ಚಿತ್ರದುರ್ಗ| ದಲಿತ ಸಂಘಟನೆಗಳ ಆಶ್ರಯದಲ್ಲಿ ಏ.18ರಂದು ವಿಚಾರಗೋಷ್ಠಿ: ಅಂಬೇಡ್ಕರ್ ಚಿಂತನೆಗಳ ಚರ್ಚೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 17

ಅಂಬೇಡ್ಕರ್ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ರಾಜ್ಯ ಮಾದಿಗ ಯುವಸೇನೆ, ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಏ.18ರಂದು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಬಿ.ರಾಜಪ್ಪ ತಿಳಿಸಿದ್ದಾರೆ.

ಅಂದು ಪತ್ರಿಕಾ ಭವನದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮದ ಆಯೋಜಿಸಿದ್ದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತುರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ತಿಪ್ಪೇಸ್ವಾಮಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಚಿಂತಕ ಡಾ.ಎಂ.ವೇದಾಂತ್ ಎಳಂಜಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶಬಾಬು, ಸಾಹಿತಿ ಶ್ರೀನಿವಾಸರಾಜು, ಉಪನ್ಯಾಸಕ ಹನುಮಂತಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ, ಮುಖಂಡರಾದ ಎಂ.ಶಿವಮೂರ್ತಿ, ಎಚ್.ಮಹಾಂತೇಶ್, ರುದ್ರಯ್ಯ, ಕೆ.ರಾಜಣ್ಣ, ಪ್ರಸನ್ನ, ಎನ್.ಹರೀಶ್, ಡಿ.ವೆಂಕಟೇಶ್, ಹನುಮಂತಪ್ಪ, ಬಿ.ಒ.ಗಂಗಾಧರಯ್ಯ, ಟಿ.ಆರ್.ತಿಪ್ಪೇಸ್ವಾಮಿ, ಎಂ.ಮಲ್ಲಿಕಾರ್ಜುನ, ಬಿ.ಹನುಮಂತಪ್ಪ, ಮಲ್ಲಪ್ಪ, ಟಿ.ಕೆಂಚಪ್ಪ, ಕೆ.ರುದ್ರಮುನಿ, ಚೌಡಪ್ಪ, ಮಹಾಲಿಂಗಪ್ಪ, ಮಂಜುನಾಥ್ ತಿಮ್ಮಪ್ಪಯ್ಯನಹಳ್ಳಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *