ಥೈರಾಯ್ಡ್ ಪ್ರತಿರಕ್ಷಣೆ ಮತ್ತು ಆರೋಗ್ಯ ಸೂತ್ರಗಳು: ನಮ್ಮ ಶರೀರದ ಸುಪ್ರಸಿದ್ಧ ಅಜ್ಞಾತ ಗೆಲುವು.

Thyroid : ಥೈರಾಯ್ಡ್ ಸಮಸ್ಯೆಗಳು ಬದಲಾಗುತ್ತಿರುವ ಜೀವನ ಶೈಲಿಗಳಿಂದ ಮತ್ತು ಒತ್ತಡದ ಜೀವನದಿಂದ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಮನೆಮದ್ದುಗಳಿಂದಲೇ ಸುಲಭವಾಗಿ ತೆಡೆಗಟ್ಟಬಹುದು. ಹಾಗಾದರೆ ಯಾವುದು ಆ ಮನೆಮದ್ದು, ಯಾವ ರೀತಿ ಅದನ್ನು ಬಳಸಿದರೆ ಸೂಕ್ತ ಈ ಎಲ್ಲಾದರ ಮಾಹಿತಿ ಈ ಸ್ಟೋರಿಯಲ್ಲಿದೆ.

  • ವಾತ ಮತ್ತು ಕಫ ದೋಷಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಸಮತೋಲನಗೊಳಿಸಲಾಗುತ್ತದೆ.
  • ಅಶ್ವಗಂಧ ಚೂರ್ಣವನ್ನು ಸೇವಿಸುವ ಮೂಲಕ ಥೈರಾಯ್ಡ್ ಚಿಕಿತ್ಸೆ ಮಾಡಿಕೊಳ್ಳಬಹುದು.
  • ಅರಿಶಿನದ ಹಾಲು ಕುಡಿಯುವುರಿಂದ ಥೈರಾಯ್ಡ್ ನಿಯಂತ್ರಿಸಬಹುದು.

Home remedies for Tyhroid: ಥೈರಾಯ್ಡ್  ಸಂಬಂಧಿತ ಕಾಯಿಲೆಗಳು ಜಂಕ್‌ ಫುಡ್‌, ರೇಡಿಮೇಡ್‌ ಫುಡ್‌ ಅಥವಾ ಅತೀವಾ ಎಣ್ಣೆ ಪದಾರ್ಥಗಳಂತಹ ಆಹಾರ ಪದ್ಧತಿಗಳಿಂದ ಮತ್ತು ಒತ್ತಡದ ಜೀವನದಿಂದ ಈ ಸಮಸ್ಯೆ ಉಂಟಾಗುತ್ತವೆ. ಆಯುರ್ವೇದದ ಪ್ರಕಾರ, ಥೈರಾಯ್ಡ್ ಸಂಬಂಧಿತ ಕಾಯಿಲೆಗಳು ವಾತ, ಪಿತ್ತ ಮತ್ತು ಕಫದಿಂದ ಉಂಟಾಗುತ್ತವೆ. ದೇಹದಲ್ಲಿ ವಾತ ಮತ್ತು ಕಫ ದೋಷಗಳು ಇದ್ದಾಗ ವ್ಯಕ್ತಿಗೆ ಥೈರಾಯ್ಡ್ ಇರುತ್ತದೆ. ಥೈರಾಯ್ಡ್ ಚಿಕಿತ್ಸೆಗಾಗಿ  ಆಯುರ್ವೇದ ವಿಧಾನಗಳನ್ನು ಪ್ರಯತ್ನಿಸಬಹುದು. ವಾತ ಮತ್ತು ಕಫ ದೋಷಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಸಮತೋಲನಗೊಳಿಸಲಾಗುತ್ತದೆ. ಒಳ್ಳೆಯ ವಿಷಯವೆಂದರೆ  ಥೈರಾಯ್ಡ್‌ಗೆ ಮನೆಮದ್ದುಗಳನ್ನು ಸಹ ಬಳಸಬಹುದು. ಯಾವುದು ಆ ಮನೆಮದ್ದು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಥೈರಾಯ್ಡ್ ಸಮಸ್ಯೆಗೆ ಕಾರಣಗಳು ಹೀಗಿರಬಹುದು

ಹೆಚ್ಚು ಒತ್ತಡದ ಜೀವನ ನಡೆಸುವುದು ಥೈರಾಯ್ಡ್ ಹಾರ್ಮೋನ್ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಆಹಾರದಲ್ಲಿ ಅಯೋಡಿನ್ ಪ್ರಮಾಣವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದರಿಂದ ಥೈರಾಯ್ಡ್ ಗ್ರಂಥಿಗಳು ವಿಶೇಷವಾಗಿ ಪರಿಣಾಮ ಬೀರುತ್ತವೆ.
ಈ ರೋಗವು ಆನುವಂಶಿಕವೂ ಆಗಿರಬಹುದು. ಕುಟುಂಬದ ಇತರ ಸದಸ್ಯರಿಗೂ ಈ ಸಮಸ್ಯೆ ಇದ್ದರೆ, ಕುಟುಂಬದ ಇತರ ಸದಸ್ಯರಿಗೂ ಈ ಸಮಸ್ಯೆ ಎದುರಾಗಬಹುದು.
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಥೈರಾಯ್ಡ್ ಹಾರ್ಮೋನುಗಳ ಅಸಮತೋಲನವು ಕಂಡುಬರುತ್ತದೆ, ಏಕೆಂದರೆ ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳು ಸಂಭವಿಸುತ್ತವೆ.
ಆಹಾರದಲ್ಲಿ ಸೋಯಾ ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿ ಥೈರಾಯ್ಡ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಥೈರಾಯ್ಡ್ ಸಮಸ್ಯೆಗೆ ಈ ಕೆಳಗಿನ ಮನೆಮದ್ದುಗಳನ್ನು ಅನುಸರಿಸಿ

