ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸಾಣೇಹಳ್ಳಿ, ಅಕ್ಟೋಬರ್ 17; ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿ ಈ ಬಾರಿ ರಬಕವಿ ಬನಹಟ್ಟಿಯ ಬಿ ಆರ್ ಪೋಲಿಸ ಪಾಟೀಲ ಅವರಿಗೆ ಸಂದಿದೆ ಎಂದು ಶ್ರೀ ಶಿವಕುಮಾರ ಕಲಾಸಂಘದ ಅಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದ್ದಾರೆ. 2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಇದುವರೆಗೂ ಪ್ರಸನ್ನ(2004), ಸಿಜಿಕೆ(2005), ಪಿ ಜಿ ಗಂಗಾಧರಸ್ವಾಮಿ(2006), ಅಶೋಕ ಬಾದರದಿನ್ನಿ(2007), ಮಾಲತಿಶ್ರೀ(2008),2009ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ(2010), ಬಿ ಜಯಶ್ರೀ(2011), ಡಾ. ಕೆ ಮರುಳಸಿದ್ಧಪ್ಪ(2012), ಚಿದಂಬರರಾವ್ ಜಂಬೆ(2012), ಕೋಟಗಾನಹಳ್ಳಿ ರಾಮಯ್ಯ(2014), ಡಾ. ಸುಭದ್ರಮ್ಮ ಮನ್ಸೂರು (2015), ಲಕ್ಷಿ, ಚಂದ್ರಶೇಖರ್ (2016), ಶ್ರೀನಿವಾಸ ಜಿ ಕಪ್ಪಣ್ಣ (2017), ಬಸವರಾಜ ಬೆಂಗೇರಿ(2018), ಟಿ ಎಸ್ ನಾಗಾಭರಣ (2019), 2020ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (2021), ಡಾ. ಎಂ ಜಿ ಈಶ್ವರಪ್ಪ (2022), ಶಶಿಧರ ಅಡಪ (2023), ಮಹಾಂತೇಶ್ ಗಜೇಂದ್ರ ಗಡ (2024) ಉಮಾಶ್ರೀ (2025) ಇವರಿಗೆ ನೀಡುತ್ತಾ ಬರಲಾಗಿದೆ. ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ಶಿಕ್ಷಣ, ಸಾಹಿತ್ಯ, ರಂಗಭೂಮಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವವರು ಬಹುಮುಖಿ ಪ್ರತಿಭೆ ಬಿ ಆರ್ ಪೋಲಿಸ ಪಾಟೀಲ ಅವರು.ಪ್ರೊ. ಬಿ ಆರ್ ಪೋಲೀಸಪಾಟೀಲ ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ಸಂಘಟಕ, ಸಂಶೋಧಕ, ವಚನಕಾರ, ನಟ, ನಿರ್ದೇಶಕ, ಗಾಯಕ, ವಿಚಾರವಾದಿ, ವಾಗ್ಮಿ, ವಿಮರ್ಶಕ, ಸಮಾಜ ಹಿತಚಿಂತಕ ಹೀಗೆ ಹಲವು ಶಕ್ತಿಗಳ ಸಂಗಮ ಬಿ ಆರ್ ಪೋಲೀಸಪಾಟೀಲರು. ಇವರು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಓರೂರಿನಲ್ಲಿ 01-06…