ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿರುವ ನೂತನ ಶ್ರೀರಾಮ ಜನ್ಮಭೂಮಿ ದೇವಾಲಯದ ಗೋಲ್ಡನ್ ಶಿಖರದ ಮೇಲೆ ಕೇಸರಿ ಧರ್ಮ ಧ್ವಜವನ್ನು ಹಾರಿಸುವ ಮೂಲಕ ಐತಿಹಾಸಿಕ ಧ್ವಜಾರೋಹಣ ಸಮಾರಂಭವನ್ನು ನೆರವೇರಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂತನ ಶ್ರೀರಾಮ ಜನ್ಮಭೂಮಿ ದೇವಾಲಯದ ಗೋಲ್ಡನ್ ಶಿಖರದ ಮೇಲೆ ಕೇಸರಿ ಧರ್ಮ ಧ್ವಜವನ್ನು ಹಾರಿಸುವ ಮೂಲಕ ಐತಿಹಾಸಿಕ ಧ್ವಜಾರೋಹಣ ಸಮಾರಂಭವನ್ನು ನೆರವೇರಿಸಿದ್ದಾರೆ. ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಪ್ರಧಾನಿ ಮೋದಿಯವರು ಹಾರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಧ್ವಜಾರೋಹಣ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ಅವರು ಕೂಡ ನೀಡಿದ್ದಾರೆ.
2020ರ ಆ. 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ ರಾಮಮಂದಿರದ ಶಿಲಾನ್ಯಾಸವನ್ನು ನೆರವೇರಿಸಿದ್ದರು. 2024ರ ಜ.22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಿತು. ಈಗ ಮಂದಿರದ ಕಾಮಗಾರಿ ಪೂರ್ಣಗೊಂಡಿದ್ದು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.. ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ದರ್ಬಾರ್‌ನಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ಗರ್ಭ ಗುಡಿಯಲ್ಲಿ ಆರತಿ ಮಾಡಿ ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿಯವರು ಶುಭಕರವಾದ ಅಭಿಜಿತ್ ಮುಹೂರ್ತದಲ್ಲಿ, ಬೆಳಿಗ್ಗೆ 11:50 ಕ್ಕೆ ಧ್ವಜಾ ರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಭಕ್ತರ ಉತ್ಸಾಹಗಳು ಎದ್ದು ತೋರುವಂತಿತ್ತು. ಶಂಖಗಳು ಮೊಳಗಿದವು,ಮತ್ತು ಸಾವಿರಾರು ಭಕ್ತರು ಭಜನೆಗಳನ್ನು ಹಾಡುವ ಮೂಲಕ ಹರ್ಷೋದ್ಗಾರ ಮಾಡಿದರು.ಕೇಸರಿ ಧರ್ಮ ಧ್ವಜವನ್ನು ಹಾರಿಸಿ ಮಾತನಾಡಿದ ಪ್ರಧಾನಿ ಇಂದು ಶತಮಾನಗಳ ಕಾಯುವಿಕೆಗೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಇಂದು, ಭಗವಾನ್ ರಾಮನ ಹೆಸರು ಇಡೀ ಪ್ರಪಂಚ ದಾದ್ಯಂತ ಪ್ರತಿಧ್ವನಿಸುತ್ತದೆ. ರಾಮನ ಪ್ರತಿಯೊಬ್ಬ ಭಕ್ತನ ಹೃದಯದಲ್ಲಿ ಅಪ್ರತಿಮವಾದ ತೃಪ್ತಿಯ ಭಾವನೆ, ಶತಮಾನಗಳ ನೋವು ಇಂದು ಮರೆಯಾಗಿದೆ.. ಐದುನೂರು ವರ್ಷಗಳ ಕಾಲ ಉರಿಯುತ್ತಿದ್ದ ಆ ಪವಿತ್ರ ಯಜ್ಞದ ಪೂರ್ಣಗೊಳಿಸುವಿಕೆ ಇದು ಸಾಕ್ಷಿ ಎಂದು ಅವರು ಹೇಳಿದರು..
ರಾಮಮಂದಿರದ ಶಿಖರವನ್ನು ಸಾಂಪ್ರದಾಯಿಕ ಉತ್ತರ ಭಾರತೀಯ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸುತ್ತಮುತ್ತಲಿನ 800 ಮೀಟರ್ ಸುತ್ತುವರಿದ ಪಾರ್ಕೋಟಾ ದಕ್ಷಿಣ ಭಾರತದ ವಾಸ್ತುಶಿಲ್ಪದ ಸಂಗತಿಯನ್ನು ಪ್ರದರ್ಶಿಸುತ್ತದೆ. ಇದು ಭಾರತದ ವೈವಿಧ್ಯಮಯ ದೇವಾಲಯ ಸಂಪ್ರದಾಯಗಳ ಸಮ್ಮಿಲನವನ್ನು ತೋರ್ಪಡಿಸಲಿದೆ. ರಾಮಮಂದಿರದ ಮೇಲೆ ಹಾರಾಡುತ್ತಿರುವ ಧ್ವಜ ತುಂಬಾ ವಿಶೇಷವಾಗಿದ್ದು, ಧ್ವಜವನ್ನು ಗುಜರಾತ್‌ನ ಅಹಮದಾಬಾದ್ ನಲ್ಲಿ ತಯಾರಿಸಲಾಗಿದೆ. ಧಾರ್ಮಿಕ ಮಹತ್ವವುಳ್ಳ ವಿಶಿಷ್ಟವಾದ ಮರದ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಲಾಗಿದೆ. 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸ ಗೊಳಿಸಲಾಗಿದೆ. ಈ ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾ ಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, ‘ಓಂ’ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ..
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ಧ್ವಜಾರೋಹಣ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಹಲವು ವರ್ಷದ ರಾಮಮಂದಿರ ಹೋರಾಟಕ್ಕೆ ಇದು ತಾತ್ವಿಕ ಅಂತ್ಯ ದೊರೆತಿದೆ.
ರಾಮ ಮಂದಿರದ ಧರ್ಮ ಧ್ವಜದಲ್ಲಿ ರಾರಾಜಿಸಿದ ‘ಓಂ, ಸೂರ್ಯ, ಮರ’: ಇದರ ಅರ್ಥವೇನು?

