SRH vs RCB, IPL 2024: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್​​ಸಿಬಿ

IPL 2024, RCB vs SRH: ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಗೆಲುವಿನ ನಗೆಬೀರಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಕಾಣುವ ಮೂಲಕ ಆರ್​​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

Sunrisers Hyderabad vs Royal Challengers Bengaluru : ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡಿ ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಂಡಿಯೂರುವಂತೆ ಮಾಡಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ನೀಡಿ ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಂಡಿಯೂರುವಂತೆ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 206 ರನ್ ಗಳಿಸಿತು. ಉತ್ತರವಾಗಿ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್​ನ ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡವು 171 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಸೋಲಿಗೆ ತಂಡದ ಅಗ್ರಕ್ರಮಾಂಕದ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಸ್ಫೋಟಕ ಆರಂಭಿಕ ಟ್ರಾವಿಸ್ ಹೆಡ್ ಕೇವಲ 1 ರನ್ ಗಳಿಸಿ ಔಟಾದರೆ, ಏಡೆನ್ ಮಾರ್ಕ್ರಾಮ್ 7 ರನ್‌ಗಳ ಇನಿಂಗ್ಸ್ ಆಡಿದರು. ಹೆನ್ರಿಕ್ ಕ್ಲಾಸೆನ್ ಕೂಡ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾದರು. ಅಭಿಷೇಕ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಲಾ 31 ಮತ್ತು ಶಹಬಾಜ್ ಅಹ್ಮದ್ ಔಟಾಗದೆ 40 ರನ್ ಗಳಿಸುವ ಮೂಲಕ ಗೆಲುವಿಗಾಗಿ ಹೋರಾಟ ನೀಡಿದರು. ಅದಾಗ್ಯೂ ಬೆಂಗಳೂರು ಪಂದ್ಯವನ್ನು 35 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಹಿಂದಿನ ಪಂದ್ಯದ ಸೋಲಿಗೆ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.

ಐಪಿಎಲ್‌ನ 41ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್​ ಡುಪ್ಲೇಸಿಸ್​​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಈ ಮೂಲಕ ರಜತ್​ ಪಾಟಿದಾರ್ ಮತ್ತು ಕ್ಯಾಮರೂನ್​ ಗ್ರೀನ್​ ಅಬ್ಬರದ ಬ್ಯಾಟಿಂಗ್​ ಮೂಲಕ ನಿಗದಿತ 20 ಓರವ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 206 ರನ್ ಗಳಿಸಿ ಹೈದರಾಬಾದ್ ಗೆಲುವಿಗೆ 207 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 171 ರನ್​ ಗಳಿಸುವ ಮೂಲಕ 35 ರನ್​ ಗಳಿಂದ ಸೋಲನ್ನಪ್ಪಿತು.

ಮುಗ್ಗರಿಸಿದ ಹೈದರಾಬಾದ್ ತಂಡ:

ಇನ್ನು, ಆರ್​​ಸಿಬಿ ನೀಡಿದ ಬೃಹತ್​ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಪ್ರಮುಖ ಆಟಗಾರನಾದ ಟ್ರಾವಿಸ್ ಹೆಡ್​​ ಕೇವಲ 1 ರನ್​ ಗಳಿಸಿ ಔಟ್ ಆದರೆ, ಅಭಿಷೇಕ್​ ಶರ್ಮಾ 31 ರನ್, ಅಡೇನ್​ ಮಾರ್ಕಮ್​ 7 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್​ 7 ರನ್, ಅಬ್ದುಲ್​ ಸಮೀದ್ 10 ರನ್, ಪ್ಯಾಟ್​​ ಕಮೀನ್ಸ್ 31 ರನ್, ಭುವನೇಶ್ವರ್​ ಕುಮಾರ್ 13 ರನ್ ಗಳಿಸಿದರು. ಈ ಮೂಲಕ ಕಳೆದ ಕಲೆ ಪಂದ್ಯಗಳ ಅಬ್ಬರದ ಬ್ಯಾಟಿಂಗ್​ ಇಂದು ಹೈದರಾಬಾದ್​ ತವರು ಮೈದಾನದಲ್ಲಿಯೇ ಕಂಡುಬರದ ಕಾರಣ SRH ತಂಡ ಆರ್​​ಸಿಬಿ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿತು. ಇನ್ನು, ಆರ್​​ಸಿಬಿ ಪರ ವಿಲ್​ ಜ್ಯಾಕ್ಸ್​ 1 ವಿಕೆಟ್, ಯಶ್ ದಯಾಳ್ 1 ವಿಕೆಟ್, ಸ್ವಪ್ನಿಲ್​ ಸಿಂಗ್​ 2 ವಿಕೆಟ್, ಕರ್ಣ ಶರ್ಮಾ 2 ವಿಕೆಟ್, ಕ್ಯಾಮರೂನ್​ ಗ್ರೀನ್​ 2 ವಿಕೆಟ್ ಪಡೆಯುವ ಮೂಲಕ ಭರ್ಜರಿಯಾಗಿ ಬೌಲರ್ಸ್​​ ಕಂಬ್ಯಾಕ್​ ಮಾಡಿದರು.

ಅಬ್ಬರಿಸಿದ ಪಾಟಿದಾರ್​​ – ಗ್ರೀನ್​:

ಹೈದರಾಬಾದ್‌ನ ರಾಜೀವ್  ಗಾಂಧೀ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ RCB ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬೌಲಿಂಗ್ ಮಾಡುವ ಸವಾಲು ಹೈದರಾಬಾದ್ ತಂಡಕ್ಕಿತ್ತು. ಆರ್‌ಸಿಬಿ ಪರ ಬ್ಯಾಟಿಂಗ್ ಮಾಡುತ್ತಿದ್ದು, ಫಾಫ್ ಡು ಪ್ಲೆಸಿಸ್ 25 ರನ್, ವಿರಾಟ್ ಕೊಹ್ಲಿ 51 ರನ್, ರಜತ್ ಪಾಟಿದಾರ್ 50 ರನ್, ಕ್ಯಾಮರೂನ್ ಗ್ರೀನ್ 37 ರನ್, ದಿನೇಶ್ ಕಾರ್ತಿಕ್ 11 ರನ್ ಮತ್ತು ಸ್ವಪ್ನೀಲ್ ಸಿಂಗ್ 12 ರನ್ ಗಳಿಸಿದರು.

ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 52 ರನ್ ಗಳಿಸಿದರೆ, ಪಾಟಿದಾರ್ 20 ಎಸೆತಗಳಲ್ಲಿ 50 ರನ್ ಗಳಿಸಿದರು. ಹೈದರಾಬಾದ್ ಪರ ಬೌಲಿಂಗ್ ನಲ್ಲಿ ಜಯದೇವ್ ಉನದ್ಕತ್ 3 ವಿಕೆಟ್ ಕಬಳಿಸಿದರೆ, ನಟರಾಜನ್ 2 ವಿಕೆಟ್ ಮತ್ತು ಪ್ಯಾಟ್ ಕಮಿನ್ಸ್ 2 ವಿಕೆಟ್ ಮತ್ತು ಮಾರ್ಕಂಡ್ 2 ವಿಕೆಟ್ ಪಡೆದರು. ಜಯದೇವ್ ಉನದ್ಕತ್ ಅವರು RCB ಸ್ಕೋರ್ ತಡೆಯಲು ಬೌಲಿಂಗ್‌ನಲ್ಲಿ ಹೆಚ್ಚಿನ ಕೊಡುಗೆ ನೀಡಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.

Source:https://kannada.news18.com/news/sports/ipl-2024-rcb-vs-srh-match-royal-challengers-bengaluru-won-by-35-runs-skb-1671210.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *