High BP & Diabetesಗೆ ಕೆಲವು ಹಣ್ಣು, ಈ ಪದಾರ್ಥಗಳು ಅತ್ಯುತ್ತಮವಂತೆ: ತಜ್ಞರ ಸಲಹೆಗಳಿವು!

ಹೈಬಿಪಿ, ಮಧುಮೇಹ ಕಾಯಿಲೆಗಳನ್ನು ಸಾಧ್ಯವಾದಷ್ಟು ನಿಯಂತ್ರಿಸುವ ಪ್ರಮುಖವಾದ ಮಾರ್ಗವೆಂದರೆ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸುವುದು. ಆರೋಗ್ಯ ತಜ್ಞರು ತಿಳಿಸುವಂತಹ ಕೆಲವು ಹಣ್ಣುಗಳು, ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ.

Best Foods for BP And Diabetes: ಹೈಬಿಪಿ ಮತ್ತು ಮಧುಮೇಹ ಕಾಯಿಲೆ ಹಲವು ಜನರಿಗೆ ಕಾಡುತ್ತಿದೆ. ಇವೆರಡು ದೀರ್ಘಕಾಲದ ಕಾಯಿಲೆಗಳಾಗಿವೆ. ಒಮ್ಮೆ ಈ ರೋಗಗಳು ಬಂದರೆ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಇವುಗಳೊಂದಿಗೆ ಇನ್ನೂ ಅನೇಕ ಆರೋಗ್ಯದ ಸಮಸ್ಯೆಗಳು ಕೂಡ ಉದ್ಭವಿಸುತ್ತವೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಆರೋಗ್ಯಕರ ಜೀವನ ನಡೆಸಲು ಕಷ್ಟವಾಗುತ್ತದೆ. ಈ ಸಮಸ್ಯೆಗಳನ್ನು ನಂತರ ಎದುರಿಸುವುದಕ್ಕಿಂತ ಈ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಪ್ರಮುಖವಾಗುತ್ತದೆ.

ನಮ್ಮ ಕೆಲಸದ ಒತ್ತಡದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಸೇರಿದಂತೆ ಆನುವಂಶಿಕ ಕಾರಣಕ್ಕಾಗಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ (ಹೈಬಿಪಿ) ಕಾಯಿಲೆ ಕೆಲವು ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತದೆ. ಇವುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸುವ ಏಕೈಕ ಮಾರ್ಗ ಎಂದರೆ ತುಂಬಾ ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸುವುದು. ಹೌದು, ಆರೋಗ್ಯಕರ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವು ಮನೆ ಮದ್ದು ಹಾಗೂ ನೈಸರ್ಗಿಕ ವಿಧಾನಗಳೊಂದಿಗೆ ಹೈಬಿಪಿ ಮತ್ತು ಶುಗರ್​ ಅನ್ನು ನಿಯಂತ್ರಣದಲ್ಲಿ ಇಡಬಹುದು. ನಿತ್ಯ ಕೆಲವು ಹಣ್ಣುಗಳು ಮತ್ತು ಪದಾರ್ಥಗಳನ್ನು ಸೇವಿಸುವುದರಿಂದ ಇದು ಸಾಧ್ಯವಾಗುತ್ತದೆ.

ಮೆಂತ್ಯ ಬೀಜ: ಮಧುಮೇಹ ನಿಯಂತ್ರಣಕ್ಕೆ ಮೆಂತ್ಯ ಉತ್ತಮ ಮನೆ ಮದ್ದು ಆಗಿದೆ. ಬಹುತೇಕ ಮಧುಮೇಹ ರೋಗಿಗಳು ಬೆಳಗ್ಗೆ ಮೆಂತ್ಯ ಸೇವಿಸುತ್ತಾರೆ. ಮತ್ತೆ ಕೆಲವರು ಮೆಂತ್ಯ ನೆನೆಸಿದ ನೀರನ್ನು ಸಹ ಸೇವನೆ ಮಾಡುತ್ತಾರೆ. ಮೆಂತ್ಯ ಕಾಳಿನಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಶುಗರ್​ ಲೆವಲ್​ ಸ್ಥಿರವಾಗಿರಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಟೀಸ್ಪೂನ್​ ಮೆಂತ್ಯ ಬೀಜಗಳನ್ನು ತಿನ್ನುವುದು ಒಳ್ಳೆಯದು. ಜೊತೆಗೆ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಮೆಂತ್ಯ ಬೀಜಗಳನ್ನು ಸೇವಿಸಬೇಕು, ಬಳಿಕ ನೆನೆಸಿದ ನೀರು ಕುಡಿಯಬೇಕು. ಇದು ಬಿಪಿ ಕಡಿಮೆ ಮಾಡುತ್ತದೆ ಹಾಗೂ ಆತಂಕ ನಿವಾರಿಸಲು ಸಹಕಾರಿಯಾಗಿದೆ.

