ಚಿತ್ರದುರ್ಗದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ (ರಾಜ್ಯ ಪಠ್ಯಕ್ರಮ ವಿಭಾಗ) ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸೆಪ್ಟೆಂಬರ್ 21, 2026 ರಂದು ನಡೆದ 17 ವರ್ಷದೊಳಗಿನ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಹಾಗೂ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಈ ವಿದ್ಯಾರ್ಥಿಗಳು, ಮುಂದಿನ ಹಂತದ (ಜಿಲ್ಲಾ ಹಾಗೂ ವಿಭಾಗ ಮಟ್ಟದ) ಸ್ಪರ್ಧೆಗಳಿಗೆ ಅರ್ಹತೆ ಪಡೆದಿದ್ದಾರೆ.
ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರು (ಅಥ್ಲೆಟಿಕ್ಸ್)
| ವಿದ್ಯಾರ್ಥಿಯ ಹೆಸರು | ತರಗತಿ | ಕ್ರೀಡಾ ಸ್ಪರ್ಧೆ | ಸ್ಥಾನ |
| ಸಮೃಧ್ ಪಿ.ಸಿ | 10ನೇ ತರಗತಿ | 800ಮೀ, 1500ಮೀ, 3000ಮೀ, 4×400 ಮೀ ರಿಲೇ | ಪ್ರಥಮ |
| ಇಂದುಧರ್ ಆರ್ | 10ನೇ ತರಗತಿ | 110ಮೀ ಹರ್ಡಲ್ಸ್, 400ಮೀ ಹರ್ಡಲ್ಸ್, 4×400 ಮೀ ರಿಲೇ | ಪ್ರಥಮ |
| ಸುಹಾಸ್ ಡಿ.ವಿ | 10ನೇ ತರಗತಿ | 4×400 ಮೀ ರಿಲೇ | ಪ್ರಥಮ |
| ವಿಕಾಸ ನಾಯಕ ಕೆ.ಎಂ | 9ನೇ ತರಗತಿ | 4×400 ಮೀ ರಿಲೇ | ಪ್ರಥಮ |
| ಉಮಾಶಂಕರ್ ಪಿ.ಜಿ | 9ನೇ ತರಗತಿ | 400ಮೀ ಹರ್ಡಲ್ಸ್ | ದ್ವಿತೀಯ |
ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾದವರು (ಶಟಲ್ ಬ್ಯಾಡ್ಮಿಂಟನ್)
| ವಿದ್ಯಾರ್ಥಿಯ ಹೆಸರು | ತರಗತಿ | ಕ್ರೀಡಾ ಸ್ಪರ್ಧೆ | ಸ್ಥಾನ |
| ಮಮ್ಮು ಟಿ | 10ನೇ ತರಗತಿ | ಶಟಲ್ ಬ್ಯಾಡ್ಮಿಂಟನ್ | ಪ್ರಥಮ |
| ಅಕ್ಷರ ಎಂ | 9ನೇ ತರಗತಿ | ಶಟಲ್ ಬ್ಯಾಡ್ಮಿಂಟನ್ | ಪ್ರಥಮ |
| ಸೈಯದಾ ಅನುಮ್ | 9ನೇ ತರಗತಿ | ಶಟಲ್ ಬ್ಯಾಡ್ಮಿಂಟನ್ | ಪ್ರಥಮ |
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಬಲ್ಯ ಮೆರೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುವ ಈ ಎಲ್ಲಾ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ. ವಿಜಯ್ ಕುಮಾರ್, ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ್, ಶ್ರೀಮತಿ ಸುನಿತಾ ಪಿ.ಸಿ., ಐಸಿಎಸ್‌ಇ ವಿಭಾಗದ ಪ್ರಾಚಾರ್ಯೆ ಬೀನಾ ಎ. ಜಾನ್, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎನ್.ಜಿ. ಹಾಗೂ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಶ್ಲಾಘಿಸಿ, ಶುಭಕೋರಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j