ಚಿತ್ರದುರ್ಗ ಆ. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದಲ್ಲಿ ಶ್ರಾವಣ ಮಂಗಳವಾರವಾದ ಇಂದು ಹೆಣ್ಣು ದೇವತೆಗಳಿಗೆ ವಿವಿಧ ರೀತಿಯ ಅಲಂಕಾರವನ್ನು ಮಾಡುವುದರ ಮೂಲಕ ಭಕ್ತಾಧಿಗಳಿಗೆ ತಮ್ಮ ದೇವಿಯನ್ನು ಆರಾಧನೆ ಮಾಡಲು ಅನುವು ಮಾಡಿಕೊಡಲಾಗಿದೆ.
ಚಿತ್ರದುರ್ಗ ನಗರದ ಗ್ರಾಮ ದೇವತೆಗಳಲ್ಲಿ ಅಕ್ಕ ಎನ್ನಿಸಿಕೊಂಡು ಬೆಟ್ಟದೆ ಮೇಲೆ ವಾಸವಾಗಿರು ಏಕನಾಥೇಶ್ವರಿ ಅಮ್ಮನವರಿಗೆ ಶ್ರಾವಣ ಮಂಗಳವಾರದ ದಿನವಾದ ಇಂದು ವಿವಿಧ ರೀತಿಯ ಹಣ್ಣು ಹಾಗೂ ಹೊಗಳಿಂದ ಅಲಂಕಾರವನ್ನು ಮಾಡಲಾಗಿತ್ತು,
ಅಮ್ಮನವರ ಆಲಂಕಾರಕ್ಕೆ ಸೇಬು, ಮೊಸುಂಬೆ, ಕಿತ್ತಳೆ, ಸೀಬೇಹಣ್ಣು, ಧಾಳುಂಬೆ ಹಣ್ಣುಗಳಿಂದ ಆಲಂಕಾರವನ್ನು ಮಾಡಲಾಗಿತ್ತು, ಮತ್ತೋರ್ವ ಗ್ರಾಮ ದೇವತೆಯಾದ ಉಚ್ಚಂಗಿಯಲ್ಲಮ್ಮ ದೇವಿಗೆ ಶ್ರಾವಣ ಮಂಗಳವಾರವಾದ ಇಂದು ವಿವಿಧ ತರಕಾರಿಗಳಿಂದ ಅಮ್ಮವನವರನ್ನು ಆಲಂಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಉರಳಿಕಾಯಿ, ಬೆಂಡೆ ಕಾಯಿ, ಟಮೋಟೋ, ಆಲೂಗಡ್ಡೆ, ಡೊಣ ಮೆಣಸಿನಕಾಯಿ, ವಾಂಗೀಬಾತ್ ಬದನೆಕಾಯಿ, ಈರುಳ್ಳಿ, ಹಾಗಲ ಕಾಯಿ,ಸವತೇಕಾಯಿ,ಮೆಣಸಿನಕಾಯಿ,ಶುಂಠಿ, ಕ್ಯಾರೆಟ್, ಗೆಡ್ಡೆ ಕೋಸು,ಸೀಮೆಬದನೆಕಾಯಿ, ಹಿರೇಕಾಯಿ, ಬಿಟ್ ರೂಟ್, ನುಗ್ಗೆಕಾಯಿ, ಸೊರೆಕಾಯಿ, ಎಲೆಕೋಸು, ಮೊಲಂಗಿ, ನಿಂಬೆಹಣ್ಣು, ಸಿಹಿ ಕುಂಬಳಕಾಯಿ ಸೇರಿದಂತೆ ಕೋತ್ತಂಬರಿ ಸೋಪ್ಪನ್ನು ಹಾಗೂ ವಿವಿಧ ರೀತಿಯ ಹೊಗಳನ್ನು ಅಮ್ಮನವರ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ.
ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಬರಗೇರಮ್ಮ ದೇವಾಲಯದಲ್ಲಿ ಶ್ರಾವಣ ಮಂಗಳವಾರವಾದ ಇಂದು ಅಮ್ಮನವರಿಗೆ ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಲಾಗಿತ್ತು ಈ ಸಮಯದಲ್ಲಿ ಅಮ್ಮನ ವರಿಗೆ ಕಾಕಡ, ಕನಕಾಂಬರಿ,ಸಾವಂತಿಕೆ, ಬಿಳಿ ನೀಲಿ ಗೊರಟೆ, ಹೊಂಬಾಳೆ, ಕಣಗಲೆ ಹೂ, ಸಂಪಿಗೆ, ಕೆಂಪು ಹಳದಿ ಗುಲಾಬಿ ಹೊಗಳಿಂದ ಅಲಂಕಾರವನ್ನು ಮಾಡಲಾಗಿತ್ತು.
ಈ ಮೂರು ಅಮ್ಮನವರಿಗೆ ಮುಖ ಪದ್ಮವನ್ನು ಇರಿಸಿ ಕೈ ಕಾಲುಗಳನ್ನು ಜೋಡಿಸಿ ವಿವಿಧ ರೀತಿಯ ಆಭರಣಗಳನ್ನು ತೂಡಿಸಿ, ಕಾಲಿಗೆ ಗೆಜ್ಜೆಯನ್ನು ಹಾಕಿ ಬಂಗಾರದ ಕಿರೀಟವನ್ನು ಹಾಕಿ ಸಿಂಗಾರವನ್ನು ಮಾಡಲಾಗಿತ್ತು ಇಂದು ಬೆಳ್ಳಗ್ಗೆಯಿಂದ ರಾತ್ರಿಯವರೆಗೂ ಸಹಾ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿ ಅಮ್ಮನವರ ದರ್ಶನವನ್ನು ಪಡೆದು ಆರ್ಶಿವಾದವನ್ನು ಬೇಡಿದರು. ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಪ್ರಸಾದವನ್ನು ನೀಡಲಾಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j