ಧ್ವಜದಲ್ಲಿರುವ ಓಂ ಅಕ್ಷರದ ಅರ್ಥವೇನು?
ಅಯೋಧ್ಯೆಯ ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜವು ಓಂ ಚಿಹ್ನೆಯನ್ನು ಹೊಂದಿದೆ. ಸನಾತನ ಧರ್ಮದಲ್ಲಿ ಓಂ ಅನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹಿಂದೂ ಧರ್ಮದ ಶುಭ ಸಂಕೇತಗಳಲ್ಲಿ ಒಂದಾಗಿದೆ. ಓಂ ಶಬ್ಧಕ್ಕೆ ವಿಶಿಷ್ಟ ಪವರ್ ಕೂಡ ಇದೆ. ಇದರ ಪ್ರಭಾವವು ವಿಶೇಷ ಸಕಾರಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಸನಾತನ ಧರ್ಮದಲ್ಲಿ ಮಂತ್ರಗಳಲ್ಲಿಯೂ ಓಂ ಅನ್ನು ಪಠಿಸಲಾಗುತ್ತದೆ.

ಧ್ವಜದ ಮೇಲಿನ ಸೂರ್ಯ ಚಿಹ್ನೆಯ ಅರ್ಥವೇನು? ರಾಮ ದೇವಾಲಯದ ಈ ಧ್ವಜದ ಮೇಲೆ ಸೂರ್ಯನ ಚಿಹ್ನೆಯನ್ನು ಚಿತ್ರಿಸಲಾಗಿದೆ. ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ಸೂರ್ಯವಂಶಿ ರಾಜವಂಶಕ್ಕೆ ಸೇರಿದವನು. ಈ ಸೂರ್ಯವಂಶಿ ರಾಜವಂಶವು ಸೂರ್ಯ ದೇವರ ಮಗನಾದ ವೈವಸ್ವತ ಮನುವಿನಿಂದ ಹುಟ್ಟಿಕೊಂಡಿತು. ರಾವಣನ ಮೇಲೆ ಜಯ ಸಾಧಿಸಲು, ರಾಮನು ಮಹರ್ಷಿ ಅಗಸ್ತ್ಯರ ಆಜ್ಞೆಯ ಮೇರೆಗೆ ಸೂರ್ಯ ದೇವರ ವಿಶೇಷ ಪೂಜೆಯನ್ನು ಮಾಡಿದ್ದನು. ಹಾಗಾಗಿ ರಾಮನ ವಂಶದ ಗುರುತಾಗಿ ಸೂರ್ಯನ ಚಿತ್ರವನ್ನು ಧ್ವಜದಲ್ಲಿ ಇರಿಸಲಾಗಿದೆ.
ಕೋವಿದರ್ ಮರದ ಮಹತ್ವ

ಪೌರಾಣಿಕ ಗ್ರಂಥಗಳಲ್ಲಿ ಕೋವಿದರ್ ಮರಕ್ಕೆ ವಿಶೇಷ ಮಹತ್ವವಿದೆ. ಋಷಿ ಕಶ್ಯಪ್ ರಚಿಸಿದ ಮಂದಾರ ಮತ್ತು ಪಾರಿಜಾತದ ಮಿಶ್ರತಳಿ ಎಂದು ನಂಬಲಾದ ಕೋವಿದಾರ ಮರವು ಪ್ರಾಚೀನ ಜ್ಞಾನ ಮತ್ತು ಪವಿತ್ರ ಸಂಪ್ರದಾಯಗಳ ನಿರಂತರತೆಯನ್ನು ಸಂಕೇತಿಸುತ್ತದೆ. ಇದು ಅಯೋಧ್ಯೆಯಲ್ಲಿ ಪವಿತ್ರ ಮರವಾಗಿತ್ತು. ಆ ಸಮಯದಲ್ಲಿ ಈ ಮರದ ಚಿತ್ರವನ್ನು ಅಯೋಧ್ಯೆಯ ಧ್ವಜದ ಮೇಲೆ ಚಿತ್ರಿಸಲಾಗಿತ್ತು ಎನ್ನುವ ನಂಬಿಕೆ ಇದೆ. ಆದ್ದರಿಂದ, ಈ ಮೂರು ಚಿಹ್ನೆಗಳನ್ನು ಧ್ವಜದ ಮೇಲೆ ಚಿತ್ರಿಸಲಾಗಿದೆ.
Views: 17