ಅರಿಶಿನದ ನೀರು: ಅರಿಶಿನದಲ್ಲಿ ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿದೆ. ರಕ್ತದಲ್ಲಿನ ಶುಗರ್​​ ಕಡಿಮೆ ಮಾಡುವಲ್ಲಿ ಅರಿಶಿನವು ಮೆಂತ್ಯದ ನಂತರ ಸ್ಥಾನದಲ್ಲಿ ಬರುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ಶುಗರ್​ ಮಟ್ಟ ಏರಿಕೆಯಾಗದರೆ, ಅದನ್ನು ತಡೆಯುತ್ತದೆ. ಆದರೆ, ನೀವು ಅರಿಶಿನ ಮಿಶ್ರಿತ ನಿಂಬೆ ರಸದೊಂದಿಗೆ ಸೇವಿಸಿದರೆ, ಉತ್ತಮ ಪ್ರಯೋಜನಗಳನ್ನು ಲಭಿಸುತ್ತದೆ. ಜೀರ್ಣಕ್ರಿಯೆ ಪ್ರಕ್ರಿಯೆಯು ಸುಧಾರಿಸುತ್ತದೆ ಹಾಗೂ ಯಕೃತ್ತು ನಿರ್ವಿಷಗೊಳಿಸುತ್ತದೆ. ನಿಯಮಿತವಾಗಿ ಅರಿಶಿನ ಮಿಶ್ರಿತ ನಿಂಬೆ ರಸವನ್ನು ಕುಡಿಯುವುದರಿಂದ ಉರಿಯೂತ ಕಡಿಮೆಯಾಗುತ್ತದೆ.

