ನೀರು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಅಂಶ. ಆದರೆ ನೀರು ಕುಡಿಯುವ ಸಮಯವೂ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬಹುತೇಕ ಜನರು ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಅಭ್ಯಾಸವು ಜೀರ್ಣಕ್ರಿಯೆಗೆ ಹಾನಿಕಾರಕವಾಗಿದೆ.
ಆಹಾರ ಸರಿಯಾಗಿ ಜೀರ್ಣವಾಗಲು ದೇಹಕ್ಕೆ ಸಮಯ ಬೇಕಾಗುತ್ತದೆ. ಊಟ ಮಾಡಿದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಜೀರ್ಣಕಾರಿ ರಸಗಳು ದುರ್ಬಲವಾಗುತ್ತವೆ. ಇದರಿಂದ ಅಜೀರ್ಣ, ಗ್ಯಾಸ್, ಹೊಟ್ಟೆ ನೋವು, ಉಬ್ಬರ ಮತ್ತು ಆಮ್ಲೀಯತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಊಟದ ನಂತರ ಯಾವಾಗ ನೀರು ಕುಡಿಯಬೇಕು? ಆರೋಗ್ಯ ತಜ್ಞರ ಸಲಹೆಯಂತೆ,
ಊಟ ಮಾಡಿದ 45 ರಿಂದ 60 ನಿಮಿಷಗಳ ನಂತರ ನೀರು ಕುಡಿಯುವುದು ಅತ್ಯುತ್ತಮ.
ನೀರನ್ನು ಮೊದಲು ಕುಡಿಯಬೇಕೆಂದರೆ, ಊಟಕ್ಕೆ ಅರ್ಧ ಗಂಟೆ ಮೊದಲು ಕುಡಿಯಬಹುದು. ಇದರಿಂದ ಆಹಾರದ ಪೋಷಕಾಂಶಗಳು ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳುತ್ತವೆ.
ಊಟವಾದ ತಕ್ಷಣ ನೀರು ಕುಡಿಯುವುದರಿಂದಾಗುವ ಹಾನಿಗಳು
ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ
ಹೊಟ್ಟೆ ಭಾರ ಮತ್ತು ಉಬ್ಬರ ಉಂಟಾಗುತ್ತದೆ
ತೂಕ ಹೆಚ್ಚಾಗುವ ಸಾಧ್ಯತೆ ಇದೆ
ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ.
ಸರಿಯಾದ ಸಮಯಕ್ಕೆ ನೀರು ಕುಡಿಯುವ ಲಾಭಗಳು
ಜೀರ್ಣಕ್ರಿಯೆ ಸುಧಾರಿಸುತ್ತದೆ.
ಗ್ಯಾಸ್ ಮತ್ತು ಆಮ್ಲೀಯತೆ ಸಮಸ್ಯೆ ಕಡಿಮೆಯಾಗುತ್ತದೆ.
ತೂಕ ನಿಯಂತ್ರಣದಲ್ಲಿ ಇರುತ್ತದೆ.
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸರಿಯಾಗಿ ಲಭಿಸುತ್ತವೆ.
ನಿದ್ರೆಯ ಗುಣಮಟ್ಟ ಉತ್ತಮವಾಗುತ್ತದೆ
ಊಟವಾದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡರೆ, ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ ಬೊಜ್ಜು, ಆಮ್ಲೀಯತೆ ಮತ್ತು ಹೊಟ್ಟೆ ಸಮಸ್ಯೆಗಳಿಂದ ದೂರವಿರಬಹುದು. ಉತ್ತಮ ಆರೋಗ್ಯಕ್ಕಾಗಿ ಈ ಸರಳ ನಿಯಮವನ್ನು ಪಾಲಿಸುವುದು ಬಹಳ ಅಗತ್ಯ.
Views: 33