
ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ.
* ಇದರಲ್ಲಿ ಆಹಾರ ಸಂಬಂಧಿತ ನಾರಿನಂಶ, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಸಮೃದ್ಧಿಯಾಗಿರುತ್ತದೆ.
ಇದರಲ್ಲಿನ ಪೆರುಲಿಕ್ ಆಮ್ಲ ಕೆಲವು ವಿಧವಾದ ಕ್ಯಾನ್ಸರ್ ಗಳನ್ನು ನಿವಾರಿಸುವುದಷ್ಟೇ ಅಲ್ಲ, ಇನ್ನೂ ಅನೇಕ ವ್ಯಾಧಿಗಳನ್ನು ಬರದಂತೆ ತಡೆಗಟ್ಟುತ್ತದೆ.
* ಸ್ವೀಟ್ ಕಾರ್ನ್ ನಲ್ಲಿರುವ ಬಿ ವಿಟಮಿನ್ ಕಣ್ಣಿನ ಆರೋಗ್ಯಕ್ಕೆ ಉತ್ತಮ.
* ಇದರಲ್ಲಿ ಸಿಹಿ ಅಂಶ ಕಡಿಮೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ. ಆದ್ದರಿಂದ ಪ್ರಮಾಣ ಮೀರದೆ ಇದನ್ನು ನಿತ್ಯವೂ ಸೇವಿಸಬಹುದು.
* ಸ್ವೀಟ್ ಕಾರ್ನ್ ಸೇವಿಸಿದರೆ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.
* ಸ್ವೀಟ್ ಕಾರ್ನ್ ನಲ್ಲಿ ಪುಷ್ಕಳವಾಗಿರುವ ಫಾಲೆಟ್ ಹೃದಯ ಸಂಬಂಧಿತ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಹೃದಯದ ಆರೋಗ್ಯವನ್ನು ಸಂರಕ್ಷಿಸುತ್ತದೆ.
* ಇದರಲ್ಲಿನ ಥಯಾಮಿನ್ ಮೆದುಳಿನ ಕಾರ್ಯ ವೈಖರಿಯನ್ನು ಮೆರಗುಗೊಳಿಸುತ್ತದೆ.
* ಇದರಲ್ಲಿರುವ ಜಿಯಾಗ್ಮಾಥಿನ್ ಎಂಬ ಪ್ರತ್ಯೇಕವಾದ ಆಂಟಿ ಆಕ್ಸಿಡೆಂಟ್ಸ್ ಕಣ್ಣುಗಳ ಆರೋಗ್ಯವನ್ನು ಬಹಳ ಸೊಗಸಾಗಿ ಕಾಪಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1