Virat Kohli: ಏಟಿಗೆ ಎದಿರೇಟು…ಗಂಭೀರ್​ ವಿರುದ್ಧ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ

IPL 2023 LSG vs RCB: ಏಪ್ರಿಲ್ 10 ರಂದು..ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು 1 ವಿಕೆಟ್​ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲಿಸಿತ್ತು.ಈ ಗೆಲುವಿನ ಸಂಭ್ರಮದಲ್ಲಿದ್ದ ಲಕ್ನೋ ಸೂಪರ್​ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಆರ್​ಸಿಬಿ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದ್ದರು.ಇದೀಗ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೂ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ ಅವರ ನಡೆಗೆ ಪ್ರತ್ಯುತ್ತರ ನೀಡಿದ್ದಾರೆ. ಅದು ಕೂಡ ಅದೇ ಸ್ಟೈಲ್​ನಲ್ಲಿ ಪ್ರೇಕ್ಷಕರತ್ತ ಸನ್ನೆ ಮಾಡುವ ಮೂಲಕ ಎಂಬುದು ವಿಶೇಷ.ಆರ್​ಸಿಬಿ ನೀಡಿದ 127 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಲಕ್ನೋ ತಂಡವು ಮೊದಲ ಓವರ್​ನಲ್ಲೇ ಕೈಲ್ ಮೇಯರ್ಸ್ ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಕ್ರೀಸ್​ಗೆ ಆಗಮಿಸಿದ ಕೃನಾಲ್ ಪಾಂಡ್ಯ ಸಿರಾಜ್ ಅವರ ಓವರ್​ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿ ಅಬ್ಬರಿಸಿದ್ದರು. ಇತ್ತ ಪಾಂಡ್ಯ ಅಬ್ಬರದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಆದರೆ ಮರು ಓವರ್​ನಲ್ಲೇ ಮ್ಯಾಕ್ಸ್​ವೆಲ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಬೌಂಡರಿ ಲೈನ್​ನಲ್ಲಿದ್ದ ವಿರಾಟ್ ಕೊಹ್ಲಿ ಕ್ಯಾಚ್ ನೀಡಿದರು. ಅತ್ತ ಕ್ಯಾಚ್ ಹಿಡಿದ ಬೆನ್ನಲ್ಲೇ ಕಿಂಗ್ ಕೊಹ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಮುಖ ಮಾಡಿದರು.ಅಲ್ಲದೆ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೌತಮ್ ಗಂಭೀರ್ ​ಆರ್​ಸಿಬಿ ಅಭಿಮಾನಿಗಳಿಗೆ ಹೇಗೆ ಖಡಕ್ ಸೂಚನೆ ನೀಡಿದ್ದಾರೋ ಅದೇ ಮಾದರಿಯಲ್ಲಿ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದರು.ಇದೀಗ ಲಕ್ನೋ ಸೂಪರ್ ಜೈಂಟ್ಸ್​ ಪ್ರೇಕ್ಷಕರಿಗೆ ವಿರಾಟ್ ಕೊಹ್ಲಿ ನೀಡಿ ಖಡಕ್ ಸೂಚನೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳು ಕೊಹ್ಲಿಯ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಆದರೆ ಇತ್ತ ಆರ್​ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಯ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಇದು ಏಟಿಗೆ ಎದಿರೇಟು ಎಂದು ಫುಲ್ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

source https://tv9kannada.com/photo-gallery/cricket-photos/ipl-2023-virat-kohli-take-revenge-on-gautam-gambhir-kannada-news-zp-au50-567919.html

Leave a Reply

Your email address will not be published. Required fields are marked *