ಅಶ್ವಗಂಧ ಚೂರ್ಣ
ಅಶ್ವಗಂಧ ಚೂರ್ಣವನ್ನು ಸೇವಿಸುವ ಮೂಲಕ ಥೈರಾಯ್ಡ್ ಚಿಕಿತ್ಸೆ ಮಾಡಿಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ಒಂದು ಚಮಚ ಅಶ್ವಗಂಧದ ಪುಡಿಯನ್ನು ಉಗುರುಬೆಚ್ಚಗಿನ ಹಸುವಿನ ಹಾಲಿನೊಂದಿಗೆ ಸೇವಿಸಿ. ಇದರ ಎಲೆಗಳು ಅಥವಾ ಬೇರುಗಳನ್ನು ಸಹ ನೀರಿನಲ್ಲಿ ಕುದಿಸಿ ಕುಡಿಯಬಹುದು. ಅಶ್ವಗಂಧವು ಹಾರ್ಮೋನ್ ಅಸಮತೋಲನವನ್ನು ಹೋಗಲಾಡಿಸುವಲ್ಲಿ ಸಹಾಯಕ.

ತುಳಸಿ 
ಥೈರಾಯ್ಡ್‌ಗೆ ಮನೆಮದ್ದುಗಳಿಂದಲೇ ಪರಿಹಾರವನ್ನು ಕಂಡುಕೊಳ್ಳಬಹುದು. ಎರಡು ಚಮಚ ತುಳಸಿ ರಸಕ್ಕೆ ಅರ್ಧ ಚಮಚ ಅಲೋವೆರಾ ರಸವನ್ನು ಬೆರೆಸಿ ಸೇವಿಸಿ. ಇದರಿಂದ  ಥೈರಾಯ್ಡ್ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.

ಹಸಿರು ಕೊತ್ತಂಬರಿ 
ಹಸಿರು ಕೊತ್ತಂಬರಿ ಸೊಪ್ಪನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಕುಡಿಯಿರಿ. ಇದರಿಂದ ಥೈರಾಯ್ಡ್ ಕಾಯಿಲೆಯಿಂದ ಮುಕ್ತಿ ದೊರೆಯುತ್ತದೆ.

ಅರಿಶಿನ ಮತ್ತು ಹಾಲು
ಪ್ರತಿದಿನ ರಾತ್ರಿ ಮಲಗುವ ಮುನ್ನ ಕಾಯಿಸಿದ ಹಾಲಿಗೆ ಅರಶಿನವನ್ನು ಬೆರಸಿ ಕುಡಿಯುವುದರಿಂದ ಥೈರಾಯ್ಡ್‌ ಸಮಸ್ಯೆಯನ್ನು ಅದಷ್ಟು ಕಡಿಮೆಗೊಳಿಸಬಹುದು.
ಪ್ರತಿದಿನ ಹಾಲಿನಲ್ಲಿ ಬೇಯಿಸಿದ ಅರಿಶಿನವನ್ನು ಕುಡಿಯುವುದು ಥೈರಾಯ್ಡ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ 

ಬಾಟಲ್ ಸೋರೆಕಾಯಿ
ಬಾಟಲ್‌ ಸೋರೆಕಾಯಿ ಬಳಕೆಯಿಂದ ಆರೋಗದಲ್ಲಿ ಹಲವು ರೀತಿಯ ಪ್ರಯೋಜನಗಳನ್ನು ಕಾಣಬಹುದು. ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ರಸವನ್ನು ಕುಡಿಯುವುದರಿಂದ ಥೈರಾಯ್ಡ್ ನಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಅಗಸೆಬೀಜದ ಪುಡಿ 
ಅಗಸೆಬೀಜದ ಪುಡಿಯ ಬಳಕೆಯು ಥೈರಾಯ್ಡ್ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಏಕೆಂದರೆ ಅಗಸೆಬೀಜದಲ್ಲಿ ಒಮೆಗಾ-3 ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಒಮೆಗಾ -3 ಥೈರಾಯ್ಡ್ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಥೈರಾಯ್ಡ್ ರೋಗಿಗಳು ನಿಯಮಿತವಾಗಿ ಅಗಸೆಬೀಜದ ಪುಡಿಯನ್ನು ಬಳಕೆ ಮಾಡುವುದು ಬಹಳ ಉತ್ತಮ.

ತೆಂಗಿನ ಎಣ್ಣೆ 
ತೆಂಗಿನ ಎಣ್ಣೆಯ ಬಳಕೆ ಥೈರಾಯ್ಡ್ ಕಾರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಥೈರಾಯ್ಡ್ ರೋಗಿಗಳು ತೆಂಗಿನ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗು ಬಳಕೆ ಮಾಡುವುದು ಒಳ್ಳೆಯದು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

Source : https://zeenews.india.com/kannada/health/thyroid-prevention-and-health-tips-unlocking-the-mysteries-of-our-body%CA%BCs-enigmatic-triumph-177441

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *