ಸೋಂಪು ಕಾಳು ನೀರಿನಿಂದಾಗುವ ಲಾಭಗಳು: ಸೋಂಪು ತಿಂದ್ರೆ ಜೀರ್ಣಕ್ರಿಯೆ ಸಮಸ್ಯೆ ಬರಲ್ಲ. ಜೊತೆಗೆ ಅರಗಿಸಿಕೊಳ್ಳೋಕೆ ಸಹಾಯ ಆಗುತ್ತೆ. ಅದಕ್ಕೆ ಹೋಟೆಲ್ಗಳಲ್ಲಿ ಊಟ ಆದ್ಮೇಲೆ ಸೋಂಪು ಕೊಡ್ತಾರೆ. ಆದ್ರೆ ಖಾಲಿ ಹೊಟ್ಟೆಗೆ ಸೋಂಪು ನೀರು ಕುಡಿಯೋದ್ರಿಂದ ಇನ್ನೂ ಜಾಸ್ತಿ ಆರೋಗ್ಯಕ್ಕೆ ಒಳ್ಳೇದು ಅಂತ ಡಾಕ್ಟರ್ಸ್ ಹಾಗು ಆರೋಗ್ಯ ತಜ್ಞರು ಹೇಳ್ತಾರೆ. ಅದು ಏನ್ ಅಂತ ಈಗ ತಿಳ್ಕೊಳ್ಳೋಣ ಬನ್ನಿ.

ಸೋಂಪಿನಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ಪೊಟ್ಯಾಷಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸತು ಇವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಗಳು ಜಾಸ್ತಿ ಇವೆ. ಸೋಂಪು ತಂಪಾಗಿಸುವ ಗುಣ ಹೊಂದಿರೋದ್ರಿಂದ ತುಂಬಾ ಜನ ಆರೋಗ್ಯ ತಜ್ಞರು ಸೋಂಪು ನೀರನ್ನು ಖಾಲಿ ಹೊಟ್ಟೆಗೆ ಕುಡಿಯೋಕೆ ಹೇಳ್ತಾರೆ. ಅಷ್ಟೇ ಅಲ್ಲದೆ ಇದು ತುಂಬಾ ಗಂಭೀರವಾದ ಕಾಯಿಲೆಗಳಿಂದ ನಮ್ಮನ್ನ ಕಾಪಾಡುತ್ತೆ. ಸೋಂಪು ನೀರು ಕುಡಿಯೋದ್ರಿಂದ ಏನೆಲ್ಲಾ ಆರೋಗ್ಯಕ್ಕೆ ಲಾಭಗಳಿವೆ ಅಂತ ತಿಳ್ಕೊಳ್ಳೋಣ

ಜೀರ್ಣ ಸಂಬಂಧಿತ ಸಮಸ್ಯೆಗಳು: ಸೋಂಪು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತೆ. ಸೋಂಪಿನಲ್ಲಿರೋ ಅಲರ್ಜಿ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗ್ಯಾಸ್, ಹೊಟ್ಟೆ ಉಬ್ಬರಿಸೋದು, ಅಸಿಡಿಟಿ, ಅಜೀರ್ಣ, ಮಲಬದ್ಧತೆ ತರಹದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನ ಕಡಿಮೆ ಮಾಡುತ್ತೆ.
ತೂಕ ಕಡಿಮೆ ಮಾಡೋಕೆ ಸಹಾಯ ಮಾಡುತ್ತೆ: ತೂಕ ಕಡಿಮೆ ಮಾಡ್ಕೋಬೇಕು ಅಂತ ಅನ್ಕೊಂಡಿರೋರಿಗೆ ಸೋಂಪು ನೀರು ತುಂಬಾ ಸಹಾಯ ಮಾಡುತ್ತೆ. ಖಾಲಿ ಹೊಟ್ಟೆಗೆ ಈ ನೀರನ್ನು ಕುಡಿಯೋದ್ರಿಂದ ದೇಹದಲ್ಲಿರೋ ಕೆಟ್ಟ ಕೊಬ್ಬನ್ನ ಹೊರಗೆ ಹಾಕುತ್ತೆ. ದೇಹದಲ್ಲಿ ಕೊಬ್ಬು ಶೇಖರಣೆ ಆಗದ ಹಾಗೆ ನೋಡಿಕೊಳ್ಳುತ್ತೆ. ಇದು ಹಸಿವಾಗದೇ ಇರೋದು ಅಥವಾ ಜಾಸ್ತಿ ತಿನ್ನೋ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತೆ. ಇದರಿಂದ ದೇಹದ ತೂಕ ಸುಲಭವಾಗಿ ಕಡಿಮೆ ಆಗುತ್ತೆ.

