ಚಿತ್ರದುರ್ಗ:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮನುಷ್ಯ ಜೀವತಾಳಿ, ಜೀವಿಸಿ ಮರಣ ಹೊಂದುವುದರ ನಡುವೆ ಏನಾದರೂ ಸಾಧನೆ ಮಾಡಬೇಕು. ಆಗ ಮಾತ್ರ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರ ಅಮೃತ ಮಹೋತ್ಸವ ಅಂಗವಾಗಿ 75 ಸಾಧಕರಿಗೆ ತ.ರಾ.ಸು.ರಂಗ ಮಂದಿರದಲ್ಲಿ ಬಿ.ಕಾಂತರಾಜ್ ಮತ್ತು ತಂಡದವರು ಹಮ್ಮಿಕೊಂಡಿದ್ದ ಶಿವ ಸಂಚಾರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು.ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಸವಾದಿ ಶರಣರ ತತ್ವಾದರ್ಶಗಳನ್ನು ಚಾಚು ತಪ್ಪದೆ ಪಾಲನೆ ಮಾಡುತ್ತಿದ್ದಾರೆ. ಶಿವ ಸಂಚಾರ ನಾಟಕದ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವಾಗುತ್ತಿದೆ. ಮದ್ಯಪಾನದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ನಿಜ. ಆದರೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೆÉೀಧಿಸಿದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಬಹುದು. ನಾನು ಚಳ್ಳಕೆರೆ ಶಾಸಕನಾದಾಗಿನಿಂದಲೂ ಯಾವುದೇ ಹೊಸ ಮದ್ಯದಂಗಡಿಗಳಿಗೆ ಅನುಮತಿ ಕೊಟ್ಟಿಲ್ಲ. ಮದ್ಯ ಸೇವನೆಯಿಂದ ಅಪರಾಧಗಳು ಹೆಚ್ಚುತ್ತದೆ. 75 ಸಾಧಕರುಗಳನ್ನು ಗುರುತಿಸಿ ಶಿವ ಸಂಚಾರ ಪುರಸ್ಕಾರ ನೀಡುತ್ತಿರುವುದು ವಿಶೇಷ. ಇದು ಸಾಧಕರುಗಳಿಗೆ ಪ್ರೇರಣೆ. ಜಿಲ್ಲೆಯ ಅಭಿವೃದ್ದಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ ಮೂಢ ನಂಬಿಕೆಯಿಂದ ನಲುಗುತ್ತಿರುವವರ
ಸುಧಾರಣೆಗೆ ಶ್ರಮಿಸಿದ ಹನ್ನೆರಡನೆ ಶತಮಾನದ ಬಸವಣ್ಣನವರ ಬಗ್ಗೆ ಇಲ್ಲ ಸಲ್ಲದ ಅಪ
ಪ್ರಚಾರವಾಗುತ್ತಿದೆ. ಸಮಾಜ ದ್ರೋಹ ಕೆಲಸಕ್ಕೆ ಕೈಹಾಕಿರುವ ಅಜ್ಞಾನಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. 21 ನೇ ಶತಮಾನದಲ್ಲಿ ಇನ್ನು ಬಸವ ತತ್ವ ಉಳಿದಿದೆ ಎನ್ನುವುದಾದರೆ ಅದಕ್ಕೆ ಅನೇಕ ಮಠಾಧೀಶರುಗಳು ಕಾರಣ. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೀನ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆಂದು ಗುಣಗಾನ ಮಾಡಿ ಹೊಸದುರ್ಗ ತಾಲ್ಲೂಕಿನಲ್ಲಿ 33 ಕೆರೆಗಳು ತುಂಬಿ ತುಳುತ್ತಿರುವುದರ ಹಿಂದೆ ಪಂಡಿತಾರಾಧ್ಯರ ಕಾಳಜಿಯಿದೆ. 75 ಸಾಧಕರುಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕಾರ್ಯಕ್ರಮ ಎಂದು ಪ್ರಶಂಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕರಾದ ಬಿ.ಕಾಂತರಾಜ್ ಮಾತನಾಡಿ
ನಾವು ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡು ನಾವೆಲ್ಲರೂ ಬದುಕಬೇಕಿದೆ. ಸಮಾಜದಲ್ಲಿ ಜಾತಿ ಪಿಡುಗು ತೊಡಗಬೇಕು ಎಂದರೆ ಪರಸ್ಪರ ಸಮಾಜಗಳನ್ನು ಗೌರವಿಸುವ ಮೂಲಕ ಜಾತಿ ನಿರ್ಮೂಲನೆ ಮಾಡಬೇಕಿದೆ. ಜಿಲ್ಲೆಯಲ್ಲಿ ಜಾತಿಯನ್ನು ಜಾತಿಯನ್ನು ದಾಟಿರುವ ಗುರುಗಳು ಶ್ರೀ ಸಾಣೇಹಳ್ಳಿ ಶ್ರೀಗಳು ಎಂದರೆ ತಪ್ಪಾಗಲಾರದು. ಜಾತಿಗೆ ಸಿಮೀತವಾಗದಂತೆ ಎಲ್ಲಾ ಜಯಂತಿಗಳು ಜಾತ್ಯತೀತವಾಗಿ ಆಗಬೇಕಿದೆ. ಬಸವಾದಿ ಶರಣದ ತತ್ವಗಳನ್ನು ಜನರಲ್ಲಿ ತಲುಪಿಸುವಲ್ಲಿ ನಮ್ಮ ಸಾಣೇಹಳ್ಳಿ ಶ್ರೀಗಳು ಮೊದಲಿಗರಾಗಿದ್ದಾರೆ ಎಂದರು. ಮುಂದಿನ ದಿನದಲ್ಲಿ ಇಂತಹ ಸಾಧಕರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಮಧ್ಯ ಕರ್ನಾಟಕದ ಬಯಲು ಸೀಮೆ
ಚಿತ್ರದುರ್ಗ ಜಿಲ್ಲೆಗೆ ಬಡತನವಿರಬಹುದು. ಆದರೆ ಕಲೆ ಸಾಹಿತ್ಯ ಸಂಸ್ಕøತಿಯಲ್ಲಿ ಅತ್ಯಂತ
ಶ್ರೀಮಂತಿಕೆಯಿದೆ. ಶಿವ ಸಂಚಾರ ನಾಟಕದ ಮೂಲಕ ಸಮಾಜಕ್ಕೆ ದಿಕ್ಸೂಚಿ ಕೊಟ್ಟವರು
ಪಂಡಿತಾರಾಧ್ಯರು. ರಾಜ್ಯ ಸರ್ಕಾರ ಮದ್ಯಪಾನ ನಿಷೆÉೀಧಿಸುವುದಾದರೆ ನಮ್ಮ ಸಂಪೂರ್ಣ
ಬೆಂಬಲವಿದೆ. ನಾವುಗಳೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿರಬಹುದು. ಆರೋಗ್ಯ ಪೂರ್ಣ ಕೆಲಸಕ್ಕೆ
ಸಹಕಾರವಿದೆ. ಸಾಣೆಹಳ್ಳಿ ಮೂಲಕ ಜಿಲ್ಲೆಗೆ ಭದ್ರಾ ನೀರು ಪಾದಾರ್ಪಣೆ ಮಾಡಿರುವುದು ಹೆಗ್ಗಳಿಕೆ.
ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುವ ಬಸವಣ್ಣನವರ ಆಶಯಗಳಂತೆ ಶ್ರೀಗಳು
ಬದುಕುತ್ತಿದ್ದಾರೆಂದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶಿವ ಸಂಚಾರ ಪುರಸ್ಕøತರು ಸಮಾರಂಭದ ಸಾನಿಧ್ಯ
ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಮಾಜಿ ಶಾಸಕಿ ಆರ್.ಪೂರ್ಣಿಮ ಶ್ರೀನಿವಾಸ್,
ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್,
ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಶಂಕರಮೂರ್ತಿ, ಮದಕರಿನಾಯಕ
ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ವಿ.ಎಲ್.ಪ್ರಶಾಂತ್, ನಗರಸಭೆ ಮಾಜಿ ಅಧ್ಯಕ್ಷ
ಬಿ.ಕಾಂತರಾಜ್, ಉದ್ಯಮಿ ಅರುಣ್, ಅಹೋಬಲಪತಿ, ದರ್ಶನ್ ಇಂಗಳದಾಳ್ ಇವರುಗಳು
ವೇದಿಕೆಯಲ್ಲಿದ್ದರು. ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು