Home remedies for damaged hair: ಬೇಸಿಗೆಯಲ್ಲಿ ನಿರ್ಜೀವ ಮತ್ತು ಶುಷ್ಕ ಕೂದಲಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಕೂದಲಿನ ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಲವು ಮನೆಮದ್ದುಗಳನ್ನು ಬಳಸಬಹುದು.

Home remedies for damaged hair : ಈಗ ಬೇಸಿಗೆ ನಡೆಯುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನಿರ್ಜೀವ ಮತ್ತು ಶುಷ್ಕ ಕೂದಲಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದಾಗಿ ಅನೇಕ ಮಹಿಳೆಯರು ಕಾಲಕಾಲಕ್ಕೆ ಸ್ಪಾ ಅಥವಾ ಕೂದಲಿನ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಸಲುವಾಗಿ ಸಲೂನ್, ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಹೆಚ್ಚು ಹಣ ಖರ್ಚು ಮಾಡದೆ ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸುವ ಮೂಲಕ ನಿಮ್ಮ ಕೂದಲಿನ ಆರೈಕೆಯನ್ನು ಮಾಡಬಹುದು. ಈ ವಿಧಾನಗಳು ತುಂಬಾ ಸರಳ ಮತ್ತು ಸುಲಭ. ಮಾತ್ರವಲ್ಲ ಹಾನಿಗೊಳಗಾದ ಕೂದಲನ್ನು ಕೆಲವೇ ದಿನಗಳಲ್ಲಿ ಸರಿಪಡಿಸಲು ಸಹಾಯ ಮಾಡುತ್ತದೆ.
ಕೂದಲಿಗೆ ಎಣ್ಣೆಯನ್ನು ಹಚ್ಚುವುದು :
ಹಲವು ಬಾರಿ ನಾವು ಚರ್ಮದ ಆರೈಕೆಗಾಗಿ ವಿವಿಧ ರೀತಿಯ ಉತ್ಪನ್ನಗಳು ಮತ್ತು ವಿಧಾನಗಳನ್ನು ಅನುಸರಿಸುತ್ತೇವೆ. ಆದರೆ ನಾವು ನಮ್ಮ ಕೂದಲಿನ ಆರೈಕೆಯನ್ನು ಮರೆತುಬಿಡುತ್ತೇವೆ . ಈ ಕಾರಣದಿಂದಾಗಿ, ಕೂದಲು ಒರಟು ಮತ್ತು ನಿರ್ಜೀವವಾಗುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚು. ಈ ಕಾರಣದಿಂದಾಗಿ, ಕೂದಲಿನ ಸ್ಪಿಲ್ಟ್ ಎಂಡ್ಸ್ ಸಮಸ್ಯೆಯನ್ನು ಕೂಡಾ ಎದುರಿಸಬೇಕಾಗುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆ ಕೂಡಾ ನಿಂತು ಬಿಡುತ್ತದೆ.
ಯಾವ ಎಣ್ಣೆ ಬೆಸ್ಟ್ :
ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಕೂದಲಿನ ಸಮಸ್ಯೆಗೆ ಇರುವ ಸರಳ ಪರಿಹಾರವಾಗಿದೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಎಣ್ಣೆಯನ್ನು ಹಚ್ಚಬೇಕು. ಇದರಿಂದ ಕೂದಲು ನೈಸರ್ಗಿಕ ತೇವಾಂಶ ಪಡೆಯುತ್ತದೆ. ಇನ್ನು ಸಿಲ್ಕಿ ಹೇರ್ ಗಾಗಿ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆ
ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ :
ಸೂರ್ಯನ ಗಾಢವಾದ ಕಿರಣ ಬೆವರು ಬರಲು ಕಾರಣವಾಗುತ್ತದೆ. ಹೀಗೆ ಕೂದಲು ಬೆವರಿದರೆ ಕೂದಲು ಹೆಚ್ಚು ಉದುರಲು ಪ್ರಾರಂಭವಾಗುತ್ತದೆ. ಈ ಕಾರಣದಿಂದ ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ಈ ಹಿನ್ನೆಲೆಯಲ್ಲಿ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಹೇರ್ ಮಾಸ್ಕ್ ಅನ್ನು ಬಳಸಬೇಕು.
ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು :
ಮೊಟ್ಟೆ – 1
ತೆಂಗಿನೆಣ್ಣೆ – 2 ಚಮಚ
ಮೊಸರು – 2 ಚಮಚ
ಹೇರ್ ಮಾಸ್ಕ್ ತಯಾರಿಸುವ ವಿಧಾನ :
* ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
* ಅದರಲ್ಲಿ ಮೊಟ್ಟೆಯ ಹಳದಿ ಲೋಳೆ, ತೆಂಗಿನೆಣ್ಣೆ ಮತ್ತು ಮೊಸರು ಹಾಕಿ ಮಿಶ್ರಣ ಮಾಡಿ.
*ಈಗ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ.
* 30 ನಿಮಿಷಗಳ ನಂತರ ಕೂದಲನ್ನು ಶಾಂಪೂ ಸಹಾಯದಿಂದ ತೊಳೆಯಿರಿ.
ಅತಿಯಾದ ಬಿಸಿಲಿನಿಂದ ಕೂದಲು ಹಾಳಾಗಲು ಆರಂಭಿಸಿರುವುದರಿಂದ ಕೂದಲಿಗೆ ಶಾಂಪೂ ಹಾಕಿದ ನಂತರ ಕಂಡೀಷನರ್ ಹಚ್ಚುವುದು ಕೂಡಾ ಬಹಳ ಮುಖ್ಯ. ಕೂದಲಿಗೆ ಕಂಡೀಷನರ್ ಹಚ್ಚುವುದರಿಂದ ಕೂದಲು ಮೃದುವಾಗುವುದಲ್ಲದೆ ಕೂದಲಿನ ಹೊಳಪು ಕೂಡಾ ಹೆಚ್ಚುತ್ತದೆ. ಜೊತೆಗೆ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು, ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
Source: https://zeenews.india.com/kannada/health/try-these-home-remedies-to-repair-damaged-hair-136837