ಚರ್ಮದ ಸಮಸ್ಯೆಗಳನ್ನ ಕಡಿಮೆ ಮಾಡುತ್ತೆ: ಸೋಂಪಿನಲ್ಲಿ ಕ್ಯಾಲ್ಸಿಯಂ, ಸತು, ಸೆಲೆನಿಯಂ ತರಹದ ಖನಿಜಗಳು ಇರೋದ್ರಿಂದ ಅದು ರಕ್ತ ಸಂಚಾರದಲ್ಲಿ ಆಕ್ಸಿಜನ್ ಸಮತೋಲನವನ್ನ ಕಾಪಾಡುತ್ತೆ. ಹಾರ್ಮೋನುಗಳನ್ನ ಸರಿ ಮಾಡೋಕೆ ಮುಖ್ಯ ಪಾತ್ರ ವಹಿಸುತ್ತೆ. ಇದರಿಂದ ಚರ್ಮದ ಮೇಲೆ ಒಳ್ಳೆ ಪರಿಣಾಮ ಬೀರುತ್ತೆ. ಸೋಂಪು ನೀರನ್ನ ಮುಖಕ್ಕೆ ಹಚ್ಚಿಕೊಂಡ್ರೆ ಮೊಡವೆ, ತುರಿಕೆ ತರಹದ ಸಮಸ್ಯೆಗಳು ಬರೋದಿಲ್ಲ.
ಕಣ್ಣಿಗೆ ಒಳ್ಳೇದು : ಸೋಂಪಿನಲ್ಲಿ ವಿಟಮಿನ್ ಎ ಜಾಸ್ತಿ ಇರೋದ್ರಿಂದ ಇದು ಕಣ್ಣಿನ ದೃಷ್ಟಿಯನ್ನ ಸರಿ ಮಾಡೋಕೆ ಸಹಾಯ ಮಾಡುತ್ತೆ. ಅದಕ್ಕೆ ಪ್ರತಿದಿನ ಸೋಂಪು ನೀರನ್ನ ಕುಡಿಯೋದ್ರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರ ಆಗುತ್ತೆ.

ಹಲ್ಲುಗಳು, ವಸಡುಗಳಿಗೆ ತುಂಬಾ ಒಳ್ಳೇದು: ಸೋಂಪಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರೋದ್ರಿಂದ ಇದು ಬಾಯಿಯನ್ನ ಫ್ರೆಶ್ ಆಗಿ ಇಡುತ್ತೆ. ಜೊತೆಗೆ ಇದು ಹಲ್ಲುಗಳು ಹಾಗು ವಸಡುಗಳಿಗೆ ತುಂಬಾ ಉಪಯೋಗಕಾರಿ.
ಅಧಿಕ ರಕ್ತದೊತ್ತಡವನ್ನ ಕಂಟ್ರೋಲ್ ಮಾಡುತ್ತೆ: ಸೋಂಪು ನೀರಿನಲ್ಲಿ ಪೊಟ್ಯಾಷಿಯಂ ಜಾಸ್ತಿ ಇರೋದ್ರಿಂದ ಒತ್ತಡವನ್ನ ಕಡಿಮೆ ಮಾಡೋಕೆ ಸಹಾಯ ಮಾಡುತ್ತೆ. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು ಬರೋದಿಲ್ಲ. ಸೋಂಪು ನೀರು ಕೊಲೆಸ್ಟ್ರಾಲ್ ಅಪಾಯವನ್ನು ಕೂಡ ಕಡಿಮೆ ಮಾಡುತ್ತೆ.

ಸೋಂಪು ನೀರನ್ನ ಹೇಗೆ ಮಾಡೋದು: ರಾತ್ರಿ ಸೋಂಪನ್ನ ಒಂದು ಗ್ಲಾಸ್ ನೀರಲ್ಲಿ ನೆನೆಸಿಡಿ. ಆಮೇಲೆ ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನ ಖಾಲಿ ಹೊಟ್ಟೆಗೆ ಕುಡಿಬೇಕು. ಬೇಕಿದ್ರೆ ಸೋಂಪನ್ನ ಕೂಡ ತಿನ್ನಬಹುದು. ಇನ್ನೊಂದು ದಾರಿ ಏನಪ್ಪಾ ಅಂದ್ರೆ ಸೋಂಪನ್ನ ಹುರಿದು ನೀರಲ್ಲಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬಹುದು. ಸೋಂಪನ್ನ ಟೀ ತರಹ ಕೂಡ ಕುಡಿದ್ರೆ ನೆಗಡಿ, ಕೆಮ್ಮು ಸಮಸ್ಯೆ ವಾಸಿ ಆಗುತ್ತೆ.
ಯಾರು ಸೋಂಪು ನೀರು ಕುಡಿಯಬಾರದು: ಸೋಂಪಿನಲ್ಲಿರೋ ಎಣ್ಣೆ ತುಂಬಾ ಜನರಿಗೆ ಅಲರ್ಜಿ ಸಮಸ್ಯೆಗಳನ್ನ ಉಂಟುಮಾಡುತ್ತೆ. ಅಂಥವರು ಸೋಂಪು ನೀರು ಕುಡಿಯಬಾರದು. ಗರ್ಭಿಣಿಯರು, ಬಾಣಂತಿಯರು ಸೋಂಪು ನೀರು ಕುಡಿಯಬಾರದು. ಯಾವುದಾದರೂ ಕಾಯಿಲೆ ಕಡಿಮೆ ಆಗೋಕೆ ಮೆಡಿಸಿನ್ ತಗೊಂತಾ ಇರೋರು ಡಾಕ್ಟರ್ ಸಲಹೆ ಇಲ್ಲದೆ ಸೋಂಪು ನೀರು ಕುಡಿಯಬಾರದು.