ಚಿತ್ರದುರ್ಗ ಆ. 24
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದೇಶದಲ್ಲಿ ನಡೆಯುತ್ತಿರುವ ಹಲವು ಪ್ರತಿಭಟನೆಗಳು ಹಾಗೂ ಸಂಘರ್ಷಗಳ ಹಿನ್ನೆಲೆಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪಾತ್ರವಿದ್ದು, ಅವರು ದೇಶದಲ್ಲಿ ಅರಾಜಕತೆ ಮತ್ತು ನಾಗರಿಕ ದಂಗೆ ಸೃಷ್ಟಿಸಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಂಸದರಾದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸೋಮುವಾರ ಅವರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜೆಎನ್ಯು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಬೋರಾ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘದ ಚಟುವಟಿ ಕೆಗಳ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ ಅವರು. ಭವಿಷ್ಯದ ಅರಿವಿಲ್ಲದ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಉದ್ಯೋಗ ಮತ್ತು ವ್ಯಾಸಂಗದಿಂದ ದೂರತಳ್ಳಿ ರಾಜಕೀಯಕ್ಕೆ ಎಳೆದು ತರುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ ಎಂದು ಹೇಳಿದರು.
ಬ್ರಿಟಿಷರ ಆಡಳಿತ ಕಾಲದಲ್ಲಿ 1854ರಲ್ಲಿ ಶಿಕ್ಷಣ ಆಯುಕ್ತ ಚಾಲ್ರ್ಸ್ ವುಡ್ ಅವರು ನೀಡಿದ ವರದಿಯನ್ನಿಡಿದು, ದೇಶದಲ್ಲಿ ಶೋಷಿತ ಹಾಗೂ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು ಎಂದು ವಿವರಿಸಿ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಜೀವಂತವಾಗಿರುವವರೆಗೆ ಜಾತಿ ಆಧಾರಿತ ಮೀಸಲಾತಿ ಮುಂದುವರಿಯಬೇಕು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೆಳವರ್ಗದವರನ್ನು ಮೇಲೆತ್ತಲು ಸಂವಿಧಾನಶಿಲ್ಪಿಗಳು ಈ ವ್ಯವಸ್ಥೆಯನ್ನು ರೂಪಿಸಿದ್ದಾರೆ ಎಂದು ಪ್ರತಿಪಾದಿಸಿ ಮುರುಘಾ ಮಠ, ಸಿರಿಗೆರಿ ಮಠ, ತುಮಕೂರು ಮಠ ಹಾಗೂ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ, ಬಿಎಲ್ಡಿಇ, ಕೆಎಲ್ಇ ಮುಂತಾದ ಸಂಸ್ಥೆಗಳು ದಾಸೋಹ ಮತ್ತು ಅಕ್ಷರ ದಾನದ ಮೂಲಕ ಶೋಷಿತರಿಗೆ ಶಿಕ್ಷಣ ನೀಡಿವೆ. ಅಷ್ಟೇ ಅಲ್ಲದೆ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಂಸ್ಥೆಯು ಯಾವುದೇ ಸರ್ಕಾರಿ ಅನುದಾನವಿಲ್ಲದೆ 8,500 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕಾರಜೋಳ ಬಣ್ಣಿಸಿದರು.
‘ಉeಟಿ Z’ ಅಥವಾ ವಿದ್ಯಾರ್ಥಿ ಸಂಘಟನೆಗಳು ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲೆ ದೌರ್ಜನ್ಯ ಎಸಗುವುದು ಮತ್ತು ಪರಿಶೀಲನೆ ನೆಪದಲ್ಲಿ ತೊಂದರೆ ನೀಡುವುದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಿದ್ದರೂ, ಕಾನೂನನ್ನು ಕೈಗೆತ್ತಿಕೊಳ್ಳುವ ಪುಂಡ ಪೋಕ್ರಿಗಳ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಡತನ, ಸಾಮಾಜಿಕ ವ್ಯವಸ್ಥೆಯ ನೋವನ್ನು ಅನುಭವಿಸಿ ಬಂದವರಾಗಿದ್ದು, ದೇಶದ ಸಾಮಾಜಿಕ ಕಾಳಜಿ ಹೊಂದಿದ್ದಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ದೇಶದ ಇತಿಹಾಸ, ಭಾಷೆ, ಸಾಮಾಜಿಕ ನೋವುಗಳ ಅರಿವಿಲ್ಲದೆ ಕೇವಲ ಅಧಿಕಾರಕ್ಕಾಗಿ ದೇಶದ್ರೋಹಿ ಶಕ್ತಿಗಳಿಗೆ ಹಾಗೂ ಅರಾಜಕತೆ ಹುಟ್ಟುಹಾಕುವ ಗುಂಪುಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸಂಸದರು ಆರೋಪಿಸಿದರು. ದೇಶದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವ ದೊಡ್ಡ ಸಂಚು ನಡೆಯುತ್ತಿದ್ದು, ದಲಿತ, ಹಿಂದುಳಿದ ಹಾಗೂ ಎಸ್ಸಿ/ಎಸ್ಟಿ ಸಮುದಾಯಗಳು ಇಂತಹ ಹುನ್ನಾರಗಳು ಮತ್ತು ಪ್ರಚೋದನಕಾರಿ ಹೋರಾಟಗಳಿಗೆ ಬೆಂಬಲ ನೀಡದೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿ ದೇಶದ ಶಾಂತಿ, ಸೌಹಾರ್ದತೆ ಮತ್ತು ಸಂವಿಧಾನಾತ್ಮಕ ಮೀಸಲಾತಿಯನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕರೂ ಅರಾಜಕ ಶಕ್ತಿಗಳ ವಿರುದ್ಧ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎ.ಮುರಳಿ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಜಿಲ್ಲಾ ಅಧ್ಯಕ್ಷ ಪರಶುರಾಮ್ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j