ಟ್ ಭಂಗಿ
ಈ ಯೋಗ ಭಂಗಿಯು ಬೆನ್ನುಮೂಳೆಗೆ ಅತ್ಯಂತ ಪ್ರಯೋಜನಕಾರಿ. ಒತ್ತಡ ನಿವಾರಣೆ, ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಕಾರಿ. ನಿಯಮಿತವಾಗಿ ಅಭ್ಯಾಸ ಮಾಡಿದರೆ ಯಕೃತ್ತು, ಮೂತ್ರಪಿಂಡಗಳು ಆರೋಗ್ಯಕರವಾಗಿರುತ್ತವೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಸಮಾರೋಪ
ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಸಮತೋಲನ ದೊರೆಯುತ್ತದೆ. ದಿನವಿಡೀ ಉತ್ಸಾಹ ಮತ್ತು ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಪದ್ಧತಿ ಮತ್ತು ಯೋಗದ ಸಂಯೋಜನೆ ನಿಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲದು.
Views: 27