ನಿಮ್ಮ ಕೂದಲು ಹಾಳಾಗಬಾರದು ಎಂದಾದರೆ ಈ ನಾಲ್ಕು ಎಣ್ಣೆಗಳನ್ನು ಮಾತ್ರ ಬಳಸಿ

ಕೂದಲಿನ ಸಮಸ್ಯೆಯನ್ನು ತಡೆಗಟ್ಟಲು ಎಣ್ಣೆಯ ಮಸಾಜ್ ಮಾಡುವುದು ಬಹಳ ಮುಖ್ಯ. ಆದರೆ ಯಾವ ಎಣ್ಣೆಯನ್ನು ಮಸಾಜ್ ಗೆ ಬಳಸುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಬೆಂಗಳೂರು : ದಪ್ಪ ಮತ್ತು ಹೊಳೆಯುವ ಕೂದಲು ಪ್ರತಿಯೊಬ್ಬರಿಗೂ ಇಷ್ಟ. ದಪ್ಪ ಮತ್ತು ಹೊಳೆಯುವ ಕೂದಲು ಎಂದರೆ ಆರೋಗ್ಯಕರ ಕೇಶ. ಆದರೆ, ನಮ್ಮ ಕೂದಲು ಅನೇಕ ಬಾರಿ ಹವಾಮಾನದ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಕೂದಲು ತುಂಬಾ ಒರಟು ಮತ್ತು ಹಾನಿಗೊಳಗಾಗುತ್ತದೆ. ಅನೇಕರು ಕೂದಲನ್ನು ಧೂಳು ಪ್ರದೂಷಣೆಗಳಿಂದ ರಕ್ಷಿಸಲು ಸ್ಕಾರ್ಫ್ನ ಅನ್ನು ಬಳಸುತ್ತಾರೆ. ಕೂದಲಿನ ಆರೋಗ್ಯ ಕಾಪಾಡಲು ನಾನಾ ರೀತಿಯ ಎಣ್ಣೆಯ ಸಹಾಯದಿಂದ ಮಸಾಜ್ ಮಾಡಲಾಗುತ್ತದೆ. ಕೂದಲಿನ ಸಮಸ್ಯೆಯನ್ನು ತಡೆಗಟ್ಟಲು ಎಣ್ಣೆಯ ಮಸಾಜ್ ಮಾಡಬೇಕಾಗುತ್ತದೆ. ಆದರೆ, ಯಾವ ಎಣ್ಣೆಯನ್ನು ಮಸಾಜ್ ಗೆ ಬಳಸುತ್ತೇವೆ ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿರುತ್ತದೆ. 

ಹಾನಿಗೊಳಗಾದ ಕೂದಲಿಗೆ  ಬಳಸಿ ಈ ಎಣ್ಣೆ : 
1. ಜೊಜೊಬಾ ಎಣ್ಣೆ : 
ಜೊಜೊಬಾ ಎಣ್ಣೆ ನಿಮ್ಮ ಕೂದಲನ್ನು ಆರ್ಧ್ರಕಗೊಳಿಸುವ ಮತ್ತು ಪೋಷಿಸುವ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ, ಹಾನಿಗೊಳಗಾದ ಕೂದಲನ್ನು ತೊಡೆದುಹಾಕಬಹುದು. ಈ ಎಣ್ಣೆಯನ್ನು  ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಬೇಕು. ಹೀಗೆ ಎಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿದ ಅರ್ಧ ಗಂಟೆಯ ನಂತರ ಕೂದಲು ತೊಳೆಯಿರಿ.

2. ಆಲಿವ್ ಎಣ್ಣೆ :
ಆಲಿವ್ ಎಣ್ಣೆಯು ಕೂದಲಿಗೆ ಅಮೃತದಂತೆ ಕೆಲಸ ಮಾಡುತ್ತದೆ. ಅದರ ಪರಿಣಾಮವು ಕೂದಲಿನ ಮೇಲೆ ಧನಾತ್ಮಕವಾಗಿರುತ್ತದೆ. ಇದು ಹಾನಿಗೊಳಗಾದ ಕೂದಲನ್ನು ಸರಿ ಮಾಡುವುದು ಮಾತ್ರವಲ್ಲ, ಕೂದಲನ್ನು ತುಂಬಾ ಮೃದುವಾಗಿಸುತ್ತದೆ. ಈ ಎಣ್ಣೆಯನ್ನು ನಿಮ್ಮ ಕೈಗಳಿಗೆ ಹಚ್ಚಿ ಮತ್ತು ಕೂದಲಿನ ಬೇರುಗಳಲ್ಲಿ ಮಸಾಜ್ ಮಾಡಿ. ನಂತರ ಕೂದಲನ್ನು ತೊಳೆದು ಒಣಗಿಸಿ.

3. ತೆಂಗಿನ ಎಣ್ಣೆ:
ಹಾನಿಗೊಳಗಾದ ಕೂದಲಿಗೆ ತೆಂಗಿನ ಎಣ್ಣೆಯನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಏಕೆಂದರೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ನೀವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾದರೆ ಶುದ್ದ ತೆಂಗಿನ ಎಣ್ಣೆಯನ್ನು ಬಳಸಿ. ಸ್ನಾನ ಮಾಡುವ ಸುಮಾರು 30 ನಿಮಿಷಗಳ ಮೊದಲು ಈ ಈ ನೈಸರ್ಗಿಕ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ತೆಂಗಿನೆಣ್ಣೆ ಹಚ್ಚುವ ಮುನ್ನ ಅದನ್ನು ಸ್ವಲ್ಪ ಬಿಸಿ ಮಾಡಿ.

4. ಈರುಳ್ಳಿ ಎಣ್ಣೆ:
ಈರುಳ್ಳಿ ಎಣ್ಣೆಯು ಒಣ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಕೂದಲ ಬೆಳವಣಿಗೆಯನ್ನು ಸುಧಾರಿಸುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ. ಮನೆಯಲ್ಲಿ ಇದನ್ನು ತಯಾರಿಸಲು, ಒಂದು ಬಟ್ಟಲಿನಲ್ಲಿ ಈರುಳ್ಳಿ ರಸವನ್ನು ತೆಗೆದುಕೊಂಡು ನಂತರ ಅದರಲ್ಲಿ ತೆಂಗಿನ ಎಣ್ಣೆಯ ಜೊತೆ ಮಿಕ್ಸ್ ಮಾಡಿ. ಮಂದ ಉರಿಯಲ್ಲಿ ಈ ಮಿಶ್ರಣವನ್ನು ಬಿಸಿ ಮಾಡಿ. ಈ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡುತ್ತಾ ಬನ್ನಿ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)

Source: https://zeenews.india.com/kannada/health/use-these-four-oil-to-get-rid-of-hair-problems-hair-care-tips-152707

Leave a Reply

Your email address will not be published. Required fields are marked *