ಚಿತ್ರದುರ್ಗ ಜೂ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಇಂದಿನ ದಿನಮಾನದಲ್ಲಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಅಗತ್ಯ ಇದೆ ಈ ಕಾರ್ಯವನ್ನು ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಗುಡದೇಶ್ವರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಲಬಾರ್ ಚಾರಿಟೇಬಲ್ ಟ್ರಸ್ಟ್‍ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಸಿ.ಎಸ್.ಆರ್. ಘೋಷಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ಕಂಪನಿಗಳು ತಮ್ಮ ಲಾಭದಲ್ಲಿ ಶೇ.2ರಷ್ಟನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಈ ರೀತಿಯಾದ ಸಾಮಾಜಿಕ ಕಾರ್ಯವನ್ನು ಮಾಡುತ್ತಿವೆ. ಇದರಲ್ಲಿ ದುರ್ಬಲರಿಗೆ, ಆಶಕ್ತರಿಗೆ, ನಿರ್ಗತಿಕರಿಗೆ ನೆರವನ್ನು ನೀಡುವುದರ ಜೊತೆಗೆ ಪರಿಸರ ಕಾಳಜಿಯನ್ನು ವಹಿಸಿ ಸಸಿಗಳನ್ನು ನೆಡುವ ಕಾರ್ಯವನ್ನು ಮಾಡುವುದರ ಮೂಲಕ ಪರಿಸರವನ್ನು ಬೆಳಸಲಾಗುತ್ತಿದೆ. ನಮ್ ದೇಶದಲ್ಲಿ ಈಗ ಶೇ.24 ರಷ್ಟು ಯುವ ಜನಾಂಗ ಇದೆ. ಇವರು ಸಶಕ್ತರಾಗಬೇಕಿದೆ, ಕೇವಲ ಅಂಕಪಟ್ಟಿಗಳಿಗೆ ಮಾತ್ರವೇ ಸೀಮಿತವಾಗದೇ ತಮ್ಮ ಭವಿಷ್ಯದ ಕಡೆಗೆ ದೇಶದ ಕಡೆಗೆ ಆಲೋಚನೆಯನ್ನು ಮಾಡಬೇಕಿದೆ ಎಂದು ಕರೆ ನೀಡಿದರು.
ಮಾನವನಿಗೆ ಆರೋಗ್ಯ ಮತ್ತು ಉತ್ಸಾಹ ಅತಿ ಮುಖ್ಯವಾಗಿದೆ ಈ ಎರಡು ಇದ್ದಾಗ ಮಾನವ ಎನನ್ನಾದರೂ ಸಹಾ ಸಾಧನೆಯನ್ನು ಮಾಡುತ್ತಾನೆ, ದೇಶದ ಹಲವಾರು ಕಂಪನಿಗಳು ಈ ರೀತಿಯಾದ ಜನಪಯೋಗಿ ಕಾರ್ಯವನ್ನು ಮಾಡುತ್ತಿವೆ ಇದರ ಪ್ರಯೋಜನವನ್ನು ಪಡೆಯುವುದರ ಮೂಲಕ ಮುಂದೆ ನೀವುಗಳು ಇದೆ ಬೇರೆಯವರಿಗೆ ನೆರವನ್ನು ನೀಡುವಂತಾಗಬೇಕಿದೆ. ಸದೃಢವಾದ ಯುವ ಜನಾಂಗ ಮತ್ತು ಉತ್ತಮವಾಧ ಕುಟುಂಬವಾಗಬೇಕಿದೆ. ಬೇರೆಯವರಿಗೆ ಮಾದರಿಯಾಗಬೇಕಿದೆ. ನೀವುಗಳಿಸುವ ಅಂಕಪಟ್ಟಿ ಉಪಯೋಗ ಇಲ್ಲ ಇದರೊಂದಿಗೆ ಜ್ಞಾನವನ್ನು ಸಹಾ ಹೊಂದಬೇಕಿದೆ. ದೇಹವನ್ನು ಚೈತನ್ಯ ಶೀಲವಾಗಿ ಇಟ್ಟುಕೊಳ್ಳಬೇಕಿದೆ. ಏನೇ ಸಮಸ್ಯೆ ಬಂದರೂ ಸಹಾ ದೈರ್ಯಗೆಡದೇ ದೈರ್ಯದಿಂದ ಮುನ್ನಗ್ಗಬೇಕಿದೆ ಯುವ ಜನಾಂಗಕ್ಕೆ ಗುಡದೇಶ್ವರಪ್ಪ ತಿಳಿ ಹೇಳಿದರು.
ಇಂದಿನ ಯುವ ಜನಾಂಗ ತಾವು ಕಲಿತ ತಕ್ಷಣ ನಮಗೆ ಸರ್ಕಾರಿ ಉದ್ಯೋಗ ಬೇಕು ಎಂದು ದುಬಾಲು ಬೀಳುತ್ತಾರೆ ಆದರೆ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟವಾಗಿದೆ ಈ ಹಿನ್ನಲೆಯಲ್ಲಿ ನೀವೇ ಬೇರೆಯವರಿಗೆ ಉದ್ಯೋಗವನ್ನು ನೀಡುವಂತಾಗಿ, ಮಲಬಾರ್ ಚಾರಿಟೇಬಲ್ ಟ್ರಸ್ಟ್ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ ಇದರ ಸದುಪಯೋಗವನ್ನು ಮಾಡಿಕೊಳ್ಳಿ ಹಣವನ್ನು ದುರುಪಯೋಗ ಮಾಡಿಕೊಳ್ಳಬೇಡಿ, ಇದು ನಿಮ್ಮ ಬದುಕಿಗೆ ದಾರಿ ದೀಪವಾಗಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗ ನಗರಸಭೆಯ ಆಯುಕ್ತರಾದ ಶ್ರೀಮತಿ ಲಕ್ಷ್ಮೀ ಮಾತನಾಡಿ, ಮಲಬಾರ್ ಚಾರಿಟೇಬಲ್ ಟ್ರಸ್ಟ್ ತನ್ನ ಆದಾಯದಲ್ಲಿ ಶೇ. 5ರಷ್ಟನ್ನು ಈ ರೀತಿಯಾದ ಸಮಾಜಿಕ ಕಾರ್ಯಗಳಿಗೆ ಬಳಕೆ ಮಾಡುತ್ತಿದೆ, ಈ ಟ್ರಸ್ಟ್ ಮಾಡುತ್ತಿರುವ ಬಹುತೇಕ ಕೆಲಸಗಳು ನಾವು ಮಾಡುವಂತ ಕೆಲಸಗಳಾಗಿವೆ ಈ ಸಂಸ್ಥೆಯವರು ಮಾಡುವುದರ ಮೂಲಕ ನಮ್ಮ ಮೇಲಿನ ಸ್ವಲ್ಪ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಇವರು ಮಾಡುವ ಕೆಲಸಗಳು ಜನಪರವಾದ ಕೆಲಸಗಳಾಗಿವೆ, ಪ್ರತಿಭಾವಂತ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವುದರ ಂಉಲಕ ಅವರ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡುವಂತ ಕಾರ್ಯವಾಗಬೇಕಿದೆ ಇದರಿಂದ ಅವರು ಮುಂದಿನ ದಿನದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದ ಅವರು ಸಾಧ್ಯವಾದಷ್ಟು ಮೊಬೈಲ್ ನಿಂದ ದೂರ ಇರಿ ಇದರ ಬದಲು ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ನಿಮ್ಮ ಭವಿಷ್ಟಯ ನಿಮ್ಮ ಕೈಯಲ್ಲಿಯೇ ಇದೆ ಎಂದರು.
ಮಲಬಾರ್ ಚಾರಿಟೇಬಲ್ ಟ್ರಸ್ಟ್‍ನ ಹೈದರ್ ಪ್ರಸ್ತಾವಿಕವಾಗಿ ಮಾತನಾಡಿ, ಮಲಬಾರ್ ಗೋಲ್ಡ್ ಡೈಮಂಡ್ ಕಂಪನಿಯೂ 1993ರಲ್ಲಿ 5 ಆಭರಣ ಅಂಗಡಿಗಳಿಂದ ಪ್ರಾರಂಭವಾಗಿ ಈಗ 14 ದೇಶದಲ್ಲಿ 425 ಷೋರೊಂಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ 275 ಷೋರೂಂಗಳನ್ನು ತೆರದಿದೆ, 69000 ಕೋಟಿ ವಹಿವಾಟನ್ನು ಹೊಂದಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಸಂದಾಯ ಮಾಡಲಾಗುತ್ತಿದೆ. 1999ರಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್‍ನ್ನು ಪ್ರಾರಂಭ ಮಾಡಿ ತನ್ನ ಲಾಭದಲ್ಲಿ ಶೇ.5ರಷ್ಟನ್ನು ಸಮಾಜ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ವರ್ಷಕ್ಕೆ ಸುಮಾರು 200 ರಿಂದ 300 ಕೋಟಿ ರೂ.ಗಳನ್ನು ಇದಕ್ಕೆ ಬಳಕೆ ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ 2226-27ನೇ ಸಾಲಿನಲ್ಲಿ ಇದಕ್ಕೆ 200 ಕೋಟಿ ರೂ.ಗಳನ್ನು ತೆಗದಿರಿಸಲಾಗಿದೆ, ಶಿಕ್ಷಣ,ಆರೋಗ್ಯ, ಪರಿಸರ, ಬಡತನ ನಿರ್ಮೂಲನೆ, ಕುಡಿಯವ ನೀರು, ವೃದ್ದಾಶ್ರಮ, ಶಾಲೆಯನ್ನು ಬಿಟ್ಟ ಮಕ್ಕಳಿಗೆ ಶಾಲೆಯ ವಾತಾವರಣ, ಮಾನವೀಯತೆ ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣಪಾಲಯ್ಯ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಧ ರವಿಕಾಂತ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಶ್ರೀಮತಿ ತನುಜಾ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ರಾಜಣ್ಣ, ಮಲಬಾರ್ ಗೋಲ್ಡ್ ಮತ್ತಯ ಡೈಮಂಡ್ ಷೋರೂಂನ ವ್ಯವಸ್ಥಾಪಕರಾದ ರಿಜ್ವಾನ್ ಹಾಗೂ ವಿಭಿನ್ನ ವರ್ಕಿಸ್ ಭಾಗವಹಿಸಿದ್ದರು. ಸ್ನೇಹ ಪ್ರಾರ್ಥಿಸಿದರೆ ಶೋಭಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ 7 ಸರ್ಕಾರಿ ಶಾಲೆಯ 50 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: