ರಬಕವಿ ಬನಹಟ್ಟಿಯ ಪ್ರೊ. ಬಿ.ಆರ್. ಪೋಲಿಸ ಪಾಟೀಲರಿಗೆ 2026ರ ಪ್ರತಿಷ್ಠಿತ ‘ಶ್ರೀ ಶಿವಕುಮಾರ ಪ್ರಶಸ್ತಿ’

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಾಣೇಹಳ್ಳಿ, ಅಕ್ಟೋಬರ್ 17; ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿ ಈ ಬಾರಿ ರಬಕವಿ ಬನಹಟ್ಟಿಯ ಬಿ ಆರ್ ಪೋಲಿಸ ಪಾಟೀಲ ಅವರಿಗೆ ಸಂದಿದೆ ಎಂದು ಶ್ರೀ ಶಿವಕುಮಾರ ಕಲಾಸಂಘದ ಅಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದ್ದಾರೆ.

     2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಇದುವರೆಗೂ ಪ್ರಸನ್ನ(2004), ಸಿಜಿಕೆ(2005), ಪಿ ಜಿ ಗಂಗಾಧರಸ್ವಾಮಿ(2006), ಅಶೋಕ ಬಾದರದಿನ್ನಿ(2007), ಮಾಲತಿಶ್ರೀ(2008),2009ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ.  ಸಿ ಬಸವಲಿಂಗಯ್ಯ(2010),  ಬಿ ಜಯಶ್ರೀ(2011),  ಡಾ. ಕೆ ಮರುಳಸಿದ್ಧಪ್ಪ(2012),  ಚಿದಂಬರರಾವ್ ಜಂಬೆ(2012),  ಕೋಟಗಾನಹಳ್ಳಿ ರಾಮಯ್ಯ(2014),  ಡಾ. ಸುಭದ್ರಮ್ಮ ಮನ್ಸೂರು (2015), ಲಕ್ಷಿ, ಚಂದ್ರಶೇಖರ್ (2016), ಶ್ರೀನಿವಾಸ ಜಿ ಕಪ್ಪಣ್ಣ (2017), ಬಸವರಾಜ ಬೆಂಗೇರಿ(2018), ಟಿ ಎಸ್ ನಾಗಾಭರಣ (2019),  2020ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (2021), ಡಾ. ಎಂ ಜಿ ಈಶ್ವರಪ್ಪ (2022), ಶಶಿಧರ ಅಡಪ (2023), ಮಹಾಂತೇಶ್ ಗಜೇಂದ್ರ ಗಡ (2024) ಉಮಾಶ್ರೀ (2025) ಇವರಿಗೆ ನೀಡುತ್ತಾ ಬರಲಾಗಿದೆ. 

ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ಶಿಕ್ಷಣ, ಸಾಹಿತ್ಯ, ರಂಗಭೂಮಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವವರು ಬಹುಮುಖಿ ಪ್ರತಿಭೆ ಬಿ ಆರ್ ಪೋಲಿಸ ಪಾಟೀಲ ಅವರು.ಪ್ರೊ. ಬಿ ಆರ್ ಪೋಲೀಸಪಾಟೀಲ ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ಸಂಘಟಕ, ಸಂಶೋಧಕ, ವಚನಕಾರ, ನಟ, ನಿರ್ದೇಶಕ, ಗಾಯಕ, ವಿಚಾರವಾದಿ, ವಾಗ್ಮಿ, ವಿಮರ್ಶಕ, ಸಮಾಜ  ಹಿತಚಿಂತಕ ಹೀಗೆ ಹಲವು ಶಕ್ತಿಗಳ ಸಂಗಮ ಬಿ ಆರ್ ಪೋಲೀಸಪಾಟೀಲರು. ಇವರು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಓರೂರಿನಲ್ಲಿ 01-06 1950 ರಂದು ಜನಿಸಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನೂರಕ್ಕಿಂತ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಇವರ 65 ನಾಟಕಗಳು ಬಾನುಲಿಯಲ್ಲಿ ಪ್ರಸಾರವಾಗಿವೆ. ಎಂಟು ಕವನ ಸಂಕಲನಗಳು, ಏಳು ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಏಳು ಜೀವನ ಚರಿತ್ರೆಗಳು, ಹದಿನೆಂಟು ಸಂಪಾದನಾ ಕೃತಿಗಳು, ಒಂದು ವಚನ ಸಂಕಲನ, ಏಳು ಅನುವಾದ ಕೃತಿಗಳನ್ನು ಒಳಗೊಂಡAತೆ 120 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಇವರಿಗೆ ತಮ್ಮ ಪ್ರಕಟಿತ ಎಲ್ಲಾ ಪ್ರಕಾರದ ಕೃತಿಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಐವತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ದೆಹಲಿ ದೂರದರ್ಶನ, ಚಂದನ ದೂರದರ್ಶನ, ವಚನ ಟಿ.ವಿ, ಕಾವೇರಿ ಟಿ.ವಿ, ಕಲಾ ಮಾಧ್ಯಮ, ಈ ಟಿ.ವಿ ನ್ಯೂಸ್ ಹಾಗೂ ಆಕಾಶವಾಣಿಯಲ್ಲಿ ಇವರ ಸಂದರ್ಶನಗಳು ಪ್ರಸಾರವಾಗಿವೆ. ಈ ಎಲ್ಲ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಬಾರಿಯ “ಶ್ರೀ ಶಿವಕುಮಾರ ಪ್ರಶಸ್ತಿ”ಯನ್ನು ನೀಡಲಾಗಿದೆ.

     ಆಯ್ಕೆ ಸಮಿತಿಯ ಮುಂದೆ ಹತ್ತಾರು ಪ್ರತಿಭಾವಂತ ಮತ್ತು ಅರ್ಹ ರಂಗಕರ್ಮಿಗಳ ಹೆಸರುಗಳಿದ್ದವು. ಪ್ರಶಸ್ತಿ ಒಂದೇ ಆಗಿರುವುದರಿಂದ ಅಂತಿಮವಾಗಿ ರಂಗಕ್ಷೇತ್ರ, ಶಿಕ್ಷಣ, ಜನಪದ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಈಗಲೂ ತೊಡಗಿಕೊಂಡಿರುವ ಬಿ ಆರ್ ಪೋಲಿಸ ಪಾಟೀಲ ಅವರನ್ನು ಆಯ್ಕೆ ಮಾಡಿದೆ. ಇಂತಹ ಅಪರೂಪದ ಬಹುಮುಖಿ ಕ್ರಿಯಾಶೀಲ ವ್ಯಕ್ತಿ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಭಾಜನರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಬಿ ಆರ್ ಪೋಲಿಸ ಪಾಟೀಲರನ್ನು ಅವರನ್ನು ಅಭಿನಂದಿಸಿ ಸುದ್ದಿಯನ್ನು ಮಾಧ್ಯಮಗಳಿಗೆ ಬಿಡುಗೊಳಿಸಿದರು.

     ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಸಾಣೇಹಳ್ಳಿಯಲ್ಲಿ ನವೆಂಬರ್ 1 ರಿಂದ 6 ರವರೆಗೆ ನಡೆಯುವ ರಾಷ್ಟಿçÃಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಶಸ್ತಿಯನ್ನು ಪ್ರದಾನ ಮಾಡುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *