ಶಾಲಿವಾಹನ ಶಕ ೧೯೪೯, ಪರಾಭವ ನಾಮ ಸಂವತ್ಸರದ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ಈ ದಿನವು ಕೆಲವರಿಗೆ ಸವಾಲುಗಳನ್ನು ಹಾಗೂ ಮತ್ತೆ ಕೆಲವರಿಗೆ ಶುಭ ಫಲಗಳನ್ನು ಹೊತ್ತು ತಂದಿದೆ. ದುಡುಕಿನ ನಿರ್ಧಾರಗಳು, ಅತಿಯಾದ ಅಹಂಕಾರ, ಪ್ರಶಂಸೆಯ ಕೊರತೆ ಹಾಗೂ ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳು ಈ ದಿನದ ಪ್ರಮುಖ ಎಚ್ಚರಿಕೆಯ ಅಂಶಗಳಾಗಿವೆ. ಹಾಗಾದರೆ ಶನಿವಾರದಂದು ನಿಮ್ಮ ರಾಶಿಯ ಫಲಾಫಲಗಳೇನು? ಸಂಪೂರ್ಣ ವಿವರ ಇಲ್ಲಿದೆ.
ಇಂದಿನ ಪಂಚಾಂಗ:
ವಿವರ ಮಾಹಿತಿ
ಸಂವತ್ಸರ. ಪರಾಭವ ನಾಮ ಸಂವತ್ಸರ,
ಶಾಲಿವಾಹನ ಶಕೆ ೧೯೪೯
ಆಯನ / ಋತು. ದಕ್ಷಿಣಾಯನ / ವರ್ಷ ಋತುಮಾಸಚಾಂದ್ರಮಾನ: ಭಾದ್ರಪದ,
ಸೌರಮಾನ: ಕನ್ಯಾಪಕ್ಷ / ತಿಥಿ ಕೃಷ್ಣ ಪಕ್ಷ / ಅಮಾವಾಸ್ಯೆವಾರ / ನಕ್ಷತ್ರಶನಿವಾರ / ಹಸ್ತಾ (ಮಹಾನಕ್ಷತ್ರ ಹಾಗೂ ನಿತ್ಯನಕ್ಷತ್ರ)ಯೋಗ / ಕರಣಐಂದ್ರ ಯೋಗ / ನಾಗವಾನ್ ಕರಣಸೂರ್ಯೋದಯ / ಸೂರ್ಯಾಸ್ತಬೆಳಿಗ್ಗೆ 06:10 / ಸಂಜೆ 06:02
ಶುಭಾಶುಭ ಕಾಲಗಳು:
ರಾಹು ಕಾಲ: ಬೆಳಿಗ್ಗೆ 09:08 ರಿಂದ 10:38 ರವರೆಗೆ
ಯಮಗಂಡ ಕಾಲ: ಮಧ್ಯಾಹ್ನ 01:36 ರಿಂದ 03:05 ರವರೆಗೆ
ಗುಳಿಕ ಕಾಲ: ಬೆಳಿಗ್ಗೆ 06:10 ರಿಂದ 07:39 ರವರೆಗೆ
ಮೇಷ ರಾಶಿ
ಕಾರ್ಯಗಳಲ್ಲಿ ತರಾತುರಿ ಬೇಡ. ವಿರೋಧಿಗಳಿಂದ ಕಿರುಕುಳ ಎದುರಾಗಬಹುದು, ಎಚ್ಚರವಿರಲಿ. ಹಣಕಾಸು ವ್ಯರ್ಥವಾಗಿ ಪೋಲಾಗುವ ಸಾಧ್ಯತೆಯಿದ್ದು, ಕಾನೂನಾತ್ಮಕ ವಿಚಾರಗಳಲ್ಲಿ ನಿರಾಸೆ ಮೂಡಬಹುದು. ವೃತ್ತಿ ಬದುಕಿನಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಾಮರ್ಥ್ಯದ ಬಗ್ಗೆ ನಿಮ್ಮಲ್ಲೇ ಗೊಂದಲ ಕಾಡಬಹುದು.
ವೃಷಭ ರಾಶಿ
ಅಪರಿಚಿತ ವ್ಯಕ್ತಿಗಳಿಂದ ಹಣಕಾಸಿನ ವಿಚಾರವಾಗಿ ಒತ್ತಡಗಳು ಬರಬಹುದು. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿದ್ದರೆ ಸಹೋದ್ಯೋಗಿಗಳ ಸಹಾಯ ಪಡೆಯುವುದು ಸೂಕ್ತ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗಲಿದೆ. ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬರಲಿದ್ದು, ಸಮಯಪಾಲನೆಗೆ ಹೆಚ್ಚಿನ ಒತ್ತು ನೀಡುವಿರಿ.
ಮಿಥುನ ರಾಶಿ
ನಿಮ್ಮ ಕೋಪ ಹಾಗೂ ಒರಟು ವರ್ತನೆಯಿಂದ ಆಪ್ತರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಹಿಳೆಯರಿಗೆ ಶಾಪಿಂಗ್ ಕಡೆ ಒಲವು ಹೆಚ್ಚಿರುತ್ತದೆ. ಪ್ರಯಾಣವು ಸುಸ್ತು ತರಿಸಲಿದ್ದು, ಭೋಗವಸ್ತುಗಳ ಖರೀದಿಯಿಂದ ಹಣ ನಷ್ಟವಾಗಬಹುದು. ಹೊಸ ಯೋಜನೆಗಳನ್ನು ಆರಂಭಿಸುವಾಗ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿ
ವಿಪರೀತ ಓಡಾಟದಿಂದ ದೇಹಕ್ಕೆ ಆಯಾಸವಾಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯವೈಖರಿಯ ಮೇಲೆ ಹೆಚ್ಚಿನ ನಿಗಾ ಇರುತ್ತದೆ. ಆಸ್ತಿ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ ಕಿರಿಕಿರಿ ಉಂಟುಮಾಡಬಹುದು. ದೂರದ ಸಂಬಂಧಿಗಳ ಭೇಟಿಯಾಗಲಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಮೌನ ವಹಿಸುವುದು ಜಾಣತನ.
ಸಿಂಹ ರಾಶಿ
ಅನಗತ್ಯ ವಸ್ತುಗಳನ್ನು ಹೊರಹಾಕಲು ಈ ದಿನ ಯೋಗ್ಯವಾಗಿದೆ. ಕೆಲಸಗಳನ್ನು ಮುಂದೂಡುವ ಆಲಸ್ಯತನ ಕಾಡಬಹುದು. ಆಸ್ತಿ ಅಥವಾ ಉತ್ತಮ ಜಮೀನು ಖರೀದಿಗೆ ಅವಕಾಶಗಳು ಒದಗಿಬರಲಿವೆ. ಪ್ರಾಣಿಗಳಿಂದ ಕೊಂಚ ಭಯ ಎದುರಾಗುವ ಸಾಧ್ಯತೆ ಇದ್ದು, ವಿವಾಹ ವಿಚಾರಗಳಲ್ಲಿ ವಿಳಂಬವಾಗುವ ಲಕ್ಷಣಗಳಿವೆ.
ಕನ್ಯಾ ರಾಶಿ
ಮಹಿಳಾ ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಪ್ರಶಂಸೆ ಲಭಿಸಲಿದೆ. ಆರ್ಥಿಕವಾಗಿ ಸಾಲದ ಹೊರೆ ಕಡಿಮೆಯಾಗಲಿದ್ದು, ಬರಬೇಕಾದ ಹಣ ಕೈಸೇರುವುದು. ಕೃಷಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ ಮತ್ತು ಧಾರ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ. ಮರೆವಿನಿಂದಾಗಿ ಕಚೇರಿಯಲ್ಲಿ ಹಿನ್ನಡೆ ಅನುಭವಿಸಬೇಕಾಗಬಹುದು.
ತುಲಾ ರಾಶಿ
ನಿಮ್ಮ ಕಾರ್ಯವೈಖರಿಗೆ ಸಮಾಜದಲ್ಲಿ ಪ್ರಶಂಸೆ ಸಿಗಲಿದೆ. ಹಿರಿಯರ ಸಲಹೆಗಳನ್ನು ಪಾಲಿಸುವುದರಿಂದ ಮುಂಬರುವ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು. ಇಷ್ಟವಾದ ವಸ್ತುಗಳನ್ನು ಖರೀದಿಸಲು ಸಕಾಲ. ನಿಮ್ಮ ಆದಾಯದ ಮಾರ್ಗಗಳ ಬಗ್ಗೆ ಎಚ್ಚರಿಕೆ ಇರಲಿ, ವ್ಯವಸ್ಥೆಯ ವಿರುದ್ಧ ಬಂಡಾಯವೇಳದಿರುವುದು ಒಳಿತು.
ವೃಶ್ಚಿಕ ರಾಶಿ
ಹಿತಶತ್ರುಗಳಿಂದ ಆರ್ಥಿಕ ನಷ್ಟದ ಭೀತಿ ಇದೆ. ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಕಾಲ ಕಳೆಯುವುದು ಕಷ್ಟವಾಗಬಹುದು. ಕಾನೂನು ಮತ್ತು ನಿಯಮಗಳನ್ನು ಮೀರಿ ನಡೆಯುವುದು ಬೇಡ. ರಕ್ಷಣಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕೊಂಚ ಸವಾಲುಗಳಿರುತ್ತವೆ.
ಧನು ರಾಶಿ
ನೂತನ ಯೋಜನೆಗಳತ್ತ ಮುಖ ಮಾಡುವಿರಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಹೊಂದಾಣಿಕೆಯ ಕೊರತೆ ಎದುರಾಗಬಹುದು. ಅನಿರೀಕ್ಷಿತವಾಗಿ ಮನೆಗೆ ಅತಿಥಿಗಳು ಆಗಮಿಸುವರು. ಆರ್ಥಿಕ ಅಭಿವೃದ್ಧಿಗಾಗಿ ದಂಪತಿಗಳಿಬ್ಬರೂ ಶ್ರಮಿಸಬೇಕಾಗುತ್ತದೆ. ಹೂಡಿಕೆಗಳು ನಿರೀಕ್ಷಿತ ಲಾಭ ತಂದುಕೊಡದಿರಬಹುದು.
ಮಕರ ರಾಶಿ
ವಿಫಲತೆಗಳು ನಿಮ್ಮಲ್ಲಿ ಮತ್ತಷ್ಟು ಸಾಧಿಸುವ ಛಲವನ್ನು ತುಂಬಲಿವೆ. ಕಚೇರಿಯ ಒತ್ತಡಗಳ ನಡುವೆಯೂ ಆರಾಮಾಗಿ ಕೆಲಸ ನಿರ್ವಹಿಸುವಿರಿ. ನಿಮ್ಮ ವಾಕ್ಚಾತುರ್ಯ ಎಲ್ಲರ ಗಮನ ಸೆಳೆಯಲಿದೆ. ಸುಳ್ಳು ಅಪವಾದಗಳಿಗೆ ತಲೆಕೆಡಿಸಿಕೊಳ್ಳದೆ, ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ.
ಕುಂಭ ರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕೈಸೇರದಿರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿ ವಹಿಸಿ. ನೇರ ನುಡಿಗಳು ವ್ಯವಹಾರಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ. ನೂತನ ಉದ್ಯಮದ ಹುಡುಕಾಟದಲ್ಲಿರುವವರಿಗೆ ಅನ್ವೇಷಣೆ ಅನಿವಾರ್ಯ.
ಮೀನ ರಾಶಿ
ಸಮಾಜದಲ್ಲಿ ಮನ್ನಣೆ ಸಿಕ್ಕರೂ, ಅದರಿಂದ ಅಂತರ ಕಾಯ್ದುಕೊಳ್ಳಲು ಬಯಸುವಿರಿ. ಓದು ಹಾಗೂ ಅಧ್ಯಯನದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಬರಬೇಕಾದ ಹಣ ಕೈಸೇರಲು ವಿಳಂಬವಾಗಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುವುದರಿಂದ ವೈಯಕ್ತಿಕ ಆಸಕ್ತಿಗಳು ಹಿನ್ನೆಲೆಗೆ ಸರಿಯಲಿವೆ. ವ್ಯವಹಾರದಲ್ಲಿ ಸಡಿಲತೆ ಬೇಡ.