ಅಗಸೆ ಬೀಜ: ಅಗಸೆ ಬೀಜಗಳು ರಕ್ತದೊತ್ತಡ ಮತ್ತು ಶುಗರ್​ ಏರಿಕೆಯಾದಂತೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿರುವ ಒಮೆಗಾ- 3 ಕೊಬ್ಬಿನಾಮ್ಲಗಳು, ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳು ದೇಹದ ಆರೋಗ್ಯಕ್ಕೆ ಪ್ರಯೋಜನಗಳು ನೀಡುತ್ತವೆ. ಅಗಸೆಯಲ್ಲಿ ಫೈಬರ್ ಅಧಿಕವಾಗಿರುವುದರಿಂದ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಪ್ರತಿದಿನ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೈಬಿಪಿ ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ನೆಲ್ಲಿಕಾಯಿ: ನಿಯಮಿತವಾಗಿ ನೆಲ್ಲಿಕಾಯಿ ತಿನ್ನುವುದು ತುಂಬಾ ಆರೋಗ್ಯಕರವಾಗಿದೆ. ಇದರಲ್ಲಿ ಹಲವು ಪೋಷಕಾಂಶಗಳಿವೆ. ಶುಗರ್​ ಮಾತ್ರವಲ್ಲ, ಆಮ್ಲಾ ಬಿಪಿಗೆ ಹೆಚ್ಚು ಪರಿಣಾಮಕಾರಿಯಾಗಿದೆ. ವಿಟಮಿನ್ ಸಿ ಜೊತೆಗೆ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಡೆಯುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯಕ್ಕೆ ಹೆಚ್ಚು ಪೂರಕವಾಗಿದೆ. ನಿಯಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಹೊಟ್ಟೆಯಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಹೆಚ್ಚಳವಾಗುವುದನ್ನು ತಡೆಯುತ್ತದೆ. ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ದಾಲ್ಚಿನ್ನಿ: ದಾಲ್ಚಿನ್ನಿಯು ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿ ನಿಯಮಿತವಾಗಿ ಸೇವಿಸುವುದರಿಂದ ಇನ್ಸುಲಿನ್ ಸಂವೇದನೆ ಹೆಚ್ಚಾಗಿಸಲು ಸಾಧ್ಯವಾಗುತ್ತದೆ. ದಾಲ್ಚಿನ್ನಿ ಜೊತೆಗೆ ಮೆಣಸು ಸೇರಿಸಿ ಸೇವನೆ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಇದರಲ್ಲಿರುವ ಪೈಪರಿನ್ ಅಂಶವು ದೇಹಕ್ಕೆ ಪೋಷಕಾಂಶಗಳನ್ನು ಸಮಾನ ಪ್ರಮಾಣದಲ್ಲಿ ಪೂರೈಕೆ ಮಾಡುತ್ತದೆ. ಬೆಳಗ್ಗೆ ಒಂದು ಲೋಟ ನೀರಿನಲ್ಲಿ ದಾಲ್ಚಿನ್ನಿ ಮತ್ತು ಕರಿಮೆಣಸಿನ ಪುಡಿಯೊಂದಿಗೆ ಬೆರೆಸಿ ಕುಡಿಯುವುದರಿಂದ ರಕ್ತದೊತ್ತಡದ ಮಟ್ಟ ನಿಯಂತ್ರಿಸಬಹುದು. ಈ ಇವೆರಡೂ ಪದಾರ್ಥಗಳು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುವಲ್ಲಿ ಹಾಗೂ ಉರಿಯೂತ ಕಡಿಮೆ ಮಾಡಲು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಟೊಮೆಟೊ & ದಾಳಿಂಬೆ ಬೆಸ್ಟ್: ಟೊಮೆಟೊ ಹಾಗೂ ದಾಳಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರವಾಗಿವೆ. ಇವುಗಳೊಂದಿಗೆ ಖನಿಜಗಳು ಮತ್ತು ಜೀವಸತ್ವಗಳು ಕೂಡ ಸಮೃದ್ಧವಾಗಿವೆ. ಮತ್ತು ಟೊಮೆಟೊದಲ್ಲಿರುವ ಆ್ಯಂಟಿ- ಆಕ್ಸಿಡೆಂಟ್ ಲೈಕೋಪೀನ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ತರುವ ಕೆಲಸ ಮಾಡುತ್ತದೆ. ದಾಳಿಂಬೆ ರಸವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಉರಿಯೂತ ಕಡಿಮೆ ಮಾಡುತ್ತದೆ. ಬೆಳಿಗ್ಗೆ ದಾಳಿಂಬೆ ರಸ ಇಲ್ಲವೇ ಟೊಮೆಟೊ ರಸವನ್ನು ಮೊದಲು ಕುಡಿಯುವುದರಿಂದ ರಕ್ತದಲ್ಲಿನ ಶುಗರ್​ ಲೆವಲ್​ ಅನ್ನು ಹೆಚ್ಚಾವುದನ್ನು ತಡೆಯುತ್ತದೆ. ಹೃದಯ ಕಾಯಿಲೆಯ ಅಪಾಯವನ್ನೂ ಕಡಿಮೆಯಾಗುತ್ತದೆ.

ಯಾವ ಆಹಾರಗಳು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?: ಪೌಷ್ಟಿಕ ಆಹಾರ ತಜ್ಞೆ ಡಾ.ರೇಣುಕಾ ಮೈಂದೆ ಅವರು ಪ್ರತಿಕ್ರಿಯಿಸಿ, ಕೆಲವು ಹಣ್ಣುಗಳು ಹಾಗೂ ಮಸಾಲೆ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಜೈವಿಕವಾಗಿ ಸಕ್ರಿಯ ಸಂಯುಕ್ತಗಳನ್ನು ಹೊಂದಿವೆ.

  • ಮೆಂತ್ಯ ಬೀಜಗಳಲ್ಲಿ ಕರಗುವ ಫೈಬರ್ ಮತ್ತು 4 ಹೈಡ್ರಾಕ್ಸಿಸೊಲ್ಯೂಸಿನ್‌ ಸಮೃದ್ಧವಾಗಿದ್ದು, ಇವು ಇನ್ಸುಲಿನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. 1 ಟೀಸ್ಪೂನ್ ಮೆಂತ್ಯ ಬೀಜ ಅಥವಾ ಪುಡಿಯನ್ನು ರಾತ್ರಿಯಿಡೀ ನೆನೆಸಿ ಸೇವಿಸಬಹುದು.
  • ಅರಿಶಿನ ನೀರಿನಲ್ಲಿ ಕರ್ಕ್ಯುಮಿನ್ ಉರಿಯೂತ ನಿವಾರಕ ಹಾಗೂ ಇನ್ಸುಲಿನ್ ಸಂವೇದನಾಶೀಲ ಗುಣಗಳನ್ನು ಹೊಂದಿದೆ. ಪ್ರತಿದಿನ ಬೆಚ್ಚಗಿನ ನೀರಿನಲ್ಲಿ ಕಾಲು ಟೀಸ್ಪೂನ್ ಅರಿಶಿನ, ಒಂದು ಚಿಟಿಕೆ ಕರಿಮೆಣಸಿನೊಂದಿಗೆ ಸೇವಿಸಬಹುದು.
  • ಅಗಸೆ ಬೀಜಗಳಲ್ಲಿ ಒಮೆಗಾ- 3 ಮತ್ತು ಲಿಗ್ನಾನ್‌ಗಳು ಅಧಿಕವಾಗಿವೆ. ಇವು ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಗ್ಲೂಕೋಸ್ ಚಯಾಪಚಯ ಸುಧಾರಿಸುತ್ತದೆ. ಪ್ರತಿದಿನ 1 ರಿಂದ 2 ಟೀಸ್ಪೂನ್ ಅಗಸೆಬೀಜಗಳನ್ನು ಸೇವಿಸಬಹುದು.
  • ಆಮ್ಲಾದಲ್ಲಿ ವಿಟಮಿನ್ ಸಿ ಮತ್ತು ಪಾಲಿಫಿನಾಲ್‌ಗಳು ಅಧಿಕವಾಗಿದ್ದು, ಇದು ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ. ಪ್ರತಿದಿನ 1 ತಾಜಾ ಆಮ್ಲಾ ಅಥವಾ 1 ಟೀಸ್ಪೂನ್ ಆಮ್ಲಾ ರಸ/ಪುಡಿ ಸೇವನೆ ಮಾಡಬಹುದು.
  • ದಾಲ್ಚಿನ್ನಿಯು ಸಿನ್ನಮಾಲ್ಡಿಹೈಡ್ ಅನ್ನು ಹೊಂದಿರುತ್ತದೆ. ಇದು ಇನ್ಸುಲಿನ್ ಕಾರ್ಯ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಅರ್ಧ ಟೀಸ್ಪೂನ್ ಪುಡಿಮಾಡಿದ ದಾಲ್ಚಿನ್ನಿ ಸೇವನೆ ಮಾಡಬಹುದು.
  • ಟೊಮೆಟೊದಲ್ಲಿ ಪೊಟ್ಯಾಸಿಯಮ್ ಹಾಗೂ ಲೈಕೋಪೀನ್‌ ಸಮೃದ್ಧವಾಗಿದ್ದು, ಇವು ಹೃದಯದ ಆರೋಗ್ಯ ಸಹಕಾರಿಯಾಗಿದೆ. ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಪ್ರತಿದಿನ 1 ರಿಂದ 2 ಹಸಿ ಟೊಮೆಟೊ ತಿನ್ನಬಹುದು.
  • ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಿರುವುದರಿಂದ ಇದು ಎಂಡೋಥೀಲಿಯಲ್ ಕಾರ್ಯವನ್ನು ಸುಧಾರಿಸುತ್ತದೆ. ಗ್ಲೂಕೋಸ್ ಸ್ಪೈಕ್‌ಗಳನ್ನು ಕಡಿಮೆ ಮಾಡುತ್ತದೆ. ಅರ್ಧ ಇಲ್ಲವೇ 1 ಕಪ್ ತಾಜಾ ದಾಳಿಂಬೆ ಬೀಜಗಳು ಅಥವಾ ಜ್ಯೂಸ್​ ಅನ್ನು ಸಕ್ಕರೆ ಸೇರಿಸದೆ ಸೇವನೆ ಮಾಡಬಹುದು.

ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದ್ರೆ, ವೈಯಕ್ತಿಕ ಡಯಟ್​ಗಾಗಿ​ ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಆಹಾರ ತಜ್ಞರು ಅಥವಾ ಪೌಷ್ಟಿಕ ತಜ್ಞರ ಮಾರ್ಗಸೂಚಿಗಳ ಪ್ರಕಾರ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ.

ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *