ಚಿತ್ರದುರ್ಗ: ನಗರದ ವಿದ್ಯಾನಗರದಲ್ಲಿ ಇರುವ ವಿದ್ಯಾದಾಯಿನಿ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮುದ್ದು ಮಕ್ಕಳಿಗಾಗಿ “ಅಕ್ಷರಾಭ್ಯಾಸ” ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಪೋಷಕರು ತಮ್ಮ ಮಕ್ಕಳಿಗೆ ಅ ಆ ಅಕ್ಷರಗಳನ್ನು ಬರೆಸುವುದರ ಮೂಲಕ ತಮ್ಮಮಗುವಿನ ವಿದ್ಯಾರಂಭವನ್ನು ಮಾಡಿಸಿದರು ಪುರೋಹಿತರಾದ ಶ್ರೀ ತಿಪ್ಪೇಸ್ವಾಮಿ ರವರ ಮಾರ್ಗದರ್ಶನ ಮಾಡಿದರು.

ಪ್ರತಿ ಮಗುವಿನ ಉಜ್ವಲ ಭವಿಷ್ಯ ವಿದ್ಯೆಯಿಂದ ಮಾತ್ರ ಸಾದ್ಯ ಅದರಿಂದ ವಿದ್ಯಾಭ್ಯಾಸ ಚೆನ್ನಾಗಿರಲು ಉತ್ತಮ ವಾಗಿರಲು ಬುನಾದಿ ಮುಖ್ಯ ಆ ಬುನಾದಿ ಇಂದಿನಿಂದ ಪ್ರಾರಂಭವಾಗಿದೆ. ಎಂದು ಶಾಲೆಯ ಡೀನ್ ಡಾ. ಗೋಪಾಲ್ ರವರು ಹೇಳಿದರು.

ಈ ಕಾರ್ಯಕ್ರಮ ದಲ್ಲಿ ಸಿಎನ್ ಸಿ ಕಾಲೇಜಿನ ಪ್ರಾಚಾರ್ಯರು ಮತ್ತು ಶಾಲೆಯ ಸಿಈಓ ಆದ ನಾಗರಾಜ್ ಬಿ ಶಾಲೆಯ ಅಧ್ಯಕ್ಷರಾದ ಶ್ರೀ ಮತಿ ವಿಜಯಲಕ್ಷ್ಮಿ, ನಿರ್ದೇಶಕರು ಮತ್ತು ಮುಖ್ಯೋಪಾಧ್ಯಾಯರಾದ ಪ್ರತೀಕ್ ಜಿ ಮತ್ತು ಜಮೀರುಲ್ಲಾ ಶಿಕ್ಷಕಿಯಾರಾದ ಶ್ವೇತನಾಗರಾಜ್, ಮಾಧವಿ ವಿಜಯಕುಲ್ಮರ, ಅನಿತ, ಅರ್ಚನ, ಸಂಕಲ್ಪ, ಅರ್ಶಿಯಾ, ಮತ್ತು ಶಾಲೆಯ ಶಿಕ್ಷಕರು, ಶಿಕ್ಷಕೇತರ ವರ್ಗದವರು ಪಾಲ್ಗೊಂಡಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: