ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಇಷ್ಟೊಂದು ತೊಂದರೆಗಳೇ? ಅಪ್ಪಿತಪ್ಪಿಯೂ ಇಂಥವರು ತಿನ್ನಬಾರದು.

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಸರಿಯೋ ಅಲ್ಲವೋ ಎಂಬುದಕ್ಕೆ ನೇರವಾದ ಉತ್ತರವನ್ನು ನೀಡಲಾಗುವುದಿಲ್ಲ. ಇದು ಬಾಳೆಹಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ. ಬಾಳೆಹಣ್ಣುಗಳು ಹಸಿರಾಗಿರುವಾಗ ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ. ತುಂಬಾ ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ.

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು (Banana) ತಿನ್ನುವ ಮಂದಿ ಜಾಸ್ತಿಯಿದ್ದಾರೆ. ಕೆಲವರಿಗೆ ಬಾಳೆಹಣ್ಣಿನ ರಸಾಯನ ತಿನ್ನಲು ಕೂಡ ಇಷ್ಟ. ಕೆಲವರು ಬಾಳೆಹಣ್ಣಿನೊಂದಿಗೆ ಪೂರಿ ಮತ್ತು ಚಪಾತಿ ತಿನ್ನುತ್ತಾರೆ. ಇನ್ನು ಕೆಲವರು ಬಾಳೆಹಣ್ಣಿನಿಂದ ಪಾಯಸ ಮಾಡಿ ತಿನ್ನುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ (Empty Stomach) ಬಾಳೆಹಣ್ಣು ತಿನ್ನುವುದು ಸರಿಯೇ ಎಂಬುದು ದೊಡ್ಡ ಪ್ರಶ್ನೆ. ಬಾಳೆಹಣ್ಣು ಅದ್ಭುತ ಹಣ್ಣು. ನ್ಯೂಯಾರ್ಕ್ ಮೂಲದ ಸೆಲೆಬ್ರಿಟಿ ಡಯೆಟಿಷಿಯನ್ ಜೆನ್ನಿಫರ್ ಮೆಂಗ್ ಪ್ರಕಾರ, ಬಾಳೆಹಣ್ಣು ರುಚಿಕರವಾದ ಪೌಷ್ಟಿಕಾಂಶದ ಹಣ್ಣು (Health). ಇದು ಕೈಗೆಟುಕುವ ದರದಲ್ಲಿಯೂ ಸಿಗುತ್ತದೆ. ಬಾಳೆಹಣ್ಣು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು pH ಅನ್ನು ಸಮತೋಲನಗೊಳಿಸುವ ವಿದ್ಯುದ್ವಿಚ್ಛೇದ್ಯಗಳಲ್ಲಿ ಒಂದಾಗಿದೆ. ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಜೀರ್ಣಕ್ರಿಯೆ, ಸ್ನಾಯುವಿನ ಸಂಕೋಚನದಂತಹ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವುದು ಅವಶ್ಯಕ (Side effects).

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಹುದೇ?

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಸರಿಯೋ ಅಲ್ಲವೋ ಎಂಬುದಕ್ಕೆ ನೇರವಾದ ಉತ್ತರವನ್ನು ನೀಡಲಾಗುವುದಿಲ್ಲ. ಇದು ಬಾಳೆಹಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ. ಬಾಳೆಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಾಳೆಹಣ್ಣುಗಳು ಹಸಿರಾಗಿರುವಾಗ ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ. ತುಂಬಾ ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ.

ಬಾಳೆಹಣ್ಣುಗಳು ಹಳದಿ ಮತ್ತು ಹಣ್ಣಾಗಲು ಪ್ರಾರಂಭಿಸಿದ ತಕ್ಷಣ, ಫೈಬರ್ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದೇ ವೇಳೆ ಬಾಳೆಹಣ್ಣಿನಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ಕ್ಷಿಪ್ರವಾಗಿ ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನೀವು ಬೇಗನೆ ಸುಸ್ತಾಗುತ್ತೀರಿ. ಹಾಗಾಗಿ ನೀವು ಬಾಳೆಹಣ್ಣು ತಿನ್ನಲು ಬಯಸಿದರೆ.. ಮಧ್ಯಾಹ್ನ ಅಥವಾ ವ್ಯಾಯಾಮ ಮಾಡುವ ಮೊದಲು ಅಥವಾ ಜಿಮ್‌ಗೆ ಹೋಗುವ ಮೊದಲು ತಿನ್ನಿರಿ. ಇಲ್ಲದಿದ್ದರೆ ಹಸಿ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದು ಕರುಳಿನ ಮೂಲಕ ಆಹಾರವನ್ನು ತ್ವರಿತವಾಗಿ ಚಲಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣವಾಗುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತೆ..?

ಡಯೆಟಿಷಿಯನ್ ಮೆಂಗ್ ಪ್ರಕಾರ ಮಧುಮೇಹ ಪೀಡಿತರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದಲ್ಲ. ಮುಂಜಾನೆ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ. ದೇಹವು ಅದನ್ನು ನಿಯಂತ್ರಿಸಲು ಹೆಚ್ಚಿನ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ನಮ್ಮ ದೇಹವು ಪ್ರತಿದಿನ ಕೆಲಸ ಮಾಡುವುದರಿಂದ, ನಮ್ಮ ಆಹಾರದಲ್ಲಿ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲದೆ ಹಸಿವಿನ ಸಮಸ್ಯೆಗಳನ್ನು ತಡೆಯುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಅದರ ಆಮ್ಲೀಯತೆಯಿಂದಾಗಿ ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಊಟದ ನಂತರ ಬಾಳೆಹಣ್ಣು ತಿನ್ನುವುದು ತುಂಬಾ ಒಳ್ಳೆಯದು. ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಅದರಲ್ಲಿರುವ ಮೆಗ್ನೀಷಿಯಂ ರಕ್ತದಲ್ಲಿ ಹೀರಲ್ಪಡುತ್ತದೆ.

ರಕ್ತದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮಟ್ಟವು ಸಮತೋಲಿತವಾಗಿರುವುದಿಲ್ಲ. ಇದು ಹೃದಯವನ್ನು ಹಾನಿಗೊಳಿಸುತ್ತದೆ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಾರದು ಎನ್ನುತ್ತಾರೆ ವೈದ್ಯರು.

ಗಮನಿಸಿ: ಈ ಮಾಹಿತಿಯನ್ನು ತಜ್ಞರು ಮತ್ತು ಅಧ್ಯಯನಗಳಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಜಾಗೃತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Source : https://tv9kannada.com/health/eating-bananas-on-empty-stomach-good-for-health-what-are-side-effects-sas-739508.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *